ನ್ಯೂಸ್

ಪಂಜಾಬ್​ ಮಾಜಿ ಸಿಎಂ ಅವರಿಂದ ಹೊಸ ಪಕ್ಷದ ಘೋಷಣೆ; ಕಾಂಗ್ರೆಸ್​ಗೊಂದು ಪ್ರತಿಸ್ಪರ್ಧಿಯ ಉದಯ..

ಪಂಜಾಬ್​: ಕೆಲವು ದಿನಗಳ ಹಿಂದೆ ಪಂಜಾಬ್​ ಮುಖ್ಯಮಂತ್ರಿ ಸ್ಥಾನದಿಂದ ಇಳಿದಿದ್ದ ಕ್ಯಾಪ್ಟನ್ ಅಮರಿಂದರ್ ಸಿಂಗ್, ಇಂದು ಕಾಂಗ್ರೆಸ್​ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದಾರೆ. ಮಾತ್ರವಲ್ಲ, ತಮ್ಮ ಹೊಸ ಪಕ್ಷದ ಹೆಸರನ್ನೂ ಘೋಷಣೆ ಮಾಡಿದ್ದಾರೆ.

ನವಜೋತ್​ ಸಿಂಗ್ ಸಿಧು ಜತೆ ಕಿತ್ತಾಡಿಕೊಂಡು, ಬಳಿಕ ಇದೀಗ ಸೋನಿಯಾ ಗಾಂಧಿ ಮಾತ್ರವಲ್ಲದೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಿರುದ್ಧವೂ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅವರು, ತಮ್ಮ ನೋವನ್ನೆಲ್ಲ ತೋಡಿಕೊಂಡು 7 ಪುಟಗಳ ಸುದೀರ್ಘ ರಾಜೀನಾಮೆ ಪತ್ರವನ್ನೂ ಬರೆದಿದ್ದಾರೆ.

ಮತ್ತೊಂದೆಡೆ ಕಾಂಗ್ರೆಸ್​​ ಎದುರು ಸೆಟೆದು ನಿಂತಿರುವ ಅವರು 'ಪಂಜಾಬ್ ಲೋಕ್ ಕಾಂಗ್ರೆಸ್​' ಎಂಬ ಪಕ್ಷವನ್ನು ಕಟ್ಟಲಿರುವುದಾಗಿಯೂ ಹೇಳಿದ್ದಾರೆ. ಚುನಾವಣಾ ಆಯೋಗದಲ್ಲಿ ನೋಂದಣಿ ಇನ್ನೂ ಬಾಕಿ ಇದ್ದು, ಪಕ್ಷದ ಚಿಹ್ನೆ ಕೆಲವು ದಿನಗಳ ಬಳಿಕ ಬಹಿರಂಗಪಡಿಸುವುದಾಗಿ ಅವರು ಹೇಳಿಕೊಂಡಿದ್ದಾರೆ.