

ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣ ದಿನೇದಿನೆ ಕುತೂಹಲ ಕೆರಳಿಸುತ್ತಿದ್ದು, ಸಿಸಿಬಿ ಪೊಲೀಸರು ಕೋರ್ಟ್ನಿಂದ ಸರ್ಚ್ ವಾರೆಂಟ್ ಪಡೆದು ಆದಿತ್ಯ ಆಳ್ವಾ ಮನೆ ಶೋಧ ಆರಂಭಿಸಿದ್ದಾರೆ. ಇಂದು ಬೆಳಗ್ಗೆಯೇ ಹೆಬ್ಬಾಳದಲ್ಲಿರುವ ಆದಿತ್ಯ ಆಳ್ವಾರ "House of Life" ಮನೆಗೆ ದಾಳಿ ಮಾಡಿದ ಸಿಸಿಬಿ ಪೊಲೀಸರು ಮನೆಯ ಪ್ರತಿಯೊಂದು ಭಾಗವನ್ನೂ ಶೋಧಿಸತೊಡಗಿದ್ದಾರೆ.
ಹೆಬ್ಬಾಳ ಸಮೀಪದ ಈ ಮನೆ ರೆಸಾರ್ಟ್ನಂತೆ ಇದ್ದು ಸುಮಾರು 4 ಎಕರೆ ಪ್ರದೇಶ ವ್ಯಾಪ್ತಿಯಲ್ಲಿದೆ. ಸಿಸಿಬಿ ಪೊಲೀಸರು ಅಲ್ಲಿಗೆ ತೆರಳಿದ ವೇಳೆ ಮನೆಯ ಸದಸ್ಯರು ಯಾರೂ ಇರಲಿಲ್ಲ. ಮನೆಗೆಲಸದವರು ಮಾತ್ರ ಇದ್ದು, ಪೊಲೀಸರು ಶೋಧ ಆರಂಭಿಸಿದ್ದಾರೆ. ಡ್ರಗ್ಸ್ ಕೇಸ್ನ ಕಾಟನ್ಪೇಟೆ ಪ್ರಕರಣದಲ್ಲಿ ಎ6 ಆರೋಪಿ ಆದಿತ್ಯ ಆಳ್ವಾ. ಮಾಜಿ ಸಚಿವ ಜೀವರಾಜ್ ಆಳ್ವಾ ಅವರ ಪುತ್ರ ಈ ಆದಿತ್ಯ.
ಸಿಸಿಬಿ ಇನ್ಸ್ಪೆಕ್ಟರ್ ಪುನೀತ್, ಇನ್ಸ್ಪೆಕ್ಟರ್ ಅಂಜುಮಾಲಾ ಸೇರಿ ಮೂವರು ಇನ್ಸ್ಪೆಕ್ಟರ್ಗಳ ನೇತೃತ್ವದ 8 ಸದಸ್ಯರ ತಂಡ ಈ ದಾಳಿಯನ್ನು ನಡೆಸಿದೆ. (ದಿಗ್ವಿಜಯ ನ್ಯೂಸ್)