ನ್ಯೂಸ್

'ದಿ ಕೇರಳ ಸ್ಟೋರಿ' ಚಿತ್ರವನ್ನು ವೀಕ್ಷಿಸಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ!

ಬೆಂಗಳೂರು:  ದೇಶಾದ್ಯಂತ ವಿವಾದದ ಕಿಡಿ ಹೊತ್ತಿಸಿರುವ ಲವ್​ ಜಿಹಾದ್​ ಆಧಾರಿತ ಸಿನಿಮಾ ದಿ ಕೇರಳ ಸ್ಟೋರಿ ಚಿತ್ರವು ರಾಷ್ಟ್ರಮಟ್ಟದಲ್ಲಿ ಪರ-ವಿರೋಧದ ಚರ್ಚೆ ಹುಟ್ಟು ಹಾಕಿದೆ.

ಇನ್ನು ಚಿತ್ರದ ಕುರಿತು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ರಾಜ್ಯ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಕರ್ನಾಟಕ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಯುವ ಮೋರ್ಚಾ ರಾಷ್ಟ್ರಾಧ್ಯಕ್ಷ ಸಂಸದ ತೇಜಸ್ವಿ ಸೂರ್ಯ ಚಿತ್ರವನ್ನು ವೀಕ್ಷಿಸಲಿದ್ದಾರೆ.

ಹೆಣ್ಣು ಮಕ್ಕಳಿಗಾಗಿ ಮಾಡಿರುವ ಚಿತ್ರ

ಭಾನುವಾರ ಸಂಜೆ 8:45ರ ಸುಮಾರಿಗೆ ನಗರದ ಗರುಡ ಮಾಲ್​ನಲ್ಲಿ ನಡ್ಡಾ ಹಾಗೂ ತೇಜಸ್ವಿ ಸೂರ್ಯ ಚಿತ್ರ ವೀಕ್ಷಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ಟ್ವೀಟ್​ ಮಾಡಿರುವ ಸಂಸದ ತೇಜಸ್ವಿ ಸೂರ್ಯ ದಿ ಕೇರಳ ಸ್ಟೋರಿ ಚಿತ್ರವು ಈ ದೇಶದ ಇತರ ಭಾಗಗಳಲ್ಲಿನ ಸಾಮಾಜಿಕ ಸಮಸ್ಯೆ ಹಾಗೂ ದಾಖಲೆಗಳನ್ನು ಪ್ರತಿಬಿಂಬಿಸುವ ಸಿನಿಮಾ.

ಇದು ನಮ್ಮ ದೇಶದ ಹೆಣ್ಣು ಮಕ್ಕಳಿಗಾಗಿ ಮಹತ್ವದ ಸಂದೇಶವನ್ನು ಹೊಂದಿದೆ. ಚಿತ್ರವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಭಾನುವಾರ ಸಂಜೆ 8:45ಕ್ಕೆ ನಗರದ ಗರುಡ ಮಾಲ್​ನಲ್ಲಿ ಸಿನಿಮಾ ವೀಕ್ಷಿಸಲಿದ್ದಾರೆ.