ನ್ಯೂಸ್

ರಜನಿಕಾಂತ್​​ ಕುರಿತು ಸ್ವಾರಸ್ಯಕರ ರಹಸ್ಯ ಬಿಚ್ಚಿಟ್ಟ ಬಿಗ್​ಬಿ; ಅಮಿತಾಭ್​ ಹೇಳಿದ್ದೇನು ಗೊತ್ತಾ?

ಚೆನ್ನೈ: ಬಾಲಿವುಡ್ ಬಿಗ್​ಬಿ ಅಮಿತಾಭ್​ ಬಚ್ಚನ್​ ಹಾಗೂ ಟಾಲಿವುಡ್​ ಸೂಪರ್​ಸ್ಟಾರ್​ ರಜನಿಕಾಂತ್​​​​ ವೆಟ್ಟಯಾನ್​ ಸಿನಿಮಾದಲ್ಲಿ ನಟಿಸುತ್ತಿರುವುದು ಗೊತ್ತೆ ಇದೆ. ಈ ಸಿನಿಮಾದ ಕುರಿತು ಅಭಿಮಾನಿಗಳಿಗೆ ಭಾರೀ ನಿರೀಕ್ಷೆ ಇರುವುದಂತು ಸುಳ್ಳಲ್ಲ. ಸಿನಿಮಾ ಅಕ್ಟೋಬರ್​ 10ರಂದು ಬಿಡುಗಡೆಯಾಗಲಿದೆ. ಇತ್ತೀಚೆಗೆ ಸಿನಿಮಾದ ಆಡಿಯೋ ಬಿಡುಗಡೆ ಸಮಾರಂಭ ನಡೆಯಿತು. ಅದರಲ್ಲಿ ಅಮಿತಾಭ್​​​ ರಜನಿಕಾಂತ್​ ಅವರ ಕೆಲವು ಸಿಕ್ರೇಟ್​ಗಳನ್ನು ಬಹಿರಂಗಪಡಿಸಿದ್ದಾರೆ.

ಅಂದ್ಹಾಗೆ ಅಮಿತಾಭ್​ ಬಚ್ಚನ್​ ಮತ್ತು ರಜನಿಕಾಂತ್​​ ಒಟ್ಟಿಗೆ ನಟಿಸುತ್ತಿರುವುದು ಇದೇ ಮೊದಲೆನಲ್ಲ. ಈ ಹಿಂದೆ 'ಗಿರ್ಫ್ತಾರ್', 'ಅಂಧ ಕಾನೂನ್', 'ಹಮ್' ಸೇರಿದಂತೆ ಹಲವು ಚಿತ್ರಗಳಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದಾರೆ. 33 ವರ್ಷಗಳ ಬಳಿಕ ಈ ಸೂಪರ್ ಜೋಡಿ ಮತ್ತೆ ವೆಟ್ಟಯಾನ್​ ಸಿನಿಮಾದಲ್ಲಿ ಒಟ್ಟಿಗೆ ತೆರೆಮೇಲೆ ಕಾಣಿಸಿಕೊಳ್ಳಲಿದೆ. ಸಿನಿಮಾದ ಈವೆಂಟ್​ನಲ್ಲಿ ರಜನಿಕಾಂತ್​​ ಸೇರಿದಂತೆ ಚಿತ್ರದ ಎಲ್ಲರೂ ಪಾಲ್ಗೊಂಡಿದ್ದರು, ಆದರೆ ಅಮಿತಾಭ್​ ಮಾತ್ರ ಗೈರಾಗಿದ್ದರು. ಆದರೆ ರಜನಿಕಾಂತ್​ ಮೇಲಿರುವ ಒಲವನ್ನು ವಿಡಿಯೋ ಮೂಲಕ ಅಮಿತಾಭ್​ ಕಳುಹಿಸಿಕೊಟ್ಟಿದ್ದರು.

ಬಾಲಿವುಡ್​​ ಬಿಗ್​ಬಿ ಅವರು ರಜನಿಕಾಂತ್​ ಅವರನ್ನು ಸಾಕಷ್ಟು ಹೊಗಳಿದ್ದಾರೆ. 82ನೇ ವಯಸ್ಸಿನಲ್ಲೂ ಅವರ 10 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ ಎಂದು ತಿಳಿಸಿದ್ದಾರೆ. ಇದೇ ವೇಳೆ ರಜನಿಕಾಂತ್​ ಎಷ್ಟು ಡೌನ್​​ ಟು ಅರ್ಥ್​ ಎಂದು ವಿವರಿಸಲು ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ. 1991ರಲ್ಲಿ ತೆರೆಕಂಡ 'ಹಮ್' ಚಿತ್ರದಲ್ಲಿ ಈ ಇಬ್ಬರೂ ಕೊನೆಯದಾಗಿ ಒಟ್ಟಿಗೆ ಕೆಲಸ ಮಾಡಿದ್ದರು. ಈ ಸಿನಿಮಾದ ಚಿತ್ರೀಕರಣ ವೇಳೆ ಬಿಡುವಿದ್ದಾಗ ನಾನು ನನ್ನ ಎಸಿ ವಾಹನದಲ್ಲಿ ವಿಶ್ರಾಂತಿ ಪಡೆಯುತ್ತಿದೆ. ಆದ್ರೆ ರಜನಿಕಾಂತ್​ ವಿರಾಮದ ಸಮಯದಲ್ಲಿ ನೆಲದ ಮೇಲೆ ಮಲಗುತ್ತಿದ್ದರು. ಅವರು ತುಂಬಾ ಸರಳವಾಗಿರುವುದನ್ನು ನೋಡಿ ನಾನು ವಾಹನದಿಂದ ಹೊರಬಂದು ವಿಶ್ರಾಂತಿ ಪಡೆಯುತ್ತಿದ್ದೆ ಎಂದು ಹೇಳಿದ್ದಾರೆ.

ನನ್ನ ತಮಿಳಿನ ಚೊಚ್ಚಲ ಚಿತ್ರದಲ್ಲಿ ಎಲ್ಲಾ ಸ್ಟಾರ್‌ಗಳ ಸುಪ್ರೀಂ ರಜನಿಕಾಂತ್ ಅವರೊಂದಿಗೆ ಕೆಲಸ ಮಾಡಲು ನನಗೆ ತುಂಬಾ ಗೌರವ ಎಂದು ಅಮಿತಾಭ್​​ ಹೇಳಿದರು. ವೆಟ್ಟಯಾನ್ ಚಿತ್ರದಲ್ಲಿ ರಜನಿಕಾಂತ್ ಮತ್ತು ಅಮಿತಾಭ್​​ ಬಚ್ಚನ್ ಜತೆಗೆ ಮಂಜು ವಾರಿಯರ್, ರಿತಿಕಾ ಸಿಂಗ್, ದುಶ್ರಾ ವಿಜಯನ್, ರಾಣಾ ದಗ್ಗುಬಾಟಿ ಮತ್ತು ಫಹದ್ ಫಾಸಿಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. (ಏಜೆನ್ಸೀಸ್​​)