ನ್ಯೂಸ್

ರೇಣುಕಸ್ವಾಮಿ ನನಗೂ ಇಂಥದ್ದೇ ಸಂದೇಶ ಕಳಿಸಿದ್ದ; ಸಾಕ್ಷಿ ಸಮೇತ ವಿವರಿಸಿದ ನಟಿ ಚಿತ್ರಾಲ್ ರಂಗಸ್ವಾಮಿ

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಆಕೆಯ ಸ್ನೇಹಿತೆ ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಆರೋಪಿಗಳನ್ನು ಬಂಧಿಸಿದ ಬೆಂಗಳೂರು ಪೊಲೀಸರು, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ವಿಚಾರಣೆ ಬಳಿಕ ಕೋರ್ಟ್​ ದರ್ಶನ್​ರನ್ನು ಎರಡು ದಿನ ಪೊಲೀಸ್​ ಕಸ್ಟಡಿಗೆ ಒಪ್ಪಿಸಿದ್ದರು. ನ್ಯಾಯಾಲಯದ ವಿಚಾರಣೆ ಬಳಿಕ ಜುಲೈ 04ರವರೆಗೂ ಆರೋಪಿ ದರ್ಶನ್​ ಮತ್ತು ಆತನ ಸಹಚರರನ್ನು ಪರಪ್ಪನ ಅಗ್ರಹಾರಕ್ಕೆ ಸ್ಥಳಾಂತರಿಸಲಾಗಿದ್ದು, ವಿಚಾರಣಧೀನ ಕೈದಿ ನಂಬರ್ ಕೂಡ ಹಸ್ತಾಂತರಿಸಲಾಗಿದೆ.

ತನ್ನ ಸ್ನೇಹಿತೆ ಪವಿತ್ರಾ ಗೌಡಗೆ ಆಶ್ಲೀಲ ಸಂದೇಶ ಮತ್ತು ಫೋಟೋಗಳನ್ನು ಕಳಿಸಿದ್ದ ಕಾರಣ ನಟ ದರ್ಶನ್‌ ಮತ್ತು ಆತನ ಸಹಚರರು ರೇಣುಕಸ್ವಾಮಿಗೆ ಚಿತ್ರಹಿಂಸೆ ಕೊಟ್ಟು ಹತ್ಯೆ ಮಾಡಿದ್ದಾರೆ. ಈ ಘಟನೆಗೆ ಪ್ರಮುಖ ಕಾರಣ ಅಶ್ಲೀಲ ಮೆಸೇಜ್​ಗಳು! ಅನೇಕರು ಮೃತ ರೇಣುಕಸ್ವಾಮಿ ಕೆಟ್ಟದಾಗಿ ಮೆಸೇಜ್ ಮಾಡಿದ್ದು ತಪ್ಪು. ಆತ ಈ ಹಿಂದೆಯೂ ಕೆಲವರಿಗೆ ನಕಲಿ ಖಾತೆಗಳಿಂದ ಇದೇ ರೀತಿಯಲ್ಲಿ ಅಶ್ಲೀಲ ಸಂದೇಶಗಳನ್ನು ಕಳಿಸಿದ್ದ ಎಂಬ ಆರೋಪಗಳನ್ನು ಎಸಗಿದ್ದರು. ನನಗೂ ಕೂಡ ಇಂತಹದ್ದೇ ಮೆಸೇಜ್​ ಬಂದಿತ್ತು ಎಂದು ಕಿರುತೆರೆ ನಟಿ ಚಿತ್ರಾಲ್ ರಂಗಸ್ವಾಮಿ ಹೇಳಿಕೊಂಡಿದ್ದಾರೆ.

ನನಗೂ ಕೂಡ ಫೇಕ್​ ಅಕೌಂಟ್‌ನಿಂದ ಮೃತ ರೇಣುಕಸ್ವಾಮಿ ಮೆಸೇಜ್ ಮಾಡಿದ್ದ ಎಂದು ತಮ್ಮ ಸಾಮಾಜಿಕ ಜಾಲತಾಣವಾದ ಇನ್​ಸ್ಟಾಗ್ರಾಮ್​ ಸ್ಟೋರಿಯ​ಲ್ಲಿ ಚಿತ್ರಾಲ್​ ವಿವರಿಸಿದ್ದಾರೆ. ವಿಡಿಯೋದಲ್ಲಿ ಆತ ಮಾಡಿರುವ ನಕಲಿ ಖಾತೆ ಇದೆ ಎಂದು ತೋರಿಸಿರುವ ನಟಿ, ಅದನ್ನು ತಮ್ಮ ಅನುಯಾಯಿಗಳ ಮುಂದೆ ಬಹಿರಂಗಪಡಿಸಿದ್ದಾರೆ.

"ಭಗವಂತ ರೇಣುಕಸ್ವಾಮಿ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಿಲಿ. ಆದರೆ, ನಕಲಿ ಖಾತೆಗಳಿಂದ ಅವರು ಇಂತಹ ಆಶ್ಲೀಲ ಮೆಸೇಜ್ ಮಾಡಿರುವುದು ತಪ್ಪು. ಈ ಬಗ್ಗೆ ಕಳೆದ ಕೆಲವು ತಿಂಗಳುಗಳ ಹಿಂದೆ ಪೊಲೀಸ್‌ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ. ಗೌತಮ್‌ ಎನ್ನುವ ಹೆಸರಲ್ಲಿ ಫೇಕ್ ಅಕೌಂಟ್​ ಇತ್ತು. ಈ ಖಾತೆಯಿಂದ ಅಂತಹದ್ದೇ ಕೆಟ್ಟ ಸಂದೇಶಗಳನ್ನು ಹಲವರಿಗೆ ರೇಣುಕಸ್ವಾಮಿ ಕಳುಹಿಸಿದ್ದರಂತೆ. ನನಗೂ ಸಹ ಶಾಕ್ ಆಯಿತು. ನನ್ನ ಇನ್‌ಸ್ಟಾಗ್ರಾಮ್ ಬ್ಲಾಕ್ ಲಿಸ್ಟ್ ಚೆಕ್ ಮಾಡಿದಾಗ, ಈ ಅಕೌಂಟ್ ಅಲ್ಲಿತ್ತು" ಎಂದು ವಿಡಿಯೋದಲ್ಲಿ ವಿವರಿಸಿದ್ದಾರೆ. ಹೆಚ್ಚಿನ ಮಾಹಿತಿ ತಿಳಿಯಲು ನಟಿಯ ಇನ್​ಸ್ಟಾಗ್ರಾಮ್​ ಖಾತೆ ಪರಿಶೀಲಿಸಿ.

ನಟಿಯ ಇನ್​ಸ್ಟಾಗ್ರಾಂ ಖಾತೆ: