ನ್ಯೂಸ್

ನಟಿ ಅನನ್ಯ ಪಾಂಡೆಗೆ 'ಕ್ರಶ್​' ಅಂತೆ ಈ ಸ್ಟಾರ್​ ಕ್ರಿಕೆಟಿಗ!

ಮುಂಬೈ: ಬಹುತೇಕ ಕ್ರಿಕೆಟ್​ ಆಟಗಾರರು ಚಿತ್ರರಂಗದವರಿಗೆ ಚಿರಪರಿಚಿತ. ಕಾರಣ, ಹೊಸ ಹೊಸ ಬ್ರ್ಯಾಂಡ್​ಗಳ ಪ್ರಚಾರ, ಆ್ಯಡ್​ ಶೂಟ್​, ಖಾಸಗಿ ಕಾರ್ಯಕ್ರಮ ಹೀಗೆ ಹಲವಾರು ವಿಷಯಗಳಿಂದ ಪರಸ್ಪರ ಒಬ್ಬರನೊಬ್ಬರು ಮುಖಾಮುಖಿ ಭೇಟಿಯಾಗುತ್ತಾರೆ. ಈ ಮೂಲಕ ಹಲವು ವಿಷಯಗಳು ವಿನಿಮಯವಾಗುತ್ತದೆ. ಇದು ತೀರ ಸಾಮಾನ್ಯ ಸಂಗತಿ ಎಂದೇ ಹೇಳಬಹುದು. ಸ್ಟಾರ್​ ಕ್ರಿಕೆಟಿಗರನ್ನು ಕಂಡರೆ ಚಿತ್ರನಟಿಯರಿಗೆ ಎಷ್ಟೋ ಇಷ್ಟವೋ ಅಷ್ಟೇ ಪ್ರಮಾಣದಲ್ಲಿ ಕ್ರಿಕೆಟ್ ಆಟಗಾರರು ಕೂಡ ತಮ್ಮ ನೆಚ್ಚಿನ ನಟಿಯರ ಬಗ್ಗೆ ಕೆಲವೊಂದು ಸಂದರ್ಶನಗಳಲ್ಲಿ ಮನಬಿಚ್ಚಿ ಮಾತನಾಡುತ್ತಾರೆ.

ಸದ್ಯ ಈ ಸಾಲಿಗೆ ಬಾಲಿವುಡ್​ ನಟಿ ಅನನ್ಯ ಪಾಂಡೆ ಸೇರಿದ್ದು, ಟೀಮ್ ಇಂಡಿಯಾದ ದಿಗ್ಗಜ ಆಟಗಾರ ಎಂದರೆ ತನಗೆ ಬಹಳ ಇಷ್ಟ ಎಂದು ಹೇಳಿಕೊಂಡಿದ್ದಾರೆ. ನನ್ನ 'ಸೆಲೆಬ್ರಿಟಿ ಕ್ರಶ್' ವಿರಾಟ್​ ಕೊಹ್ಲಿ ಎಂದು ಬಹಿರಂಗವಾಗಿ ಹೇಳಿಕೊಂಡಿರುವ ಅನನ್ಯ ಪಾಂಡೆ, ವಿರಾಟ್​ರ ಕ್ರಿಕೆಟಿಂಗ್ ಸ್ಟೈಲ್​, ಆಟದ ವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕ್ರಿಕೆಟಿಗರನ್ನು ಇಷ್ಟಪಡುವ ನಟಿಯರು ಇದೇ ಮೊದಲಲ್ಲ. ಈ ಹಿಂದೆ ಹಲವು ನಟಿಮಣಿಯರು ಇದೇ ರೀತಿ ಭಾರತ ಕ್ರಿಕೆಟ್ ತಂಡದಲ್ಲಿರುವ ತಮ್ಮ ನೆಚ್ಚಿನ ಸ್ಟಾರ್​ ಆಟಗಾರರ ಬಗ್ಗೆ ಅನಿಸಿಕೆ, ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಂಡ ನಿದರ್ಶನಗಳಿವೆ.

ಈ ಹಿಂದೆ ನಟ ವಿಜಯ್ ದೇವರಕೊಂಡ ಜತೆ 'ಲೈಗರ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಅನನ್ಯ ಪಾಂಡೆ, ಚಿತ್ರದ ಸೋಲಿನ ಬಳಿಕ ಅಷ್ಟಾಗಿ ಯಾವ ಸಿನಿಮಾದಲ್ಲಿಯೂ ಸದ್ದು ಮಾಡಲಿಲ್ಲ. ಇದೀಗ ಸಸ್ಪೆನ್ಸ್​-ಥ್ರಿಲ್ಲರ್​ ಜಾನರ್​ನಡಿ ತಯಾರಾಗಿರುವ 'ಸಿಟಿಆರ್​ಎಲ್'​ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿರುವ ಅನನ್ಯ, ಸಿನಿಮಾದ ಗೆಲುವಿನತ್ತ ಎದುರುನೋಡುತ್ತಿದ್ದಾರೆ,(ಏಜೆನ್ಸೀಸ್).