More

    IPL 2023| ಸರ್ವಾಂಗೀಣ ಪ್ರದರ್ಶನ; ಗುಜರಾತ್​ ಟೈಟಾನ್ಸ್​​ಗೆ 56ರನ್​ ಜಯ

    ಅಹಮದಬಾದ್​: ಆರಂಭಿಕ ಬ್ಯಾಟ್ಸ್​​ಮ್ಯಾನ್​ಗಳ ಉತ್ತಮ ಜೊತೆಯಾಟ, ಬೌಲರ್​ಗಳ ಬಿಗಿ ದಾಳಿಯ ಪರಿಣಾಮವಾಗಿ ಗುಜರಾತ್​ ಟೈಟಾನ್ಸ್​ ತಂಡವು ಲಖನೌ ಸೂಪರ್​​ ಜೈಂಟ್ಸ್​ ವಿರುದ್ಧ 56ರನ್​ಗಳ ಜಯ ಗಳಿಸಿದೆ.

    ಸಹೋದರರ ಸವಾಲ್​ ಎಂದೇ ಪರಿಗಣಿಸಲ್ಪಟ್ಟಿದ್ದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಗುಜರಾತ್​​ 2 ವಿಕೆಟ್​ ನಷ್ಟಕ್ಕೆ 20 ಓವರ್​ಗಳಲ್ಲಿ 227ರನ್​ಗಳನ್ನು ಗಳಿಸಿತ್ತು.

    ಸಾಹ-ಗಿಲ್​ ಜೊತೆಯಾಟ

    ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಗುಜರಾತ್​ ತಂಡದ ಪರ ಆರಂಭಿಕರಾದ ವೃದ್ಧಿಮಾನ್​ ಸಾಹ(81 ರನ್​, 43 ಎಸೆತ, 10 ಬೌಂಡರಿ, 4 ಸಿಕ್ಸರ್​​), ಶುಭಮಾನ್ ಗಿಲ್​(94 ರನ್, 51 ಎಸೆತ, 2 ಬೌಂಡರಿ, 7 ಸಿಕ್ಸರ್​​) ಮೊದಲ ವಿಕೆಟ್​ಗೆ 142ರನ್​ಗಳ ಜೊತೆಯಾಟದ ಫಲವಾಗಿ 2 ವಿಕೆಟ್​ ನಷ್ಟಕ್ಕೆ 20 ಓವರ್​ಗಳಲ್ಲಿ 227 ರನ್​ಗಳಿಸಿತ್ತು.

    ಲಖನೌ ಪರ ಆವೇಶ್​ ಖಾನ್​(4-0-34-1), ಮೊಹಸಿನ್​ ಖಾನ್​(3-0-42-1), ಕೃಣಾಲ್​ ಪಾಂಡ್ಯ(4-0-38-0), ಯಶ್​ ಠಾಕೂರ್​(4-0-48-0), ರವಿ ಬಿಷ್ಣೊಯಿ(2-0-21-0), ಕೈಲ್​ ಮೇಯರ್ಸ್​(1-0-16-0), ಸ್ವಪ್ನಿಲ್​ ಸಿಂಗ್​(1-0-7-0), ಮಾಕರ್ಸ್​ ಸ್ಟೋಯಿನಿಸ್​(1-0-20-0) ರನ್​ ನೀಡಿ ವಿಕೆಟ್​ ಪಡೆದಿದ್ದಾರೆ.

    ಇದನ್ನೂ ಓದಿ: ‘ದಿ ಕೇರಳ ಸ್ಟೋರಿ’ ಚಿತ್ರದ ಕುರಿತು ಟೀಕೆ; ಟ್ವೀಟ್​ ಮೂಲಕ ತಿರುಗೇಟು ನೀಡಿದ ನಟಿ

    ಮೇಯರ್ಸ್​​-ಡಿಕಾಕ್​​ ಹೋರಾಟ ವ್ಯರ್ಥ

    228ರನ್​ಗಳ ಬೃಹತ್​ ಗುರಿ ಬೆನ್ನತ್ತಿದ್ದ ಲಖನೌ ಸೂಪರ್​ ಜೈಂಟ್ಸ್​ ತಂಡದ ಆರಂಭಿಕರಾದ ಕೈಲ್​ ಮೇಯರ್ಸ್​​(48 ರನ್​, 32 ಎಸೆತ, 7 ಬೌಂಡರಿ, 2 ಸಿಕ್ಸರ್​), ಕ್ವಿಂಟನ್​ ಡಿಕಾಕ್​(70 ರನ್​, 41 ಎಸೆತ, 7 ಬೌಂಡರಿ, 3 ಸಿಕ್ಸರ್​) 8.2 ಓವರ್​ಗಳಲ್ಲಿ 88ರನ್​ಗಳ ಉತ್ತಮ ಜೊತೆಯಾಟ ಗಳಿಸಿ ಈ ಜೋಡಿ ಬೇರ್ಪಟ್ಟಿತ್ತು.

    ಮೇಯರ್ಸ್​ ಔಟ್​ ಆದ ಬಳಿಕ ಬಂದ ಬ್ಯಾಟ್ಸ್​​ಮ್ಯಾನ್​ಗಳು ಗುಜರಾತ್​​ ಬೌಲಿಂಗ್​ ದಾಳಿಗೆ ನಲುಗಿ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲದ ಕಾರಣ ಲಖನೌ ಸೂಪರ್​ಜೈಂಟ್ಸ್​ ತಂಡವು 7 ವಿಕೆಟ್​ ನಷ್ಟಕ್ಕೆ 20 ಓವರ್​ಗಳಲ್ಲಿ 171 ರನ್​ಗಳಿಸಿ 56ರನ್​ಗಳ ಸೋಲೊಪ್ಪಿಕೊಂಡಿತ್ತು.

    ಗುಜರಾತ್​ ಪರ ಮೊಹಮ್ಮದ್​ ಶಮಿ(4-0-37-1), ಹಾರ್ದಿಕ್​ ಪಾಂಡ್ಯ(3-0-37-0), ರಶೀದ್​ ಖಾನ್​(4-0-34-1), ನೂರ್​ ಅಹಮದ್​(4-0-26-1), ಮೋಹಿತ್​ ಶರ್ಮಾ(4-0-29-4), ಅಲ್ಜಾರಿ ಜೋಸೆಫ್​​(1-0-5-0) ರನ್​ ನೀಡಿ ವಿಕೆಟ್​ ಪಡೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts