ನ್ಯೂಸ್

ದಿನಕ್ಕೆ 200 ಸಿಗರೇಟ್​ ಸೇದುತ್ತಿದ್ದೆ ಆದರೀಗ..; ಬಿಗ್​ ಬಿ ರಿವೀಲ್​ ಮಾಡಿದ ಸಂಗತಿ ಏನು ಗೊತ್ತಾ? | Amitabh Bachchcan

ಮುಂಬೈ: ಕಲರ್​ಫುಲ್​ ಜಗತ್ತು ಸಿನಿಮಾರಂಗದಲ್ಲಿ ಕೆಲವರು ಧೂಮಪಾನ ಮಾಡುವುದು ಸ್ಟೇಟಸ್​ ಸಿಂಬಲ್​ ಎಂದು ಪರಿಗಣಿಸುತ್ತಾರೆ. ಸಿನಿಮಾದಲ್ಲಿ ತಮ್ಮ ನೆಚ್ಚಿನ ಸ್ಟಾರ್​ಗಳು ಸಿಗರೇಟ್​ ಸೇದುವುದನ್ನು ನೋಡುತ್ತಾ ಅಭಿಮಾನಿಗಳು ಅದನ್ನು ಫಾಲೋ ಮಾಡುತ್ತಾ ಕೂಲ್​ ಎಂದುಕೊಳ್ಳುವುದು ಇದೆ. ಆದರೆ ನಿಜ ಜೀವನದಲ್ಲಿ ಸಿಗರೇಟ್ ಸೇದಲು ಇಷ್ಟಪಡದ ಕೆಲವು ಸೆಲಿಬ್ರಿಟಿಗಳಿದ್ದಾರೆ. ಈ ಪಟ್ಟಿಯಲ್ಲಿ ಬಿಟೌನ್​ ​​​ಆ್ಯಂಗ್ರಿ ಯಂಗ್​ಮ್ಯಾನ್ ಅಮಿತಾಭ್​​ ಬಚ್ಚನ್(Amitabh Bachchcan)​​ ಹೆಸರು ಅಗ್ರಸ್ಥಾನದಲ್ಲಿದೆ. ಒಂದು ಕಾಲದಲ್ಲಿ ಬಹಳಷ್ಟು ಸಿಗರೇಟ್​ ಮತ್ತು ಮದ್ಯ ಸೇವಿಸುತ್ತಿದ್ದ ಬಿಗ್​ಬಿ ನಂತರ ಅದೆರಡನ್ನೂ ತ್ಯಜಿಸಿದ್ದಾರೆ.

1980ರಲ್ಲಿ ಸಂದರ್ಶನವೊಂದರಲ್ಲಿ ಅಮಿತಾಭ್​ ಬಚ್ಚನ್​ ಅವರು ಹೇಳಿರುವ ಕೆಲವು ಅವರ ಸ್ವವಿಚಾರಗಳು ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಚೈನ್-ಸ್ಮೋಕರ್, ನಾನ್​​ವೆಜ್​ ತಿನ್ನುವ ಮತ್ತು ಕುಡಿಯುವವರ ಬಗ್ಗೆ ಅಮಿತಾಭ್​ ಮಾತನಾಡಿದ್ದಾರೆ ಜತಗೆ ಅದನ್ನು ತ್ಯಜಿಸಿದ್ದು ಏಕೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.

ನಾನು ಧೂಮಪಾನ ಮಾಡುವುದಿಲ್ಲ, ಕುಡಿಯುವುದಿಲ್ಲ ಅಥವಾ ನಾನ್​ವೆಜ್​​ ತಿನ್ನುವುದಿಲ್ಲ. ಇದು ಧಾರ್ಮಿಕ ವಿಷಯವೆಂದಲ್ಲ ಬದಲಿಗ ಅದು ನನ್ನ ವೈಯಕ್ತಿಕ ಆಯ್ಕೆಯಾಗಿದೆ. ನಮ್ಮ ಕುಟುಂಬದಲ್ಲಿ ನನ್ನ ತಂದೆ ಸಸ್ಯಾಹಾರಿ ಆಗಿದ್ದರೂ ಆದರೆ ನನ್ನ ತಾಯಿ ನಾನ್​​ವೆಜ್​ ತಿನ್ನುತ್ತಿದ್ದರು. ಹಾಗೆಯೇ ಅದೇ ರೀತಿ ಜಯಾ ನಾನ್​​ವೆಜ್​​ ತಿನ್ನುತ್ತಾಳೆ, ನಾನು ತಿನ್ನುವುದಿಲ್ಲ ಎಂದು ಹೇಳಿದ್ದರು.

ವಾಸ್ತವವಾಗಿ ನಾನು ಕುಡಿಯುತ್ತಿದೆ, ಧೂಮಪಾನ ಮಾಡುತ್ತಿದ್ದೆ, ನಾನ್​ವೆಜ್​ ತಿನ್ನುತ್ತಿದೆ, ಆದರೀಗ ಅದನ್ನೆಲ್ಲಾ ತ್ಯಜಿಸಿದ್ದೇನೆ ಎಂದು ತಿಳಿಸಿದರು. ಕಲ್ಕತ್ತಾದಲ್ಲಿದ್ದಾಗ ನಾನು ದಿನಕ್ಕೆ 200 ಸಿಗರೇಟ್ ಸೇದುತ್ತಿದ್ದೆ, ಬಾಂಬೆಗೆ ಬಂದ ನಂತರ ಅದನ್ನು ತ್ಯಜಿಸಿದೆ. ಕೈಗೆ ಸಿಗುವ ಏನನ್ನಾದರೂ ನಾನು ಕುಡಿಯುತ್ತಿದ್ದೆ ಆದರೆ ಕೆಲವು ವರ್ಷಗಳ ಹಿಂದೆ ನಾನು ನಿಜವಾಗಿಯೂ ಅದರ ಅಗತ್ಯವಿಲ್ಲ ಎಂದು ನಿರ್ಧರಿಸಿದೆ. ಈಗೀನ ಕೆಲವು ನನ್ನ ಅಭ್ಯಾಸಗಳಿಂದ ವಿದೇಶದಲ್ಲಿ ಶೂಟಿಂಗ್​​ನಲ್ಲಿರುವಾಗ ಹೊರತುಪಡಿಸಿದರೆ ಬೇರೆ ಸಮಯದಲ್ಲಿ ಯಾವುದೇ ತೊಂದರೆಯನ್ನು ಉಂಟು ಮಾಡುವುದಿಲ್ಲ. ವಿದೇಶದಲ್ಲಿ ವೆಜ್​​ ಆಹಾರ ಸಿಗುವುದು ಕಷ್ಟ ಎಂದಿದ್ದಾರೆ.

42 ವರ್ಷಗಳ ಹಿಂದೆ ದಿನಕ್ಕೆ ಸುಮಾರು 200 ಸಿಗರೇಟ್​ ಸೇದುತ್ತಿದ್ದ ಬಿಗ್​ಬಿ ಅವರ ಈ ಬದಲಾವಣೆಗೆ ಕಾರಣವಾಗಿದ್ದು, ಒಂದು ದಿನ ಯಾರೋ ಅಮಿತಾಭ್​​ ಅವರಿಗೆ ನೀನು ಎಂದಿಗೂ ಮದ್ಯಪಾನ ಮತ್ತು ಸಿಗರೇಟ್ ಸೇದುವುದನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದು ಹೇಳಿದರಂತೆ. ಅದೇ ಕ್ಷಣದಲ್ಲಿ ಅಮಿತಾಭ್​​ ಬಚ್ಚನ್ ಮದ್ಯಪಾನ ಹಾಗೂ ಧೂಮಪಾನ ಈ ಎರಡೂ ಕೆಟ್ಟ ಅಭ್ಯಾಸಗಳನ್ನು ಬಿಡಲು ನಿರ್ಧರಿಸಿ ಶಾಶ್ವತವಾಗಿ ತ್ಯಜಿಸಿದ್ದಾರೆ.

ಬಿಗ್ ಬಿ ಅಮಿತಾಭ್​​ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಕೆಲವು ವರ್ಷಗಳ ಹಿಂದೆ ಚಹಾ, ಕಾಫಿ ಮತ್ತು ತಂಪು ಪಾನೀಯಗಳನ್ನು ಕುಡಿಯುವುದನ್ನು ನಿಲ್ಲಿಸಿದ್ದಾರೆ. ಅಮಿತಾಭ್​ ಬಚ್ಚನ್​​ ಕಲ್ಕಿ 2898 ಎಡಿ ಸಿನಿಮಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡರು. ಚಿತ್ರದಲ್ಲಿನ ಅವರ ಅದ್ಭುತ ನಟನೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರ ಮುಂದಿನ ಬಹುನಿರೀಕ್ಷಿತ ಸಿನಿಮಾ ವೆಟ್ಟೈಯಾನ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ತಮಿಳಿನಲ್ಲಿ ಅವರ ಚೊಚ್ಚಲ ಚಿತ್ರವಾಗಿದೆ. (ಏಜೆನ್ಸೀಸ್​)