ಬಿಹಾರ ವಿಧಾನಸಭಾ ಚುನಾವಣೆಯ ದಿನಾಂಕ ಹತ್ತಿರ ಬರುತ್ತಿದ್ದಂತೆ ಒಂದು ಕುತೂಹಲಕಾರಿ ಸಂಗತಿ ಎಲ್ಲೆಡೆ ಹರಿದಾಡುತ್ತಿದೆ.
ಮಾಹುವಾ ವಿಧಾನಸಭಾ ಕ್ಷೇತ್ರದಲ್ಲಿ ಪತಿ-ಪತ್ನಿಯ ನಡುವೆಯೇ ನೇರ ಸ್ಪರ್ಧೆ ಏರ್ಪಡಿಲಿದೆ ಎಂಬ ವಿಚಾರ ಮೂಲಗಳಿಂದ ತಿಳಿದುಬಂದಿದೆ.
ರಾಷ್ಟ್ರೀಯ ಜನತಾ ದಳ(ಆರ್ಜೆಡಿ)ದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಮಾವ ಚಂದ್ರಿಕಾ ರಾಯ್ ಅವರು ನಿನ್ನೆ ಆರ್ಜೆಡಿಯ ವಿರೋಧ ಪಕ್ಷ ಜನತಾ ದಳ (ಯುನೈಟೆಡ್)ಗೆ ಸೇರಿದ್ದಾರೆ. ತೇಜ್ ಪ್ರತಾಪ್ ಯಾದವ್ ಮತ್ತು ಚಂದ್ರಿಕಾ ರಾಯ್ ಅವರ ಪುತ್ರಿ ಐಶ್ವರ್ಯಾ ವಿವಾಹವಾಗಿದ್ದರೂ, ಕಳೆದ ವರ್ಷವೇ ಬೇರ್ಪಟ್ಟಿದ್ದಾರೆ.
ಇದೀಗ ಮಾಹುವಾದಿಂದ ಚಂದ್ರಿಕಾ ರಾಯ್ ಮಗಳು ಐಶ್ವರ್ಯಾ ಅವರು ಜೆಡಿಯುದಿಂದ ಸ್ಪರ್ಧಿಸಲಿದ್ದಾರೆ. ಹಾಗೇ ಆರ್ಜೆಡಿಯಿಂದ ತೇಜ್ ಪ್ರತಾಪ್ ಯಾದವ್ ಕಣಕ್ಕಿಳಿಯಲಿದ್ದಾರೆ ಎಂಬ ಮಾತು ಜೋರಾಗಿಯೇ ಕೇಳಿಬರುತ್ತಿದೆ. ಇದನ್ನೂ ಓದಿ: ಲಾಡ್ಜ್ವೊಂದರ ಬಾತ್ರೂಮ್ನಲ್ಲಿದ್ದ ಸಣ್ಣ ಕನ್ನಡಿ ನೂಕಿದ ಪೊಲೀಸರಿಗೆ ಕಾದಿತ್ತು ಶಾಕ್!
ಅಷ್ಟೇ ಅಲ್ಲ, ನಿನ್ನೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಚಂದ್ರಿಕಾ ರೈ ಕೂಡ ತಮ್ಮ ಮಗಳು ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಸುಳಿವು ನೀಡಿದ್ದಾರೆ. ಇದನ್ನೂ ಓದಿ: 18 ತಿಂಗಳಲ್ಲಿ 8 ಮಗುವಿಗೆ ಜನ್ಮ ನೀಡಿದ ಅಜ್ಜಿ: ಹುಬ್ಬೇರಿಸೋ ಮುನ್ನ ಒಮ್ಮೆ ಓದಿ ಬಿಡಿ!
ಪ್ರಸ್ತುತ ತೇಜ್ಪ್ರತಾಪ್ ಯಾದವ್ ಅವರು ಮಾಹುವಾದ ಶಾಸಕ. ಮುಂದಿನ ಚುನಾವಣೆಯಲ್ಲಿ ಒಮ್ಮೆ ಪತಿ-ಪತ್ನಿ ನಡುವೆ ಸ್ಪರ್ಧೆ ಏರ್ಪಟ್ಟರೆ ಗೆಲುವು ಯಾರಿಗೆ? ಎಂಬ ಕುತೂಹಲ ಮೂಡಿದೆ. (ಏಜೆನ್ಸೀಸ್)