ನ್ಯೂಸ್

ಅಭಿಷೇಕ್​ನಿಂದ ದೂರಾದ್ರ ಐಶ್ವರ್ಯಾ ರೈ; ಅಂಬಾನಿ ಮಗನ ಮದುವೆಯಲ್ಲಿ ರಿವೀಲ್​ ಆಯ್ತು ಹೊಸ ಸೀಕ್ರೆಟ್​

ಮುಂಬೈ: ಮುಕೇಶ್​ ಅಂಬಾನಿ-ನೀತಾ ಅಂಬಾನಿ ದಂಪತಿಯ ಕಿರಿಯ ಪುತ್ರನ ವಿವಾಹ ಕಾರ್ಯಕ್ರಮದಲ್ಲಿ ಅನೇಕ ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ಈ ಅದ್ಧೂರಿ ವಿವಾಹ ಕಾರ್ಯಕ್ರಮದಲ್ಲಿ ಬಾಲಿವುಡ್​ ಸೇರಿದಂತೆ ಸೌತ್​ ಸಿನಿ ಇಂಡಸ್ಟ್ರಿಯ ಖ್ಯಾತನಾಮರು ಭಾಗಿಯಾಗಿದ್ದರು. ನೂತನ ವಧು-ವರರನ್ನು ಆಶೀರ್ವದಿಸಲು ಬಚ್ಚನ್​ ಕುಟುಂಬವು ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಎಲ್ಲರ ಗಮನ ಸೆಳೆಯಿತು. ಆದರೆ, ಇದರ ನಡುವೆಯೇ ವದಂತಿ ಒಂದು ಹಬ್ಬಿದ್ದು, ಈ ವಿಚಾರ ಬಿಟೌನ್​ ಅಂಗಳದಲ್ಲಿ ಸಖತ್​ ಸೌಂಡ್​ ಮಾಡುತ್ತಿದೆ.

ಬಾಲಿವುಡ್‌ ನಟಿ ಐಶ್ವರ್ಯಾ ರೈ ಬಚ್ಚನ್‌ ಹಾಗೂ ನಟ ಅಭಿಷೇಕ್‌ ಬಚ್ಚನ್‌ ದಾಂಪತ್ಯದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ವದಂತಿ ಹಬ್ಬಿದೆ. ಇದಕ್ಕೆ ಪುಷ್ಟಿ ನೀಡುವಂತೆ ಅನಂತ್ ಅಂಬಾನಿ ಹಾಗೂ ರಾಧಿಕಾ ಮದುವೆ ಕಾರ್ಯಕ್ರಮದಲ್ಲಿ ಇಬ್ಬರೂ ಬೇರೆ ಬೇರೆಯಾಗಿ ಕಾಣಿಸಿಕೊಂಡಿದ್ದಾರೆ. ಇದರ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗುತ್ತಿದೆ.

ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ ಅಮಿತಾಭ್ ಜೊತೆಗೆ ಜಯಾ ಅಭಿಷೇಕ್, ಬಿಗ್ ಬಿ ಮಗಳು ಶ್ವೇತಾ ಮತ್ತು ಅವರ ಅಳಿಯ ಕೂಡ ಕಾಣಿಸಿಕೊಂಡಿದ್ದಾರೆ. ಅಮಿತಾಬ್ ಬಚ್ಚನ್ ಅವರ ಮೊಮ್ಮಗಳು ನವ್ಯಾ ನವೇಲಿ ನಂದಾ ಮತ್ತು ಅವರ ಮೊಮ್ಮಗ ಅಗಸ್ತ್ಯ ನಂದಾ ಕೂಡ ಕಾಣಿಸಿಕೊಂಡಿದ್ದಾರೆ. ಆದರೆ ಐಶ್ವರ್ಯಾ ರೈ ಬಚ್ಚನ್ ಕುಟುಂಬದೊಂದಿಗೆ ಕಾಣಿಸಿಕೊಂಡಿಲ್ಲ.. ಐಶ್ವರ್ಯಾ ತನ್ನ ಮಗಳು ಆರಾಧ್ಯ ಜೊತೆ ಸಪರೇಟ್​ ಆಗಿ ಕ್ಯಾಮರಾಗಳಿಗೆ ಪೋಸ್​ ನೀಡಿದ್ದಾರೆ. ಇತ್ತ ಇವರಿಬ್ಬರು ಬೇರೆಯಾಗುತ್ತಿದ್ಧಾರೆ ಎಂದು ಭಾವಿಸಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಬೇಸರದಿಂದ ಪೋಸ್ಟ್​ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಈ ಹಿಂದೆ ಐಶ್ವರ್ಯಾ ಹಾಗೂ ಅಭಿ ಡಿವೋರ್ಸ ಪಡೆದಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಈ ಇಬ್ಬರು ಇದರ ಬಗ್ಗೆ ಮಾತನಾಡಿರಲಿಲ್ಲ. ಡಿವೋರ್ಸ್‌ ಸುದ್ದಿ ಬೆನ್ನಲ್ಲೇ ಮಗಳು ಆರಾಧ್ಯಳ ಶಾಲಾ ಕಾರ್ಯಕ್ರಮದಲ್ಲಿ ಐಶ್ವರ್ಯಾ ಹಾಗೂ ಅಭಿಷೇಕ್‌ ಬಚ್ಚನ್‌ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ವದಂತಿಗೆ ತೆರೆ ಎಳೆದಿದ್ದರು. ಇದೀಗ ಮತ್ತೊಮ್ಮೆ ಬೇರೆ ಬೇರೆ ಕಾಣಿಸಿಕೊಳ್ಳುವ ಮೂಲಕ ವಿಚ್ಛೇದನ ವದಂತಿಗೆ ಮತ್ತೊಮ್ಮೆ ಪುಷ್ಠಿ ಸಿಕ್ಕಂತಾಗಿದೆ. ಇವರಿಬ್ಬರ ವಿಚ್ಛೇದನ ವದಂತಿ ಸುಳ್ಳಾಗಲಿ ಎಂದು ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ.