Akshay Kumar: ಬಾಲಿವುಡ್ನಲ್ಲಿ ಆರೋಗ್ಯ ಹಾಗೂ ಶಿಸ್ತಿನ ಗಂಭೀರ ವಿಚಾರಕ್ಕೆ ಬಂದರೆ, ಅಕ್ಷಯ್ ಕುಮಾರ್ ಅವರ ಬದ್ಧತೆಗೆ ಸರಿಸಾಟಿಯಾದವರು ಕಡಿಮೆ. ಇವರು ತಮ್ಮ 57 ನೇ ವಯಸ್ಸಿನಲ್ಲು, ಸೂಪರ್ಸ್ಟಾರ್ ಆಗಿ ತೆರೆಯ ಮೇಲೆ ಮಿಂಚುತಿದ್ದು, ತಮ್ಮ ಶಕ್ತಿ ಹಾಗು ಫಿಟ್ನೆಸ್ನಿಂದ ಅಭಿಮಾನಿಗಳಿಗೆ ಸ್ಪೂರ್ತಿ ನೀಡುತ್ತಿದ್ದಾರೆ. ಆ ಯೌವನದ ಹೊಳಪಿನ ಹಿಂದೆ ಆಶ್ಚರ್ಯಕರವಾದ ಸರಳ ಆಹಾರ ನಿಯಮವಿದೆ ಅದೇನಂತೀರಾ? ಸಂಜೆ 6:30 ಕ್ಕಿಂತ ಮೊದಲೇ ಆಹಾರ ಸೇವಿಸುವುದು ಎಂದು ತಿಳಿದಿದೆ.
ಇತ್ತೀಚೆಗೆ ನಟ ಸಮಾರಂಭವೊಂದರಲ್ಲಿ ಭಾಗಿಯಾಗಿದ್ದು, ಆ ವೇಳೆ ತಮ್ಮ ಜೀವನಶೈಲಿಯ ಬಗ್ಗೆ ಹೇಳಿಕೊಂಡಿದ್ದಾರೆ. ಅನೇಕ ನಟರು ಈಗಿನ ಟ್ರೆಂಡ್ಗೆ ಸಂಬಂಧಪಟ್ಟ ಆಹಾರ ಪದ್ದತಿಗಳನ್ನು ಬಳಸಿದರೆ, ಅಕ್ಷರ್ಯ ಸಂಜೆ 6:30 ರೋಳಗೆ ಭೋಜನವನ್ನು ಮುಗಿಸುತ್ತೇನೆ ಹಾಗೇ ಸೋಮವಾರ ಪೂರ್ಣ ದಿನದ ಉಪವಾಸವನ್ನು ಆಚರಿಸುತ್ತೇನೆ ಎಂದು ತಿಳಿಸಿದ್ದಾರೆ. ಇನ್ನು ಈ ಎರಡು ನಿಯಮಗಳನ್ನು ಎಂದಿಗೂ ಮುರಿಯುವುದಿಲ್ಲ ಎಂದು ಬಹಿರಂಗವಾಗಿ ಹೇಳಿದ್ದಾರೆ.
ನಾವು ರಾತ್ರಿ ಮಲಗುವ ಸಮಯದಲ್ಲಿ ಕಣ್ಣುಗಳು, ಕೈಗಳು ಹಾಗೂ ಕಾಲುಗಳು ವಿಶ್ರಾಂತಿಯನ್ನು ಪಡೆಯುತ್ತವೆ ಆದರೆ, ನಾವು ತಡವಾಗಿ ಊಟ ಮಾಡಿದರೆ ನಮ್ಮ ಹೊಟ್ಟೆಗೆ ಸರಿಯಾದ ವಿಶ್ರಾಂತಿ ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದರು. ನೀವು ಎದ್ದಾಗ ಹೊಟ್ಟೆ ವಿಶ್ರಾಂತಿ ಒಪಡೆಯುವ ಸಮಯವಾಗಿರುತ್ತದೆ. ಆದರೆ, ನಾವು ಆಗ ಆಹಅರ ಸೇವಿಸುತ್ತೇವೆ. ಆಗ ನಮ್ಮ ಹೊಟ್ಟೆ ಕಷ್ಟಪಟ್ಟು ಕೆಲಸ ಮಾಡುತ್ತದೆ. ಆದರಿಂದ ನಮ್ಮ ಹೊಟ್ಟೆಯನ್ನು ಆರೋಗ್ಯಕರವಾಗಿಡುವುದು ಎಷ್ಟು ಮುಖ್ಯ ಎಂದು ಎಲ್ಲರಿಗೂ ತಿಳಿದಿದೆ. ಏಕೆಂದರೆ ಅಸ್ತಿತ್ವದಲ್ಲಿರುವ ಎಲ್ಲಾ ರೋಗಗಳು ಅಲ್ಲಿಂದಲೇ ಬರುತ್ತವೆ .
ಇದನ್ನೂ ಓದಿ: ರಾಷ್ಟ್ರೀಯ ಬಾಹ್ಯಾಕಾಶ ದಿನ: ಬಾಹ್ಯಾಕಾಶ ವಲಯಕ್ಕೆ ಯಾವುದೇ ಅಂತಿಮ ಗಡಿಯಿಲ್ಲ ಎಂದ ಪ್ರಧಾನಿ ಮೋದಿ|PM Modi
ಅಕ್ಷಯ್‌ಗೆ, ಹೊಟ್ಟೆಯ ವಿಚಾರದಲ್ಲಿ ಹೆಚ್ಚಿನ ಕಾಳಜಿ ಇದೆ. ದೇಹದ ಎಲ್ಲಾ ಭಾಗಗಳಲ್ಲಿ, ಹೊಟ್ಟೆಯ ಬಗ್ಗೆ ಗರಿಷ್ಠ ಗಮನ ಹರಿಸಿದರೆ, ರೋಗಗಳು ನಿಮ್ಮ ಹತ್ತಿರ ಬರುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಆದ್ದರಿಂದ ನಾನು ಯಾವಾಗಲೂ ಇದನ್ನೇ ಅನುಸರಿಸುತ್ತೇನೆ ಎಂದರು.
ಆದರಿಂದ 6:30ಕ್ಕೆ ಊಟ ಮಾಡುವುದು ಮುಖ್ಯ ಇದು ನನಗೆ ಆಹಾರವನ್ನು ಜೀರ್ಣಿಸಿಕೊಳ್ಳಲು ಸಮಯ ಸಿಗುತ್ತದೆ. 9:30 -10 ಗಂಟೆಗೆ ಮಲಗುವಾಗ ನಿಮ್ಮ ಹೊಟ್ಟೆ ಸಂಪೂರ್ಣವಾಗಿ ಸಿದ್ಧವಾಗಿರುತ್ತದೆ ಎಂದು ನಟ ತಿಳಿಸಿದ್ದಾರೆ. (ಏಜೆನ್ಸೀಸ್)