ನ್ಯೂಸ್

Allu Arjun Release | ಐಕಾನ್​ ಸ್ಟಾರ್​ನನ್ನು ಅಪ್ಪಿಕೊಂಡು ಪತ್ನಿ ಸ್ನೇಹಾ ಭಾವುಕ; ವಿಡಿಯೋ ವೈರಲ್​​

ಹೈದರಾಬಾದ್​: ಇಲ್ಲಿನ ಸಂಧ್ಯಾ ಚಿತ್ರಮಂದಿರದಲ್ಲಿ ನಡೆದ ಕಾಲ್ತುಳಿತದಲ್ಲಿ ಮಹಿಳೆ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್​ನ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ನಟ ಅಲ್ಲು ಅರ್ಜುನ್(Allu Arjun)​ ಜಾಮೀನು ಮಂಜೂರಾರಿ ಹಿನ್ನೆಲೆ ಶನಿವಾರ ಬಿಡುಗಡೆಗೊಂಡಿದ್ದಾರೆ.

ಬಳಿಕ ಮನೆಗೆ ತೆರಳಿದ ಅಲ್ಲು ಅರ್ಜುನ್​ ಅವರನ್ನು ಪತ್ನಿ ಸ್ನೇಹ ಬಿಗಿದಪ್ಪಿಕೊಂಡು ಸ್ವಾಗತಿಸಿರುವ ವಿಡಿಯೋದ ಕ್ಲೀಪ್​ವೊಂದು ಇದೀಗ ಸೋಷಿಯಲ್​ ಮಿಡಿಯಾದಲ್ಲಿ ವೈರಲ್​ ಆಗುತ್ತಿದೆ.

''ವಿಡಿಯೋದಲ್ಲಿ ಸ್ನೇಹ ತನ್ನ ಪತಿ ಅಲ್ಲು ಅರ್ಜುನ್​ ಬರುವಿಕೆಗಾಗಿ ಕಾಯುತ್ತಿದ್ದಾರೆ. ಅಲ್ಲು ಬಂದ ತಕ್ಷಣ ಓಡಿದ ಸ್ನೇಹ, ಅಲ್ಲು ಹತ್ತಿವಾಗುತ್ತಿದ್ದಂತೆ ಅವರನ್ನು ಬಿಗಿ ಹಿಡಿದು ಅಪ್ಪಿಕೊಂಡಿದ್ದಾರೆ. ಬಳಿಕ ಭಾವುಕರಾದ ಕ್ಷಣಗಳು ವಿಡಿಯೋದಲ್ಲಿ ಕಾಣಸಿಗುತ್ತವೆ''

ಈ ಮುಂಚೆ ಶುಕ್ರವಾರ ಅಲ್ಲು ಅವರನ್ನು ಪೊಲೀಸರು ಬಂಧಿಸುವ ವೇಳೆ ಕೂಡ ಸ್ನೇಹ ವಿಚಲಿತರಾಗಿದ್ದು ಕಂಡು ಬಂತು. ಬಳಿಕ ಅಲ್ಲು ಅರ್ಜುನ್​ ಪತ್ನಿಯ ಕೆನ್ನೆ ಸವರಿ ಸಮಧಾನ ಮಾಡಿದ್ದರು.

ಬಂಧನದ ಬಳಿಕ ಅಲ್ಲು ಅರ್ಜುನ್​ ಮಾತು..

ಜೈಲಿನಿಂದ ಹೊರಬಂದ ನಂತರ ಅಲ್ಲು ಅರ್ಜುನ್ ಮೊದಲ ಪ್ರತಿಕ್ರಿಯೆ ನೀಡಿದ್ದು, ಚಿಂತೆ ಮಾಡಲು ಏನೂ ಇಲ್ಲ. ನಾನು ಚೆನ್ನಾಗಿದ್ದೇನೆ. ನಾನು ಕಾನೂನು ಪಾಲಿಸುವ ನಾಗರಿಕ ಮತ್ತು ಸಹಕರಿಸುತ್ತೇನೆ. ಈ ಪ್ರಕರಣ ನ್ಯಾಯಾಲಯದಲ್ಲಿ ನಡೆಯುತ್ತಿರುವುದರಿಂದ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ.

ಅಲ್ಲದೆ, ಜೀವ ಕಳೆದುಕೊಂಡ ಅಭಿಮಾನಿಯ ಕುಟುಂಬಕ್ಕೆ ನನ್ನ ಸಂತಾಪ. ಇದೊಂದು ದುರದೃಷ್ಟಕರ ಘಟನೆ. ಸಾಧ್ಯವಿರುವ ಎಲ್ಲ ರೀತಿಯಲ್ಲಿ ಅವರ ಕುಟುಂಬವನ್ನು ಬೆಂಬಲಿಸಲು ನಾನು ಹಾಜರಾಗುತ್ತೇನೆ. ಎಲ್ಲರ ಪ್ರೀತಿ ಮತ್ತು ಬೆಂಬಲಕ್ಕೆ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲದಿಂದ ನಾನು ಇಂದು ಇಲ್ಲಿದ್ದೇನೆ. ನಾನು ನನ್ನ ಅಭಿಮಾನಿಗಳಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ,(ಏಜೆನ್ಸಿಸ್​).