

Sanjay Manjrekar: ಒಂದು ಸ್ವರೂಪದಲ್ಲಿನ ಪ್ರದರ್ಶನದ ಆಧಾರದ ಮೇಲೆ ಮತ್ತೊಂದು ಸ್ವರೂಪಕ್ಕೆ ಆಟಗಾರರನ್ನು ಆಯ್ಕೆ ಮಾಡುವ ಬಿಸಿಸಿಐ ಆಯ್ಕೆ ಸಮಿತಿಯ ನಿರ್ಧಾರವನ್ನು ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಟೀಕಿಸಿದ್ದು, ಏಷ್ಯಾ ಕಪ್ಗೆ ಭಾರತದ ತಂಡದ ಆಯ್ಕೆಯ ವಿಧಾನ ಕ್ರಿಕೆಟ್ ತರ್ಕವನ್ನು ಹೊಂದಿಲ್ಲ ಎಂದಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ ವಿಷಯ ಹಂಚಿಕೊಂಡಿರುವ ಮಂಜ್ರೇಕರ್, ಇತ್ತೀಚೆಗೆ "ಫಾರ್ಮ್ಯಾಟ್ ಮಿಕ್ಸಿಂಗ್" ಪ್ರವೃತ್ತಿ ಹೆಚ್ಚಾಗುತ್ತಿದ್ದು, ಒಬ್ಬ ಆಟಗಾರ ತನ್ನ ಟೆಸ್ಟ್ ಪಂದ್ಯದ ಪ್ರದರ್ಶನಕ್ಕಾಗಿ ಟಿ20 ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದಿದ್ದಾರೆ.
ಈ ವೇಳೆ ಅವರು ನೇರವಾಗಿ ಯಾರ ಹೆಸರುಗಳನ್ನು ಉಲ್ಲೇಖಿಸದಿದ್ದರೂ, ಅವರು ಆಡಿದ ಮಾತುಗಳು ಶುಭ್‌ಮಾನ್ ಗಿಲ್ರನ್ನು ಉದ್ದೇಶಿಸಿ ಮಾತನಾಡಿದಂತಿತ್ತು. ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಗಿಲ್ ಉತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ಟಿ20ಐ ಉಪನಾಯಕನನ್ನಾಗಿ ನೇಮಕ ಮಾಡಲಾಯಿತು. ಒಂದು ವೇಳೆ ಆಯ್ಕೆದಾರರು ಅಯ್ಯರ್ ಅವರನ್ನು ಕೈಬಿಡಲು ಬಯಸಿದರೆ, ಅವರ ಬದಲಿಗೆ ಟಿ 20ಯಲ್ಲಿ ವಿಶೇಷ ಅರ್ಹತೆ ಹೊಂದಿರುವ ವ್ಯಕ್ತಿಯನ್ನು ಆಯ್ಕೆ ಮಾಡಬೇಕಿತ್ತು ಎಂದು ಅವರು ತಿಳಿಸಿದ್ದಾರೆ.(ಏಜೆನ್ಸೀಸ್)