ನ್ಯೂಸ್

ಗಣರಾಜ್ಯೋತ್ಸವದಂದು ತೆರೆ ಕಾಣಲಿದೆ B-Town ಕಿಲಾಡಿ ಅಕ್ಷಯ್​ ಕುಮಾರ್​​ ನಟನೆಯ Sky Force

ಮುಂಬೈ: ಬಾಲಿವುಡ್​ನ ದಿ ಮೋಸ್ಟ್​ ಬ್ಯುಸಿಯೆಸ್ಟ್​ ನಟ ಯಾರೆಂದು ಕೇಳಿದರೆ ಮೊದಲಿಗೆ ಕೇಳಿ ಬರುವ ಹೆಸರು ಅಕ್ಷಯ್​ ಕುಮಾರ್​ ಅವರದ್ದು. ಚಿತ್ರದಿಂದ ಚಿತ್ರಕ್ಕೆ ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ನಟ ತನ್ನ ಕ್ರೇಜ್​ಅನ್ನು ಹೆಚ್ಚಿಸಿಕೊಳ್ಳುತ್ತಿದ್ದು, ಇದೀಗ ನಟನ ಹೊಸ ಸಿನಿಮಾ 2025ರ ಗಣರಾಜ್ಯೀತ್ಸವಕ್ಕೆ ಬಿಡುಗಡೆಯಾಗಲು ಸಜ್ಜಾಗಿದೆ.

ಅಕ್ಷಯ್ ಕುಮಾರ್, ವೀರ್, ಸಾರಾ ಅಲಿ ಖಾನ್ ಮತ್ತು ನಿಮ್ರತ್ ಕೌರ್ ಅಭಿನಯದ ಸ್ಕೈ ಫೋರ್ಸ್​ (Sky Force) ಚಿತ್ರವು 2025ರ ಗಣರಾಜ್ಯೋತ್ಸದಂದು ತೆರೆಗೆ ಬರಲು ಸಜ್ಜಾಗಿದ್ದು, ಈ ಚಿತ್ರಕ್ಕೆ ದಿನೇಶ್​ ವಿಜನ್​ ಬಂಡವಾಳು ಹೂಡುತ್ತಿದ್ದು, ಅಮರ್​ ಕೌಶಿಕ್​ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಬಾಕ್ಸ್​ಆಫೀಸ್​ನಲ್ಲಿ ಈಗಾಗಲೇ ಧೂಳೆಬ್ಬಿಸಿರುವ ತೇರಿ ಬಾತೋನ್ ಮೇ ಐಸಾ ಉಲ್ಜಾ ಜಿಯಾ, ಮುಂಜ್ಯಾ, ಸ್ತ್ರೀ-2 ಸಿನಿಮಾದ ಮೂಲಕ ಬಾಲಿವುಡ್​ನಲ್ಲಿ ಸಖತ್​ ಸೌಂಡ್​ ಮಾಡುತ್ತಿರುವ ದಿನೇಶ್​ ವಿಜ್​ ಛಾವಾ ಮತ್ತು ಸ್ಕೈ ಫೋರ್ಸ್ ಮೂಲಕ ಮತ್ತೊಂದು ಅಲೆಯನ್ನು ಸೃಷ್ಟಿಸಲು ಸಜ್ಜಾಗುತ್ತಿದ್ದಾರೆ. ವಿಕ್ಕಿ ಕೌಶಲ್​ ನಟನೆಯ ಛಾವಾ ಡಿಸೆಂಬರ್​ 06ರಂದು ಬಿಡುಗಡೆಯಾಗುತ್ತಿದ್ದು, ಅಕ್ಷಯ್​ ಕುಮಾರ್​ ನಟೆನಯ ಸ್ಕೈ ಫೋರ್ಸ್​​ ಸಿನಿಮಾವು 2025ರ ಗಣರಾಜ್ಯೋತ್ಸವಕ್ಕೆ ತೆರೆ ಕಾಣುತ್ತಿದೆ.

ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ಗಣರಾಜ್ಯೋತ್ಸವದ ದಿನದಂದು ಚಿತ್ರವನ್ನು ಬಿಡುಗಡೆ ಮಾಡಲು ಸಿನಿಮಾ ತಂಡ ಈ ಹಿಂದೆಯೇ ಪ್ಲ್ಯಾನ್​ ಹಾಕಿಕೊಂಡಿತ್ತು ಎಂದು ಹೇಳಲಾಗಿದೆ. ಏಕೆಂದರೆ ಸಿನಿಮಾವು ಆ್ಯಕ್ಷನ್​, ಸೆಂಟಿಮೆಂಟ್​ ಸೇರಿದಂತೆ ಭರಪೂರ ಮನರಂಜನೆಯನ್ನು ಹೊಂದಿದ್ದು, ಈ ಚಿತ್ರವು ಪಾಕಿಸ್ತಾನದ ಮೇಲೆ ಭಾರತ ನಡೆಸಿದ ಮೊದಲ ವೈಮಾನಿಕ ದಾಳಿಯನ್ನು ಆಧರಿಸಿ ಮಾಡಲಾಗಿದೆ. ಗಣರಾಜ್ಯೋತ್ಸವದಂದು ಬಿಡುಗಡೆ ಮಾಡಲಾಗುತ್ತಿದ್ದು, ಆ್ಯಕ್ಷನ್​ ಪ್ರಿಯರಿಗೆ ರಸದೌತಣ ಫಿಕ್ಸ್​ ಎಂದು ಹೇಳಲಾಗಿದೆ.

ಇನ್ನೂ ಚಿತ್ರ ಜನವರಿ 24, 2025ರಂದು ಬಿಡುಗಡೆಯಾಗುತ್ತಿದ್ದು, ಚಿತ್ರತಂಡ ದೇಶಾದ್ಯಂತ ಒಂದು ತಿಂಗಳ ಕಾಲ ಪ್ರಚಾರ ನಡೆಸಲು ಪ್ಲ್ಯಾನ್​ ಹಾಕಿಕೊಂಡಿದೆ. ಚಿತ್ರದ ಫಸ್ಟ್​ ಲುಕ್​, ಟ್ರೇಲರ್​ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.