ಹವ್ಯಾಸಗಳ ಮುಂದೆ ವಯಸ್ಸು ಕೇವಲ ಒಂದು ಸಂಖ್ಯೆ. ಯಾರಾದರೂ ನೃತ್ಯ, ಹಾಡುಗಾರಿಕೆ, ಚಿತ್ರಕಲೆ ಅಥವಾ ಇನ್ನಾವುದೇ ಚಟುವಟಿಕೆಯಲ್ಲಿ ಆಸಕ್ತಿ ಹೊಂದಿದ್ದರೆ ಅದರಲ್ಲಿ ವಯಸ್ಸು ಅಡ್ಡಿಯಾಗುವುದಿಲ್ಲ. ಇದನ್ನು 82 ವರ್ಷದ ವೃದ್ಧೆಯೊಬ್ಬರು ಸಾಬೀತುಪಡಿಸಿದ್ದಾರೆ. ಅವರು ‘ಮೇರಾ ನಾಮ್ ಚಿನ್ ಚಿನ್ ಚು’ ಹಾಡಿಗೆ ಮಾಡಿರುವ ನೃತ್ಯ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video) ಆಗಿದೆ.
ಇದನ್ನು ಓದಿ: ರೈಲಿನ ಇಂಜಿನ್‌ನ ಛಾವಣಿಯ ಮೇಲೆ ಮಲಗಿ ಪ್ರಯಾಣಿಸಿದ ವ್ಯಕ್ತಿ; Viral Video ನೋಡಿ ನೆಟ್ಟಿಗರು ಹೇಳಿದ್ದು ಹೀಗೆ…
ವೈರಲ್ ಆಗುತ್ತಿರುವ ವಿಡಿಯೋದಲ್ಲಿ 82 ವರ್ಷದ ವೃದ್ಧೆಯೊಬ್ಬರು ವೇದಿಕೆಯಲ್ಲಿ ಎಷ್ಟು ಸುಂದರವಾಗಿ ಮತ್ತು ಆಸಕ್ತಿದಾಯಕವಾಗಿ ಡ್ಯಾನ್ಸ್ ಮಾಡುತ್ತಿದ್ದಾರೆ ಎಂಬುದನ್ನು ನೋಡಬಹುದು. ಉಡುಗೆ ತೊಡುಗೆಯಿಂದ ಹಿಡಿದು ಮೇಕಪ್ವರೆಗೆ ಎಲ್ಲವನ್ನು ಡ್ಯಾನ್ಸ್ಗೆ ತಕ್ಕಂತೆ ಹೊಂದಿಸಿದ್ದಾರೆ. ಅವರ ಪ್ರತಿಯೊಂದು ನಡೆಗಳು ತುಂಬಾ ತೀಕ್ಷ್ಣವಾಗಿದ್ದು, ಅವುಗಳನ್ನು ನೋಡಿದ ನಂತರ ಯಾರಾದರೂ ಅವರಿಂದ ಸ್ಫೂರ್ತಿ ಪಡೆಯಲು ಬಯಸುವುದರಲ್ಲಿ ತಪ್ಪೇನಿಲ್ಲ.
ವಿಡಿಯೋ ಹಂಚಿಕೊಳ್ಳುವಾಗ ಪ್ರತಿ ವರ್ಷ ನಾನು ಅವರು ನೃತ್ಯ ಮಾಡುವುದನ್ನು ನೋಡುತ್ತೇನೆ. ಇದನ್ನು ಪ್ಯಾಷನ್ ಎಂದು ಕರೆಯಲಾಗುತ್ತದೆ. ಅವರ ಹೆಸರು ಕಾಂಚನ್ ಮಾಲಾ. ಈ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ತುಂಬಾ ಧನ್ಯವಾದಗಳು ಎಂದು ಕಾಮೆಂಟ್ ಮಾಡಿದ್ದಾರೆ.
ಈ ವಿಡಿಯೋವನ್ನು ಇದುವರೆಗೂ 10 ಮಿಲಿಯನ್ಗೂ ಅಧಿಕ ಮಂದಿ ವೀಕ್ಷಿಸಿದ್ದು, ಅನೇಕರು ಪ್ರತಿಕ್ರಿಯಿಸಿದ್ದಾರೆ. ಇವರ ಡ್ಯಾನ್ಸ್ ನೋಡಿ ಸ್ವಲ್ಪ ಸಮಯದವರೆಗೆ ನನ್ನ ಎಲ್ಲಾ ತೊಂದರೆ ಮತ್ತು ದುಃಖವನ್ನು ಮರೆತುಬಿಟ್ಟೆ, 70ರ ದಶಕದಲ್ಲೂ ಹೇಗೆ ನೃತ್ಯ ಮಾಡುತ್ತಿದ್ದಾರೆ, ಅವರ ಶಕ್ತಿಗೆ ಸೆಲ್ಯೂಟ್ ಎಂದು ಕಾಮೆಂಟ್ ಮಾಡಿದ್ದಾರೆ.
ಜಿಂಕೆಯನ್ನು ಬೇಟೆಯಾಡುತ್ತಿರುವ ಹುಲಿಯ Video Viral | ನೆಟ್ಟಿಗರು ಹೇಳಿದ್ದು ಹೀಗೆ..