ನ್ಯೂಸ್

ಕತ್ತೆ ಹಾಲಿಗೆ ಭಾರೀ ಡಿಮ್ಯಾಂಡ್​; ಅತ್ಯದ್ಭುತ ಔಷಧೀಯ ಗುಣಗಳ ಬಗ್ಗೆ ನಿಮಗೆ ಗೊತ್ತಾ ?

ಬೆಂಗಳೂರು: ಹಸುವಿನ ಹಾಲು ಆರೋಗ್ಯಕ್ಕೆ ಒಳ್ಳೆಯದು ಎಂದು ನಾವು ಚಿಕ್ಕವರಿದ್ದಾಗ ಕೇಳಿದ್ದೇವು. ಲೀಟರ್ ಗಟ್ಟಲೇ ಹಸುವಿನ ಹಾಲು ಸೇವಿಸಲುವ ಬದಲು ಒಂದು ಚಮಚ ಕತ್ತೆ ಹಾಲು ಸೇವಿಸಿದರೆ ಅನಾರೋಗ್ಯ ಹತ್ತಿರ ಸುಳಿಯದು..! ಎನ್ನಲಾಗುತ್ತಿದೆ. ಈ ಕತ್ತೆ ಹಾಲು ಸೇವನೆಯಿಂದ ದೀರ್ಘಕಾಲದ ರೋಗಗಳು ಗುಣವಾಗುತ್ತವೆ ಎಂಬ ಪ್ರಚಾರದ ಹಿನ್ನೆಲೆಯಲ್ಲಿ ಜನರು ಹಾಲು ಖರೀದಿಸಲು ಮುಗಿಬಿದ್ದಿದ್ದಾರೆ.

ಕತ್ತೆ ಹಾಲಿನಲ್ಲಿರುವ ಪೋಷಕಾಂಶ: ಕತ್ತೆ ಹಾಲಿನಲ್ಲಿ ಜೀವಸತ್ವಗಳು, ಖನಿಜಗಳು ಮತ್ತು ಪ್ರೋಟೀನ್‌ಗಳನ್ನು ಒಳಗೊಂಡಂತೆ ಪ್ರಮುಖ ಪೋಷಕಾಂಶಗಳಿಂದ ತುಂಬಿರುತ್ತದೆ. ಈ ಪೋಷಕಾಂಶಗಳು ಅತ್ಯುತ್ತಮ ಆರೋಗ್ಯವನ್ನು ಉತ್ತೇಜಿಸಲು ಮತ್ತು ದೇಹಕ್ಕೆ ಚೈತನ್ಯವನ್ನು ತುಂಬಲು ಉತ್ತಮವಾಗಿದೆ.

ಸಾಮಾನ್ಯವಾಗಿ ಮಕ್ಕಳು ಹುಟ್ಟಿದ ನಂತರ ಕತ್ತೆ ಹಾಲು ಕೊಡುತ್ತಾರೆ. ಕತ್ತೆ ಹಾಲು ಕುಡಿದರೆ ಚುರುಕಾಗಿ ಮಾತನಾಡುತ್ತಾರೆ ಎಂಬ ನಂಬಿಕೆ ಇದೆ. ಆದರೆ ಕಾಲಾನಂತರದಲ್ಲಿ ಅದು ಕಣ್ಮರೆಯಾಯಿತು. ಆದರೆ ಈಗ ಕೆಲವರು ಈ ಹಳೆಯ ವಿಷಯವನ್ನು ಮತ್ತೆ ಮುನ್ನೆಲೆಗೆ ತಂದಿದ್ದಾರೆ.. ಕತ್ತೆ ಹಾಲಿಗೆ ಅಭೂತಪೂರ್ವ ಬೇಡಿಕೆಯನ್ನು ಹುಟ್ಟು ಹಾಕಿದ್ದಾರೆ.

ಕತ್ತೆ ಹಾಲಿಗಿರುವ ಬೇಡಿಕೆಯಿಂದಾಗಿ ಬೆಲೆ ಗಗನಕ್ಕೇರಿದೆ. 5 ಮಿಲಿ ಹಾಲಿನ ಬೆಲೆ 50 ರೂಪಾಯಿಯಾಗಿದ್ದು, ಲೀಟರ್‌ಗೆ 10 ಸಾವಿರ ರೂಪಾಯಿಯಾಗಿದೆ. ಆದರೂ ಜನರು ಖರೀದಿಸಲು ಮುಗಿಬೀಳುತ್ತಿದ್ದಾರೆ.

1) ವಯಸ್ಕರು ಸಹ ಈ ಹಾಲಿನ ಸೇವನೆಯಿಂದ ಗೊರಕೆ, ತಲೆನೋವು, ಎದೆಯುರಿ, ವಾಕರಿಕೆ , ಸ್ನಾಯು ಸೆಳೆತದಂತಹ ಸಮಸ್ಯೆಗಳು ಕಡಿಮೆಯಾಗಲಿವೆ.

3) ಕತ್ತೆ ಹಾಲು ಸೋಂಕುಗಳು, ವೈರಸ್‌ಗಳು ಮತ್ತು ರೋಗಗಳ ವಿರುದ್ಧ ದೇಹವನ್ನು ಬಲಪಡಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

2) ಕತ್ತೆಯ ಹಾಲು ಮಕ್ಕಳಲ್ಲಿ ಹಸಿವು ಹೆಚ್ಚಿಸುವ, ಆಸ್ತಮಾ, ಶೀತ, ಕೆಮ್ಮು ಮುಂತಾದ ಕಾಯಿಲೆಗಳಿಗೆ ರಾಮಬಾಣ.

5) ಕತ್ತೆ ಹಾಲು ಕಡಿಮೆ ಮಟ್ಟದ ಕೊಲೆಸ್ಟ್ರಾಲ್ ಅನ್ನು ಹೊಂದಿದೆ ಮತ್ತು ಹೃದಯದ ಆರೋಗ್ಯಕರ ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿದೆ.

4) ಕತ್ತೆ ಹಾಲಿನಲ್ಲಿರುವ ಕ್ಯಾಲ್ಸಿಯಂ, ರಂಜಕದ ಅಂಶವು ಮೂಳೆಗಳು ಮತ್ತು ಹಲ್ಲುಗಳನ್ನು ಬಲಪಡಿಸುತ್ತದೆ.