ನ್ಯೂಸ್

ಗಡಿಯಲ್ಲಿ ಬಿಎಸ್​ಎಫ್​ ಯೋಧರ ಜತೆ ಹೆಜ್ಜೆ ಹಾಕಿದ ನಟ ಅಕ್ಷಯ್​ ಕುಮಾರ್

Mandara

ಶ್ರೀನಗರ: ಕರೊನಾದ ಈ ಸಮಯದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್​ ಅನೇಕರಿಗೆ ಸಹಾಯ ಹಸ್ತ ಚಾಚಿರುವ ವಿಚಾರ ನಿಮಗೆಲ್ಲರಿಗೂ ಗೊತ್ತೇ ಇದೆ. ಇದೀಗ ಅದೇ ಅಕ್ಷಯ್ ಕುಮಾರ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಗಡಿಯಲ್ಲಿನ ಯೋಧರೊಂದಿಗೆ ಚರ್ಚೆ ನಡೆಸಿದ ಅವರು ಅವರೊಂದಿಗೆ ಹಜ್ಜೆಯನ್ನೂ ಹಾಕಿದ್ದಾರೆ.

ಅಕ್ಷಯ್ ಕುಮಾರ್ ಅವರು ಕಾಶ್ಮೀರದ ಗುರೆಜ್ ಕಣಿವೆಯಲ್ಲಿರುವ ಬಿಎಸ್​ಎಫ್​ ಯೋಧರನ್ನು ಹಾಗೂ ಅವರ ಕುಟುಂಬದವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಅಲ್ಲಿ ಯೋಧರ ಕುಟುಂಬದ ಮಕ್ಕಳು ಹಾಗೂ ಯೋಧರೊಂದಿಗೆ ಪಂಜಾಬಿ ಹಾಗೂ ಹಿಂದಿ ಹಾಡುಗಳಿಗೆ ನೃತ್ಯ ಮಾಡಿದ್ದಾರೆ. ಅದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ತಾವು ಕಾಶ್ಮೀರಕ್ಕೆ ಭೇಟಿ ಕೊಟ್ಟು ಯೋಧರೊಂದಿಗೆ ಮಾತನಾಡಿ ಬಂದ ವಿಚಾರವನ್ನು ಸ್ವತಃ ಅಕ್ಷಯ್​ ಕುಮಾರ್ ಅವರೂ ಟ್ವಿಟ್ಟರ್​​ನಲ್ಲಿ ಹಂಚಿಕೊಂಡಿದ್ದಾರೆ. (ಏಜೆನ್ಸೀಸ್)