ನ್ಯೂಸ್

ಟೈ ಖರೀದಿಸಲು ಸಾಧ್ಯವಿಲ್ಲ ಎಂಬಂತೆ ಅಮಿತಾಭ್​ ಜತೆ ಅನುಚಿತ ವರ್ತನೆ; ಬಿಗ್​ಬಿ ರಿಯಾಕ್ಷನ್​ಗೆ ಅಂಗಡಿಯವನು ಶಾಕ್​​..

ಮುಂಬೈ: ಬಾಲಿವುಡ್​​ನ ಆ್ಯಂಗ್ರಿ ಯಂಗ್​ಮ್ಯಾನ್​​ ಯಾರಿಗೆ ಗೊತ್ತಿಲ್ಲ ಹೇಳಿ. ಅವರ ಧ್ವನಿ ಮತ್ತು ನಟನೆಗೆ ಫಿದಾ ಆಗದವರೆ ಇಲ್ಲ. ಇಷ್ಟು ವಯಸ್ಸಾಗಿದ್ದರೂ ತಮ್ಮ ಕೆಲಸದಲ್ಲಿ ಸದಾ ಬಿಸಿಯಾಗಿದರುವ ನಟ. ಭಾರತದಲ್ಲಿ ಮಾತ್ರವಲ್ಲ ಪ್ರಪಂಚದಾದ್ಯಂತ ಅಮಿತಾಭ್​ ಬಚ್ಚನ್​​ ಹೆಸರು ಗಳಿಸಿದ್ದಾರೆ. ಬಿಟೌನ್​ ಬಿಗ್​​ಬಿ ಇತ್ತೀಚೆಗೆ ಅಂಗಡಿಯವನೊಬ್ಬ ಅವರಿಗೆ ಮಾಡಿದ ಅವಮಾನವನ್ನು ನೆನಪಿಸಿಕೊಂಡಿದ್ದಾರೆ.

ಅಮಿತಾಭ್​​ ಬಚ್ಚನ್​​ ಖಾಸಗಿ ವಾಹಿನಿಯಲ್ಲಿ ಕಾರ್ಯಕ್ರಮವೊಂದನ್ನು ನಿರೂಪಣೆ ಮಾಡುತ್ತಿದ್ದಾರೆ. ಅದರಲ್ಲಿ ಬಿಗ್​ಬಿಗೆ ನೀವು ಶಾಪಿಂಗ್​​ ಹೋದಾಗ ಖರೀದಿಸುವ ವಸ್ತುಗಳ ಬೆಲೆಯನ್ನು ನೋಡುತ್ತೀರಾ ಎಂದು ಕೇಳಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಅಮಿತಾಭ್​​ ಶಾಪಿಂಗ್​ ವೇಳೆ ತಾವು ಎದುರಿಸಿದ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ.

ವಸ್ತುಗಳನ್ನು ಖರೀದಿಸುವಾಗ ಬೆಲೆ ನೋಡುವುದು ಸಹಜ ವಿಷಯ. ನಾವು ಲಂಡನ್​​ನಲ್ಲಿ ಒಮ್ಮೆ ಶಾಪಿಂಗ್​ ಮಾಡಲು ಹೋಗಿದ್ದಾಗ, ಅಂಗಡಿಗಳಲ್ಲಿ ಕೆಲ ವಸ್ತುಗಳನ್ನು ಖರೀದಿಸುತ್ತಿದ್ದೇವು. ಅದೇ ವೇಳೆ ಅಲ್ಲೆ ಇದ್ದ ಟೈ ಮೇಲೆ ನನ್ನ ಗಮನ ಹರಿಯಿತು. ನಾನು ಅದನ್ನು ತೆಗೆದುಕೊಂಡು ನೋಡುತ್ತಿದ್ದೆ. ಅಂಗಡಿಯವನ್ನು ಅಲ್ಲಿಗೆ ಬಂದು ಇದು 120 ಪೌಂಡ್​​ ಎಂದು ಹೇಳಿದ. ಅವನ ಧ್ವನಿ ನಮಗೆ ಅದನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ ಎಂದು ಸೂಚಿಸುತ್ತಿರುವಂತೆ ಇತ್ತು.

ಬಳಿಕ ಅಮಿತಾಭ್​​ ಅವರು ರಿಯಾಕ್ಷನ್​​ ನೋಡಿ ಅಂಗಡಿಯವನೆ ಶಾಕ್​ ಆಗಿದ್ದಾನೆ. ಅಂಗಡಿಯನವ ಮಾತು ಕೇಳಿದ ಬಿಗ್​​ಬಿ ಹಿಂತಿರುಗಿ ಅವನನ್ನು ನೋಡಿ ಇದೇ ರೀತಿಯ 10 ಟೈಯನ್ನು ಪ್ಯಾಕ್​ ಮಾಡುವಂತೆ ಹೇಳಿದ್ದಾರೆ. ಈ ಘಟನೆಯನ್ನು ವಿವರಿಸಿದ ಬಳಿಕ ಅವರು, ಇಂತಹ ಕ್ಷಣಗಳು ನಮ್ಮ ಭಾರತೀಯ ಚೈತನ್ಯ ಮತ್ತು ಆತ್ಮವಿಶ್ವಾಸವನ್ನು ತೋರಿಸುವ ಪ್ರಾಮುಖ್ಯತೆಯನ್ನು ನನಗೆ ನೆನಪಿಸುತ್ತವೆ. ನಾವು ಕೆಲವೊಮ್ಮೆ ನಮ್ಮನ್ನು ಕಡಿಮೆ ಅಂದಾಜು ಮಾಡಬಾರದು ಅದನ್ನು ಸ್ಪಷ್ಟಪಡಿಸಬೇಕು ಎಂದು ಹೇಳಿದ್ದಾರೆ.

ಅಮಿತಾಭ್​ ಬಚ್ಚನ್​​ ಕಲ್ಕಿ 2898 ಎಡಿ ಸಿನಿಮಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡರು. ಚಿತ್ರದಲ್ಲಿನ ಅವರ ಅದ್ಭುತ ನಟನೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರ ಮುಂದಿನ ಬಹುನಿರೀಕ್ಷಿತ ಸಿನಿಮಾ ವೆಟ್ಟೈಯಾನ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ತಮಿಳಿನಲ್ಲಿ ಅವರ ಚೊಚ್ಚಲ ಚಿತ್ರವಾಗಿದೆ. (ಏಜೆನ್ಸೀಸ್​)