ನ್ಯೂಸ್

ಡಾನ್ಸ್ ಮಾಡುವಾಗ ಎದೆ ಸೀಳು ಕಾಣಿಸದಂತೆ ಜಾಕೆಟ್​​ನಿಂದ ಮರೆಮಾಚಿಕೊಂಡ ರಾಧಿಕಾ; ಹೆಚ್ಚಾಯ್ತು ಅಭಿಮಾನಿಗಳ ಸಂಖ್ಯೆ

ಮುಂಬೈ: ಇತ್ತೀಚಿನ ದಿನಗಳಲ್ಲಿ ನಿಮ್ಮ ಇನ್‌ಸ್ಟಾಗ್ರಾಂ ತೆರೆದಾಗ, ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಸಮಾರಂಭದ ಒಂದು ಅಥವಾ ಎರಡು ವಿಡಿಯೋಗಳನ್ನು ನೀವು ಖಂಡಿತವಾಗಿಯೂ ನೋಡಿರುತ್ತೀರಿ. ಹಾಲಿವುಡ್‌ನಿಂದ ಬಾಲಿವುಡ್‌ವರೆಗಿನ ತಾರೆಯರು ಈ ಫಂಕ್ಷನ್‌ನಲ್ಲಿ ತಮ್ಮ ಅಭಿನಯದ ಮೂಲಕ ವೇದಿಕೆಯಲ್ಲಿ ಚಿಂದಿ ಉಡಾಯಿಸಿದರು. ಅಮೆರಿಕದ ರಿಹಾನ್ನಾರಿಂದ ಹಿಡಿದು ಗಾಯಕ ಎಕಾನ್‌ವರೆಗೆ ಜಾಮ್‌ನಗರದಲ್ಲಿ ಜಮಾಯಿಸಿದ್ದರು.

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಸಮಾರಂಭದಲ್ಲಿ ಎಲ್ಲರಂತೆ ಎಕಾನ್ ತಮ್ಮ ಅಭಿನಯದಿಂದ ಜನರ ಮನ ಸೆಳೆದರು. ಏತನ್ಮಧ್ಯೆ ರಾಧಿಕಾ ಜೊತೆ ಎಕಾನ್ ಕಾಣಿಸಿಕೊಂಡಿರುವ ವಿಡಿಯೋ ಬಹಳ ವೇಗವಾಗಿ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ನಂತರ ಎಲ್ಲರೂ ರಾಧಿಕಾ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಹಾಗಾದರೆ ಎಲ್ಲರೂ ರಾಧಿಕಾರನ್ನು ಹೊಗಳುತ್ತಿರುವುದಕ್ಕೆ ಕಾರಣವೇನು?.

ರಾಧಿಕಾಗೆ ಹೆಚ್ಚಾದ ಅಭಿಮಾನಿಗಳ ಸಂಖ್ಯೆ
ಅಲ್ಲಿ ನಡೆದಿದ್ದಷ್ಟು...ಎಕಾನ್ ಪ್ರದರ್ಶನದ ವೇಳೆ ಎಲ್ಲರೂ ವೇದಿಕೆಯ ಮೇಲೆ ನೃತ್ಯ ಮಾಡುತ್ತಿದ್ದಾರೆ. ನಂತರ ಹಾಲಿವುಡ್ ಗಾಯಕ ಈ ಕ್ಷಣವನ್ನು ತನ್ನ ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತಾರೆ. ರಾಧಿಕಾರನ್ನು ತನ್ನ ಕಡೆಗೆ ತಿರುಗಿಸಿ ಎಕಾನ್ ಸೆರೆಹಿಡಿಯುತ್ತಾರೆ. ಆ ಸಮಯದಲ್ಲಿ, ರಾಧಿಕಾ ಕೂಡ ತಿರುಗುತ್ತಾ ನೃತ್ಯ ಮಾಡುತ್ತಾರೆ. ಆದರೆ ಆ ಸಮಯದಲ್ಲಿ ಅವರ ಬಟ್ಟೆಯಿಂದಾಗಿ ಎದೆ ಸೀಳು ಗೋಚರಿಸುವುದು ಗಮನಿಸುತ್ತಾರೆ, ಆ ತಕ್ಷಣಕ್ಕೆ ರಾಧಿಕಾ ತನ್ನ ಜಾಕೆಟ್‌ನಿಂದ ಮರೆ ಮಾಚಿಕೊಳ್ಳುತ್ತಾರೆ. ರಾಧಿಕಾ ಈ ರೀತಿ ನಡೆದುಕೊಂಡಿರುವುದನ್ನು ನೋಡಿ ಅಭಿಮಾನಿಗಳು ಮನಸಾರೆ ಕೊಂಡಾಡಿದ್ದಾರೆ.

ಈಗ ಈ ವಿಡಿಯೋ ನೋಡಿ ಎಲ್ಲರೂ ಮುಖೇಶ್ ಅಂಬಾನಿ ಅವರ ಕಿರಿಯ ಸೊಸೆಯ ಬಗ್ಗೆ ಎದೆ ತುಂಬಿ ಮಾತನಾಡಿದ್ದಾರೆ. ಬಳಕೆದಾರರು "ರಾಧಿಕಾ ಅವರು ತನ್ನ ಜಾಕೆಟ್‌ನಿಂದ ಮುಚ್ಚಿದ ಪರಿ ಚೆನ್ನಾಗಿತ್ತು", "ಇದೇ ಸಂಸ್ಕಾರ", "ರಾಧಿಕಾ ಅವರ ಮೇಲಿನ ಗೌರವವನ್ನು ಹೆಚ್ಚಿಸಿದ್ದಾರೆ", "ಮೌಲ್ಯಗಳು ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತವೆ" ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.