ನ್ಯೂಸ್

ನಾನು ನನ್ನ ಸ್ನೇಹಿತನಿಗೆ ಸಹಾಯ ಮಾಡ್ತಿದ್ದೀನಿ: ವೈಎಸ್​ಆರ್​ಸಿಪಿ ಅಭ್ಯರ್ಥಿ ಪರ ಅಲ್ಲು ಅರ್ಜುನ್​ ಪ್ರಚಾರ

ಮೋಹನ್​ ಶೆಟ್ಟಿ

ಆಂಧ್ರಪ್ರದೇಶ: ತೆಲುಗು ನಟ, ಐಕಾನ್ ಸ್ಟಾರ್​ ಅಲ್ಲು ಅರ್ಜುನ್​ ಇಂದು ವೈಎಸ್​ಆರ್​ಸಿಪಿ ಪಕ್ಷದ ನಂದಯಾಳ್​ ಅಭ್ಯರ್ಥಿ ರವಿಚಂದ್ರ ಕಿಶೋರ್ ರೆಡ್ಡಿ ಪರ ಬಿರುಸಿನ ಪ್ರಚಾರ ನಡೆಸಿದ್ದು, ತಮ್ಮ ಸ್ನೇಹಿತನಿಗೆ ಮತ ನೀಡಿ, ಬಹುಮತ ಗೆಲುವು ಕೊಡುವಂತೆ ಜನರಲ್ಲಿ ಮತಯಾಚಿಸಿದರು.

ರವಿಚಂದ್ರ ರೆಡ್ಡಿ ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅಲ್ಲು ಅರ್ಜುನ್​, "ನಾನು ಯಾರ ಆಹ್ವಾನದ ಮೇರೆಗೆ ಇಲ್ಲಿಗೆ ಬಂದಿಲ್ಲ. ನನ್ನ ಸ್ನೇಹಿತರು ಅಂದಮೇಲೆ ಸದಾ ಅವರೊಂದಿಗೆ ನಿಲ್ಲುತ್ತೇನೆ. ಅದು ಯಾವುದೇ ಕ್ಷೇತ್ರವಾಗಿರಲಿ ಅಥವಾ ಏನೇ ಆಗಿರಲಿ ಅವರ ಜತೆಯಿದ್ದು, ಬೆಂಬಲಿಸುವುದು ನನ್ನ ಕರ್ತವ್ಯ. ಇಲ್ಲಿ ಯಾವುದೇ ರಾಜಕೀಯ ಉದ್ದೇಶ ಇಟ್ಟುಕೊಂಡು ಪ್ರಚಾರಕ್ಕೆ ಬಂದಿಲ್ಲ" ಎಂದು ಸ್ಪಷ್ಟಪಡಿಸಿದರು.

ಮುಂಬರುವ ಪ್ಯಾನ್ ಇಂಡಿಯಾ 'ಪುಷ್ಪ 2' ಚಿತ್ರೀಕರಣದಲ್ಲಿ ಸದ್ಯ ಸಿಕ್ಕಾಪಟ್ಟೆ ಬ್ಯುಸಿಯಿರುವ ಟಾಲಿವುಡ್​ನ ಐಕಾನ್​ ಸ್ಟಾರ್​, ಇದೀಗ ವೈಎಸ್​ಆರ್​ಸಿಪಿ ಅಭ್ಯರ್ಥಿ ರವಿಚಂದ್ರ ಪರ ಪ್ರಚಾರ ಮಾಡಿದ್ದಲ್ಲದೇ, ಅವರ ಮನೆಗೆ ಆಗಮನಿಸಿದ್ದು, ನೋಡುಗರ ಹುಬ್ಬೇರುವಂತೆ ಮಾಡಿದೆ,(ಏಜೆನ್ಸೀಸ್).