ಚೆನ್ನೈ: ನಟ ರಜನಿಕಾಂತ್ ಪುತ್ರಿ ಐಶ್ವರ್ಯ ರಜನಿಕಾಂತ್ ಮನೆಯಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ ಹಾಗೂ ಲಕ್ಷಾಂತರ ರೂಪಾಯಿ ಮೌಲ್ಯದ ದುಬಾರಿ ವಸ್ತುಗಳನ್ನು ಖದೀಮರು ದೋಚಿದ್ದಾರೆ.
ಐಶ್ವರ್ಯ ಅವರು ತೆನಾಂಪೇಟೆ ಪೊಲೀಸರಿಗೆ ದೂರು ನೀಡಿದ್ದು, ಕಳ್ಳರಿಗಾಗಿ ಪೊಲೀಸ್ ಬಲೆ ಬೀಸಿದ್ದು, ಖದೀಮರಿಗಾಗಿ ಹುಡುಕಾಟ ನಡೆಯುತ್ತಿದೆ.
ಎಫ್ ಐಆರ್ ಪ್ರಕಾರ, ’60 ಪವನ್ ಚಿನ್ನ, ಮೂರು ಲಕ್ಷ ರೂಪಾಯಿಗೂ ಹೆಚ್ಚು ಬೆಲೆಬಾಳುವ ವಸ್ತುಗಳು, ವ್ರಜದ ಆಭರಣ ಕಳ್ಳರು ದೋಚಿದ್ದಾರೆ. ಫೆಬ್ರವರಿ 10 ರಂದು ಐಶ್ವರ್ಯ ಲಾಕರ್ ತೆರೆದಾಗ ಆಭರಣಗಳು ಕಳ್ಳತನವಾಗಿರುವ ಬಗ್ಗೆ ಗೊತ್ತಾಗಿದೆ. 2019 ರಲ್ಲಿ ತನ್ನ ಸಹೋದರಿ ಸೌಂದರ್ಯ ಅವರ ಮದುವೆಗೆ ಅವುಗಳನ್ನು ಧರಿಸಿದ್ದೇನೆ ಎಂದು ಅವರು ಬರೆದಿದ್ದಾರೆ. ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಐಶ್ವರ್ಯ ಸದ್ಯ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಮಯವನ್ನು ನೋಡಿಕೊಂಡ ಕಳ್ಳರು ಪಕ್ಕಾ ಪ್ಲ್ಯಾನ್ ಮಾಡಿಕೊಂಡೇ ಐಶ್ವರ್ಯ ಮನೆಗೆ ನುಗ್ಗಿದ್ದಾರೆ. ಫೆಬ್ರವರಿಯಲ್ಲೇ ಈ ಕಳ್ಳತನ ನಡೆದಿದ್ದು, ಇದೀಗ ಸುದ್ದಿ ಬಹಿರಂಗವಾಗಿದೆ. ಐಶ್ವರ್ಯ ಅವರು ಕೊಟ್ಟಿರುವ ದೂರಿನಲ್ಲಿ ಲಾಕರ್ ನಲ್ಲಿ ಇರಿಸಿದ್ದ ಆಭರಣದ ಬಗ್ಗೆ ಮನೆಯ ಕೆಲವು ಕೆಲಸದವರಿಗೆ ಗೊತ್ತಿತ್ತು ಎಂದು ಬರೆಯಲಾಗಿದೆ ಎನ್ನಲಾಗಿದೆ. ಈ ಕುರಿತಾಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.