ಮುಂಬೈ: ತಮ್ಮ ಹಾಟ್ ಲುಕ್, ಧರಿಸುವ ಉಡುಗೆ-ತೊಡುಗೆಯಿಂದಲೇ ಪಡ್ಡೆ ಹುಡುಗರ ನಿದ್ದೆಗೆಡಿಸುವ ಚೆಲುವೆ, ನಟಿ ಶಮಾ ಸಿಕಂದರ್ (Shama Sikander) ಇದೀಗ ಶಾಕಿಂಗ್ ವಿಚಾರವೊಂದನ್ನು ಬಹಿರಂಗವಾಗಿ ಕ್ಯಾಮರಾ ಮುಂದೆ ಹೇಳಿಕೊಂಡಿದ್ದಾರೆ. ಹಿಂದಿ ಭಾಷೆಯ ಚಲನಚಿತ್ರಗಳು, ವೆಬ್ ಸಿರೀಸ್ ಮತ್ತು ಟಿವಿ ಧಾರವಾಹಿಗಳಲ್ಲಿ ನಟಿಸಿ, ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಶಮಾ, ತಮ್ಮ ಹೊಚ್ಚ ಹೊಸ ಫೋಟೋಗಳ ಮೂಲಕ ಜಾಲತಾಣಗಳಲ್ಲಿ ಆಗಾಗ್ಗೆ ಸದ್ದು ಮಾಡುತ್ತಿರುತ್ತಾರೆ. ಆದ್ರೆ, ಇದೇ ಮೊದಲ ಬಾರಿಗೆ ಅಹಿತಕರ ಘಟನೆಯೊಂದರ ಬಗ್ಗೆ ಮುಕ್ತವಾಗಿ ಮಾತನಾಡಿರುವ ನಟಿ, ಆ ಸ್ಟಾರ್ ನಟನ ಜತೆ ಇನ್ಯಾವತ್ತು ನಟಿಸಲು ಬಯಸುವುದಿಲ್ಲ ಎಂಬ ಶಾಕಿಂಗ್ ಹೇಳಿಕೆಯೊಂದನ್ನು (Shocking Statement) ನೀಡಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಸಿಕ್ಕಾಪಟ್ಟೆ ಫ್ಯಾನ್ ಫಾಲೋಯಿಂಗ್ ಹೊಂದಿರುವ ಶಮಾ, ತಮ್ಮ ಹಾಟ್ ಲುಕ್ಕಿನ ಯಾವುದಾದರೂ ಒಂದು ಫೋಟೋ ಹಾಕಿದರೆ ಸಾಕು ಅಲ್ಲಿ ಕಾಮೆಂಟ್, ಲೈಕ್ಗಳ ಸುರಿಮಳೆಯೇ ಹರಿದುಬರುತ್ತವೆ. ಸದಾ ಆನ್ಲೈನ್ನಲ್ಲಿ ಸಕ್ರಿಯರಾಗಿರುವ ನಟಿ ಒಂದು ಆ್ಯಡ್ ಶೂಟ್ನ ಚಿತ್ರೀಕರಣದಲ್ಲಿ ಸ್ಟಾರ್ ನಟನೊಬ್ಬ ತನ್ನೊಂದಿಗೆ ನಡೆದುಕೊಂಡ ರೀತಿ ಬಹಳ ಮುಜುಗರಕ್ಕೆ ಒಳಗಾಗುವಂತೆ ಮಾಡಿತು ಎಂದು ಹೇಳುತ ಅತೀವ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲಿ
“ಅದೇ ಮೊದಲು ನಾನು ಆತನನ್ನು ಮುಖಾಮುಖಿಯಾಗಿ ಭೇಟಿಯಾಗಿದ್ದು. ಮುಂದಿನ ದಿನಗಳಲ್ಲಿ ಎಂತಹದ್ದೇ ದೊಡ್ಡ ಆಫರ್ ಬಂದರೂ ಸಹ ಆತನೊಂದಿಗೆ ಕೆಲಸ ಮಾಡಲು ಬಯಸುವುದಿಲ್ಲ” ಎಂದು ನಟಿ ಹೇಳಿಕೊಂಡಿದ್ದಾರೆ. ಸದ್ಯ ಈ ವಿಷಯ ಅವರ ಅಭಿಮಾನಿಗಳನ್ನು ಭಾರೀ ಅಚ್ಚರಿಗೆ ದೂಡಿದೆ,(ಏಜೆನ್ಸೀಸ್).