ನ್ಯೂಸ್

‘ಇಷ್ಕ್ ಹೋ ಜಾತಾ ಹೈ’.. ಅಕ್ಷಯ್ ಜತೆಗಿನ ಬ್ರೇಕಪ್ ಕುರಿತು ಮೌನ ಮುರಿದ ನಟಿ; ಶೀಬಾ ಆಕಾಶ್ ದೀಪ್ ಹೇಳಿದ್ದೇನು? | Sheeba Akashdeep

ಮುಂಬೈ: ಬಾಲಿವುಡ್​ ಕಿಲಾಡಿ ಅಕ್ಷಯ್​ ಕುಮಾರ್​ 9ರ ದಶಕದಲ್ಲಿ ಸಿನಿಮಾಗಳಿಗಿಂಯ ಹೆಚ್ಚು ನಾಯಕಿಯರೊಂದಿಗಿನ ಸಂಬಂಧಗಳಿಂದಾಗಿ ಜನಪ್ರಿಯತೆ ಗಳಿಸಿದ್ದರು. ಅಕ್ಷಯ್ ಕುಮಾರ್ ತಮ್ಮ ಪತ್ನಿ ಟ್ವಿಂಕಲ್ ಖನ್ನಾ ಅವರನ್ನು ಪ್ರೀತಿಸುವ ಮೊದಲು, ಶಿಲ್ಪಾ ಶೆಟ್ಟಿಯಿಂದ ರವೀನಾ ಟಂಡನ್​ವರೆಗೆ ಅನೇಕ ನಟಿಯರೊಂದಿಗೆ ಅವರ ಹೆಸರು ತಳುಕು ಹಾಕಿಕೊಂಡಿತ್ತು. ಈ ಪಟ್ಟಿಯಲ್ಲಿರುವ ಮತ್ತೊಂದು ಹೆಸರು ಶೀಬಾ ಆಕಾಶ್‌ದೀಪ್(Sheeba Akashdeep).

ಶೀಬಾ ಆಕಾಶ್‌ದೀಪ್ 90ರ ದಶಕದ ಜನಪ್ರಿಯ ನಟಿ. ಅವರು 1992ರಲ್ಲಿ ಬಿಡುಗಡೆಯಾದ ಮಿಸ್ಟರ್ ಬಾಂಡ್ ಚಿತ್ರದಲ್ಲಿ ಅಕ್ಷಯ್ ಕುಮಾರ್ ಅವರೊಂದಿಗೆ ಸ್ಕ್ರೀನ್​ಶೇರ್​​ ಮಾಡಿದ್ದರು. ಅವರಿಬ್ಬರೂ ಈ ಚಿತ್ರದ ಚಿತ್ರೀಕರಣದಲ್ಲಿದ್ದಾಗ ಅವರ ಪ್ರೇಮ ಸಂಬಂಧದ ಸುದ್ದಿ ಪ್ರತಿದಿನ ಮುನ್ನೆಲೆಯಲ್ಲಿ ಇರುತಿತ್ತು. ಆದರೆ, ಆ ಸಮಯದಲ್ಲಿ ಇಬ್ಬರೂ ತಮ್ಮ ಸಂಬಂಧವನ್ನು ದೃಢಪಡಿಸಿರಲಿಲ್ಲ. ಆದರೆ ಹಲವು ವರ್ಷಗಳ ನಂತರ ಇತ್ತೀಚಿನ ಸಂದರ್ಶನವೊಂದರಲ್ಲಿ ಶೀಬಾ ಅಕ್ಷಯ್ ಜತೆಗಿನ ಸಂಬಂಧದ ಬಗ್ಗೆ ಮೌನ ಮುರಿದಿದ್ದಾರೆ.

ಶೀಬಾ ಆಕಾಶ್‌ದೀಪ್ ಅವರು ಅಕ್ಷಯ್ ಕುಮಾರ್ ಅವರೊಂದಿಗೆ ಸಂಬಂಧ ಹೊಂದಿರುವುದಾಗಿ ಪರೋಕ್ಷವಾಗಿ ದೃಢಪಡಿಸಿದ್ದಾರೆ. ಶೀಬಾ ಅವರನ್ನು ಅಕ್ಷಯ್ ಜತೆಗಿನ ಡೇಟಿಂಗ್ ವದಂತಿಗಳ ಬಗ್ಗೆ ಕೇಳಲಾಯಿತು. ಅದಕ್ಕೆ ಪ್ರತಿಕ್ರಿಯಿಸಿದ ನಟಿ, ನೀವು ಚಿಕ್ಕವರಿದ್ದಾಗ ಮತ್ತು ಪರಸ್ಪರ ಹತ್ತಿರ ಕೆಲಸ ಮಾಡುವಾಗ ಪ್ರೀತಿ ಉಂಟಾಗುತ್ತದೆ. ನಾವಿಬ್ಬರೂ ಫಿಟ್ನೆಸ್ ಹುಚ್ಚರಾಗಿದ್ದೆವು ಮತ್ತು ಕುಟುಂಬದ ಸ್ನೇಹಿತರಾಗಿದ್ದೆವು. ನನ್ನ ಅಜ್ಜಿ ಮತ್ತು ಅವರ ತಾಯಿ ಒಟ್ಟಿಗೆ ಕಾರ್ಡ್ಸ್​​ ಆಡುತ್ತಿದ್ದರು. ನಾವಿಬ್ಬರೂ ಚಿಕ್ಕವರಾಗಿದ್ದೆವು. ನಾನು ಅದರ ಬಗ್ಗೆ ಮಾತನಾಡುವುದೇ ಇಲ್ಲ. ನನಗೆ ಅದು ನಿಜಕ್ಕೂ ತಮಾಷೆಯಾಗಿದೆ. ಮಾತನಾಡಲು ಏನಿದೆ? ಮೂರು ದಶಕಗಳಿಗೂ ಹೆಚ್ಚು ಕಾಲ ಕಳೆದಿದೆ, ಆ ಸಮಯದಿಂದ ನನಗೆ ಹೆಚ್ಚು ನೆನಪಿಲ್ಲ ಎಂದಿದ್ದಾರೆ.

ಇದೇ ಸಮಯದಲ್ಲಿ ಬ್ರೇಕಪ್​​ ಬಳಿಕ ತನ್ನ ಮಾಜಿ ಗೆಳೆಯನ ಜತೆ ಯಾವ ರೀತಿಯ ಸಂಬಂಧ ಹೊಂದಿದ್ದಾರೆಎ ಎಂದು ಕೇಳಿದಾಗ ಉತ್ತರಿಸಿದ ಅವರು, ನೀವು ಚಿಕ್ಕವರಿದ್ದಾಗ ತುಂಬಾ ಭಾವುಕರಾಗುತ್ತೀರಿ. ಅದರ ನಂತರ ನೀವು ದೀರ್ಘಕಾಲ ಸಾಮಾನ್ಯವಾಗಿರಲು ಸಾಧ್ಯವಾಗುವುದಿಲ್ಲ. ಯುವಪ್ರೇಮವು ತುಂಬಾ ಭಾವೋದ್ರಿಕ್ತ ಮತ್ತು ಶಕ್ತಿಯುತವಾಗಿರುತ್ತದೆ. ಅದು ಒಂದು ಸ್ಫೋಟದಂತಿದೆ. ಆದ್ದರಿಂದ ಆ ಸ್ಫೋಟ ಸಂಭವಿಸಿದಾಗ ಅದು ಕೊನೆಗೊಳ್ಳಬೇಕು. ಆದರೆ ಬಳಿಕ ಸ್ನೇಹ ಉಳಿಯುವುದಿಲ್ಲ ಎಂದು ಅವರು ಹೇಳಿದರು.(ಏಜೆನ್ಸೀಸ್​​)