ನ್ಯೂಸ್

ಕಾಂಗ್ರೆಸ್​ಗೆ ವೋಟ್​ ಹಾಕುವಂತೆ ದೇವಸ್ಥಾನದಲ್ಲಿ ಆಣೆ ಪ್ರಮಾಣ ಮಾಡಿಸಿ ಮತದಾರರಿಗೆ ಮಾನಸಿಕ ಒತ್ತಡ?!

ವಿಜಯಪುರ: ಮತದಾನದ ದಿನ ಹತ್ತಿರ ಆಗುತ್ತಿದ್ದಂತೆ ವಿಜಯಪುರದಲ್ಲಿ ಆಣೆ ಪ್ರಮಾಣ ಜೋರಾಗಿ ನಡೆದಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಮತದಾರರ ಕೈಲ್ಲಿ ಆಣೆ ಪ್ರಮಾಣ ಮಾಡಿಸಿ ಒತ್ತಡ ಹೇರುವ ಕೆಲಸವನ್ನು ಮಾಡಿದೆ ಎಂದು ಆರೋಪಿಸಲಾಗಿದೆ.

ಕಾಂಗ್ರೆಸ್​ಗೆ ಮತ ಹಾಕಲು ಮತದಾರರಿಂದ ದೇವಸ್ಥಾನ ದಲ್ಲಿ ಆಣೆ ಪ್ರಮಾಣ ಮಾಡಿಸಲಾಗಿದೆ ಎನ್ನಲಾಗುತ್ತಿದೆ. ಇಂಡಿ ಮತಕ್ಷೇತ್ರದ ಕಪನಿಂಬರಗಿ ಮತದಾರರಿಗೆ ಕೂಡಗಿ ಗ್ರಾಮದ ರೇವಣಸಿದ್ದೇಶ್ಬರ ದೇವಸ್ಥಾನದಲ್ಲಿ ಆಣೆ ಪ್ರಮಾಣ ಮಾಡಿಸಲಾಗಿದೆ ಎನ್ನಲಾಗಿದೆ.

ದೇವಸ್ಥಾನದಲ್ಲಿ ಕಾಂಗ್ರೆಸ್​ಗೆ ಮತ ನೀಡೋದಾಗಿ ಆಣೆ ಮಾಡಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ರೀತಿಯಾಗಿ ಆಣೆ ಪ್ರಮಾಣದ ಮೂಲಕ ಮತದಾರರ ಮೇಲೆ ಮಾನಸಿಕ ಒತ್ತಡ ಹೇರುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಯಶವಂತರಾಯಗೌಡ ಪಾಟೀಲ ಮತ್ತು ಬೆಂಬಲಿಗರ ಮೇಲೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಚುನಾವಣಾ ಆಯೋಗಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸೋಲಿನ ಭಯದಿಂದ ಆಣೆ ಪ್ರಮಾಣ ಮಾಡಿಸಿ ಮತದಾರರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.