ಮುಂಬೈ: ಬಾಲಿವುಡ್ನಲ್ಲಿ ಅನಿಮಲ್ ಸಿನಿಮಾ ಬಿಡುಗಡೆಯಾಗಿ ಬಾಕ್ಸ್ ಆಫೀಸ್ನಲ್ಲಿ ಸಕ್ಸಸ್ ಕಂಡಿದ್ದು ಗೊತ್ತೆ ಇದೆ. ಸಿನಿಮಾದ ಬಳಿಕ ಆಲ್ಫಾ ಪುರುಷ ಎಂಬ ಪದ ಸಾಕಷ್ಟು ಬಳಕೆಯಾಗಿತ್ತಿದೆ. ಈ ಪದದ ಬಳಕೆ ಬಗ್ಗೆ ಬಿಟೌನ್ ಕ್ವೀನ್ ಕಂಗನಾ ರಣಾವತ್ ಪ್ರತಿಕ್ರಿಯಿಸಿದ್ದು, ಸಂಪೂರ್ಣ ಅರ್ಥ ತಿಳಿಯದೆ ಜನರು ಈ ಪದವನ್ನು ಮೇಲ್ನೋಟಕ್ಕೆ ಮಾತ್ರ ಬಳಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಆಲ್ಫಾ ಪುರುಷ ಎಂಬ ಪದವು ಉತ್ತಮ ಕಲ್ಪನೆ ಎಂದೆನ್ನಿಸುತ್ತದೆ ಕಂಗನಾ ಹೇಳಿದ್ದಾರೆ. ಭಗವಾನ್ ರಾಮ, ಕೃಷ್ಣ, ಅರ್ಜುನ, ಭೀಷ್ಮ ಪಿತಾಮಹ ಮತ್ತು ಕರ್ಣ ಎಲ್ಲರನ್ನು ಆಲ್ಫಾ ಪುರುಷರೆ. ಅವರ ತ್ಯಾಗ, ಕರುಣೆ ಮತ್ತು ಕಠಿಣತೆಯ ಬಗ್ಗೆ ಅರ್ಥ ಮಾಡಿಕೊಳ್ಳದೆ ಜನರು ಈ ಪದವನ್ನು ಬಳಸುತ್ತಿದ್ದಾರೆ. ಜನರು ತಮ್ಮ ಪಾತ್ರದ ಬಗ್ಗೆ ಅಧ್ಯಯನ ಮಾಡಲು ಬಯಸುವುದಿಲ್ಲ ಎಂದು ಅವರು ತಿಳಿಸಿದರು.
ಪ್ರಸ್ತುತ ಜನರು ತಮ್ಮ ತಪ್ಪು ಕೆಲಸಗಳಿಂದ ಇತರರನ್ನು ಮರುಳು ಮಾಡಲು ಆಲ್ಫಾ ಪುರುಷರಾಗುತ್ತಾರೆ. ನಿಮಗೆ ಏನಾದರೂ ಅರ್ಥವಾಗದಿದ್ದಾಗ ಅದನ್ನು ಬಳಸಿಕೊಳ್ಳಲು ಬಯಸುತ್ತೀರಿ. ನೀನು ಆಲ್ಫಾ ಪುರುಷನಾಗಿದ್ದರೆ ರಾಮನಾಗಿರಬೇಕು ಆದರೆ ಏಕೆ ರಾವಣನಾಗಿರುವುದು ಎಂದು ಪ್ರಶ್ನಿಸಿದ್ದಾರೆ. ಒಬ್ಬ ವ್ಯಕ್ತಿಯು ಆಲ್ಫಾ ಪುರುಷನಾಗಲು ಬಯಸಿದರೆ ಅವರು ಎಲ್ಲಾ ಮಹಿಳೆಯರನ್ನು ಗೌರವಿಸಬೇಕು. ತಪ್ಪಿನ ವಿರುದ್ಧ ಹೋರಾಡಬೇಕು. ಬದಲಾಗಿ ಆಲ್ಫಾ ಪುರುಷ ಎಂದು ಹೇಳಿಕೊಂಡು ಅನುಚಿತ ವರ್ತನೆ, ಮಹಿಳೆಯರಿಗೆ ಕಿರುಕುಳು ನೀಡುವುದರಲ್ಲಿ ತೊಡಗಿರುತ್ತಾರೆ. ಸಿನಿಮಾದಲ್ಲಿಯೂ ಹೊಡೆದಾಟ, ಗೂಂಡಾಗಿರಿ ತೋರಿಸಿದ್ದಾರೆ. ಪ್ರತಿಯೊಂದು ವಿಚಾರವು ಪರಿಣಾಮ ಬೀರುತ್ತದೆ. ಯುವಕರ ದಾರಿ ತಪ್ಪಿಸುತ್ತಿದ್ದಾರೆ ಎಂದು ಹೇಳಿದರು.
ಕಂಗನಾ ಅವರ ಮುಂದಿನ ಸಿನಿಮಾ ಎಮರ್ಜೆನ್ಸಿ, ದೇಶದಲ್ಲಿನ ತುರ್ತು ಪರಿಸ್ಥಿತಿ ಹೇರಿದ ಅವಧಿಯನ್ನು ಆಧರಿಸಿದೆ. ಕಂಗನಾ ರಣಾವತ್ ಭಾರತದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ 2024 ಸೆಪ್ಟೆಂಬರ್ 6ರಂದು ಬಿಡುಗಡೆಯಾಗಲಿದೆ. (ಏಜೆನ್ಸೀಸ್)