ನ್ಯೂಸ್

ಮೈಚಳಿ ಬಿಟ್ಟು ಹೊಸ ಫೋಟೋಶೂಟ್ ಮಾಡಿಸಿದ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ

ಬೆಂಗಳೂರು: ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಹೊಸ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿರುತ್ತಾರೆ. ಆದರೆ, ಇದೀಗ ಹೊಸದಾಗಿ ಹಂಚಿಕೊಂಡಿರುವ ಫೋಟೋಗಳು ಸಖತ್​ ವೈರಲ್​​ ಆಗಿವೆ.

ನಟಿ ರಾಗಿಣಿ ದ್ವಿವೇದಿ ಅವರು ಹೊಸ ಫೋಟೋಶೂಟ್​ನಲ್ಲಿ ಮಿಂಚಿದ್ದಾರೆ. ಅವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿ ಗಮನ ಸೆಳೆದಿವೆ. ಅವರು ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ.

ವಸೀಮ್ ಖಾನ್ ಫ್ಯಾಷನ್ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಪ್ರಸಾದ್ ಬಿಡಪ ಅವರು ರಾಗಿಣಿ ಅವರ ಕಾಸ್ಟ್ಯೂಮ್​ ಡಿಸೈನ್​ ಮಾಡಿದ್ದಾರೆ. ಈ ಫೋಟೋಗಳಿಗೆ ನೆಟ್ಟಿಗರು ಮೆಚ್ಚುಗೆ ಸೂಚಿಸಿ ನಟಿಯ ಬೋಲ್ಡ್‌ ಫೋಟೋಗಳಿಗೆ ಕೆಲವರು ಪಾಸಿಟಿವ್‌ ಮತ್ತು ನೆಗೆಟಿವ್‌ ರೀತಿಯಲ್ಲಿ ಕಮೆಂಟ್‌ ಹಾಕುತ್ತಿದ್ದಾರೆ.

ರಾಗಿಣಿ ಅವರು ಪರಭಾಷೆಗಳಲ್ಲೂ ಹೆಚ್ಚು ಗುರುತಿಸಿಕೊಳ್ಳುತ್ತಿದ್ದಾರೆ. ಅವರಿಗೆ ಚಿತ್ರರಂಗದಲ್ಲಿ ಬೇಡಿಕೆ ಸಖತ್ ಹೆಚ್ಚುತ್ತಿದೆ. ಕನ್ನಡದಲ್ಲೂ ಸಿನಿಮಾ ಮಾಡುತ್ತಿದ್ದಾರೆ. ಕನ್ನಡ ಮಾತ್ರವಲ್ಲದೆ, ತಮಿಳು, ಮಲಯಾಳಂ, ಹಿಂದಿ ಸೇರಿ ಹಲವು ಚಿತ್ರಗಳಲ್ಲಿ ರಾಗಿಣಿ ಬಿಜಿಯಾಗಿದ್ದಾರೆ. ರಾಗಿಣಿ ಹೊಸ ಚಿತ್ರಗಳ ಪಟ್ಟಿ ದೊಡ್ಡದಿದೆ. ಅವುಗಳಲ್ಲಿ ಕೆಲವು ರಿಲೀಸ್ ಆಗಬೇಕಿದೆ. ಇನ್ನು ಕೆಲವು ಚಿತ್ರೀಕರಣದ ಹಂತದಲ್ಲಿಯೇ ಇವೆ.