ನ್ಯೂಸ್

ವಾಯು ಮಾಲಿನ್ಯದಿಂದ 3.5 ವರ್ಷ ಕಡಿಮೆಯಾಗುತ್ತಿದೆ ಭಾರತೀಯರ ಜೀವಿತಾವಧಿ| Air Pollution

ನವದೆಹಲಿ: ಭಾರತದ 1.4 ಶತಕೋಟಿ ಜನರು ವಾರ್ಷಿಕ ಸರಾಸರಿ ಮಾಲಿನ್ಯ ಮಟ್ಟವು WHO ಮಾರ್ಗಸೂಚಿಯನ್ನು ಮೀರಿದ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ ಮತ್ತು ಗಾಳಿಯ ಗುಣಮಟ್ಟವು ಅತ್ಯಂತ ಸ್ವಚ್ಛ ಪ್ರದೇಶಗಳಲ್ಲಿರುವವರು 9.4 ತಿಂಗಳು ಹೆಚ್ಚು ಕಾಲ ಬದುಕಬಹುದು ಎಂದು ಹೊಸ ವರದಿಯೊಂದು ತಿಳಿಸಿದೆ.

ಚಿಕಾಗೋ ವಿಶ್ವವಿದ್ಯಾಲಯದ ಇಂಧನ ನೀತಿ ಸಂಸ್ಥೆಯ (EPIC) 2025 ರ ವರದಿಯು ಭಾರತದಲ್ಲಿ PM2.5 ಸಾಂದ್ರತೆಯು 2022 ಕ್ಕೆ ಹೋಲಿಸಿದರೆ ಹೆಚ್ಚಾಗಿದೆ. ಇದು ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಗಳಿಗಿಂತಲೂ ಎಂಟು ಪಟ್ಟು ಅಧಿಕವಾಗಿದೆ. ಪರಿಣಾಮ ಭಾರತೀಯರ ಜೀವಿತಾವಧಿಯು 3.5 ವರ್ಷ ಕಡಿತಗೊಳ್ಳಲಿದೆ ಎಂದು ವರದಿ ಹೇಳಿದೆ.

ವರದಿ ಹೇಳಿದ್ದೇನು.?

2022 ಕ್ಕೆ ಹೋಲಿಸಿದರೆ 2023 ರಲ್ಲಿ ಭಾರತದಲ್ಲಿ ಸೂಕ್ಷ್ಮ ಕಣಗಳ (PM2.5) ಮಟ್ಟಗಳು ಏರಿಕೆಯಾಗಿವೆ ಎಂದು ಅಧ್ಯಯನವು ಹೇಳಿದೆ. ಭಾರತೀಯರು ಉಸಿರಾಡುವ ಗಾಳಿಯು WHO ಮಾರ್ಗಸೂಚಿಗಿಂತ ಎಂಟು ಪಟ್ಟು ಹೆಚ್ಚು ಕಲುಷಿತವಾಗಿದೆ. ಭಾರತವು ಈ ಜಾಗತಿಕ ಮಾನದಂಡವನ್ನು ಪೂರೈಸುವಲ್ಲಿ ಯಶಸ್ವಿಯಾದರೆ, ಸರಾಸರಿ ಜೀವಿತಾವಧಿ 3.5 ವರ್ಷಗಳಷ್ಟು ಹೆಚ್ಚಾಗುತ್ತದೆ. ಭಾರತವು 2026 ರ ವೇಳೆಗೆ ಮಾಲಿನ್ಯವನ್ನು ಶೇ 40 ರಷ್ಟು ಕಡಿಮೆ ಮಾಡುವ ಪರಿಷ್ಕೃತ ಗುರಿಯನ್ನು ಸಾಧಿಸಿದರೆ, ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮ (NCAP) ವ್ಯಾಪ್ತಿಗೆ ಬರುವ 130 ನಗರಗಳ ನಿವಾಸಿಗಳು 2017 ಕ್ಕೆ ಹೋಲಿಸಿದರೆ ಎರಡು ವರ್ಷಗಳ ಜೀವಿತಾವಧಿಯನ್ನು ಹೆಚ್ಚಿಸಬಹುದು ಎಂದು ಹೊಸ ವರದಿ ತಿಳಿಸಿದೆ.

ವಾಯು ಮಾಲಿನ್ಯವು ಕೇವಲ ಹೊಗೆಯ ಆಕಾಶ ಅಥವಾ ಕೆಮ್ಮು ಮಾತ್ರವಲ್ಲ, ಅದು ಜೀವಿತಾವಧಿಯನ್ನು ಕಡಿಮೆ ಮಾಡುತ್ತದೆ. ಶುದ್ಧ ಗಾಳಿಯು ಜನರ ಜೀವಿತಾವಧಿಯನ್ನು ಹೆಚ್ಚಿಸುತ್ತದೆ, ರೋಗದ ಹೊರೆಯನ್ನು ಕಡಿಮೆ ಮಾಡುತ್ತದೆ ಮತ್ತು ಒಟ್ಟಾರೆ ಜೀವನದ ಗುಣಮಟ್ಟವನ್ನು ಸುಧಾರಿಸುತ್ತದೆ.

ಭಾರತದ ಜನಸಂಖ್ಯೆಯ ಸುಮಾರು ಶೇ.39 ರಷ್ಟು ಉತ್ತರ ಬಯಲು ಪ್ರದೇಶದಲ್ಲಿ ವಾಸಿಸುವ ಜನರು ಹೆಚ್ಚು ಬಳಲುತ್ತಿದ್ದಾರೆ ಎಂದು ವರದಿಯು ಎತ್ತಿ ತೋರಿಸುತ್ತದೆ. ಗಾಳಿಯ ಗುಣಮಟ್ಟವು WHO ಮಾರ್ಗಸೂಚಿಗಳನ್ನು ಪೂರೈಸಿದರೆ, ಅಲ್ಲಿನ ನಿವಾಸಿಗಳು ಸರಾಸರಿ ಐದು ವರ್ಷ ಹೆಚ್ಚು ಕಾಲ ಬದುಕಬಹುದು ಎನ್ನಲಾಗಿದೆ.

(ಏಜೆನ್ಸೀಸ್)