ನ್ಯೂಸ್

ಡ್ರಗ್ಸ್ ಆರೋಪಿ ಆದಿತ್ಯ ಆಳ್ವನ 'ಹೌಸ್​ ಆಫ್​ ಲೈಫ್' ನೋಡಿದ್ರೆ ಬೆಚ್ಚಿಬೀಳ್ತೀರಿ!

ಬೆಂಗಳೂರು: ಸ್ಯಾಂಡಲ್​ವುಡ್​ ಡ್ರಗ್ಸ್​ ಲಿಂಕ್ ಪ್ರಕರಣದ ಆರೋಪಿ ಆದಿತ್ಯ ಆಳ್ವನ ಲಕ್ಸುರಿ ರೆಸಾರ್ಟ್​ ಬಗ್ಗೆ ನೀವು ಕೇಳಿದ್ರೆ ದಂಗಾಗ್ತೀರಿ. ಹೆಬ್ಬಾಳ ಸಮೀಪದಲ್ಲಿರುವ ಆಳ್ವಾರ “House of Life” ರೆಸಾರ್ಟ್​ನ ವಿಸ್ತಾರವೇ ಬರೋಬ್ಬರಿ ನಾಲ್ಕು ಎಕರೆ!

“House of Life” ರೆಸಾರ್ಟ್​ನಲ್ಲಿ ತಡರಾತ್ರಿ ಪಾರ್ಟಿಗಳ ಅಬ್ಬರ ಜೋರಾಗಿಯೇ ಇತ್ತು. ಪಾರ್ಟಿಗಳಲ್ಲಿ ವಿದೇಶಿಗರು ಹಾಗೂ ಯುವಜನರೇ ಹೆಚ್ಚಾಗಿ ಭಾಗಿಯಾಗ್ತಿದ್ರು. ಈ ವೇಳೆ ಡ್ರಗ್ಸ್ ಸರಬರಾಜು ಆಗುತ್ತಿತ್ತು ಎಂಬ ಶಂಕೆಯೂ ವ್ಯಕ್ತವಾಗಿದೆ. ಅಂದ ಹಾಗೇ ಈ ಹೌಸ್​ನಲ್ಲಿ ನಡೆಯುತ್ತಿದ್ದದ್ದು ಅಂತಿಂಥ ಪಾರ್ಟಿಯಲ್ಲ. ಅಕ್ರಮದ ಕೂಪ! ಪ್ರತೀಕ್​ ಶೆಟ್ಟಿ ಮೂಲಕ ಈ ಪಾರ್ಟಿಯಲ್ಲಿ ಡ್ರಗ್ಸ್​ ಸಿಗುತ್ತಿತ್ತು!

ಆದಿತ್ಯ ಆಳ್ವ ರೆಸಾರ್ಟ್​ನಲ್ಲೇ ನಡೆಯುತ್ತಿತ್ತು ಫ್ಲೈ ಡೈನಿಂಗ್. ನೆಲದಿಂದ 50 ಅಡಿ ಎತ್ತರದಲ್ಲಿ ಒಮ್ಮೆಲೆ 22 ಮಂದಿ ಊಟ ಮಾಡುವ ವ್ಯವಸ್ಥೆಯೂ ಇದೆ. 360 ಡಿಗ್ರಿಯಲ್ಲಿ ತಿರುಗುವ ವ್ಯವಸ್ಥೆಯಲ್ಲಿ ಊಟ ಮಾಡಬಹುದು. ಈ ಫ್ಲೈ ಡೈನಿಂಗ್ ರೆಸ್ಟೋರೆಂಟ್​ನ ಬಿಲ್​ ಒಬ್ಬರಿಗೆ 6,999 ರೂಪಾಯಿ.

ಈ ರೆಸಾರ್ಟ್​ನಲ್ಲಿ  ಫ್ಲೈ ಡೈನಿಂಗ್ ರೆಸ್ಟೋರೆಂಟ್ ನಡೆಸಲು 2018ರಲ್ಲಿ ಅನುಮತಿ ಪಡೆಯಲಾಗಿತ್ತು. ಆದರೆ ಮರುವರ್ಷ ಈ ಪರವಾನಗಿಯನ್ನು ನವೀಕರಣ ಮಾಡಿಸದೆ ಫ್ಲೈ ಡೈನಿಂಗ್ ರೆಸ್ಟೋರೆಂಟ್​ಅನ್ನು ಅಕ್ರಮವಾಗಿ ನಡೆಸಲಾಗುತ್ತಿತ್ತು. 2019ರ ಫೆಬ್ರವರಿಯಲ್ಲಿ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಇದನ್ನು ಸ್ಥಗಿತಗೊಳಿಸಿದ್ದರು.

ಡ್ರಗ್ಸ್ ಕೇಸ್​ನ ಕಾಟನ್​ಪೇಟೆ ಪ್ರಕರಣದಲ್ಲಿ ಎ6 ಆರೋಪಿ ಆದಿತ್ಯ ಆಳ್ವಾ. ಮಾಜಿ ಸಚಿವ ಜೀವರಾಜ್ ಆಳ್ವಾ ಅವರ ಪುತ್ರ.