ನ್ಯೂಸ್

ದುಬೈ ಯೂಟ್ಯೂಬರ್​ ಜೊತೆ ತಮಿಳು ನಟಿ ಸುನೈನಾ ನಿಶ್ಚಿತಾರ್ಥ!

Webdesk - Narayanaswamy

ಮುಂಬೈ: ರೆಜಿನಾ' ಮತ್ತು 'ನೀರ್ ಪರವೈ' ಚಿತ್ರಗಳಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾಗಿರುವ ತಮಿಳು ನಟಿ ಸುನೈನಾ ದುಬೈನ ಯೂಟ್ಯೂಬರ್ ಖಲೀದ್ ಅಲ್ ಅಮೇರಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಇಬ್ಬರು ಉಂಗುರಗಳಿರುವ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಖಾತೆಯಲ್ಲಿ ಹಂಚಿಕೊಂಡ ನಂತರ ಊಹಾಪೋಹಗಳು ಹುಟ್ಟಿಕೊಂಡಿವೆ.

ಖಾಲಿದ್ ಅಲ್ ಅಮೇರಿ ಆರು ತಿಂಗಳ ಹಿಂದೆ ತನ್ನ ಪತ್ನಿ ಸಲಾಮಾ ಮೊಹಮ್ಮದ್ ರಿಂದ ವಿಚ್ಛೇದನ ಪಡೆದಿದ್ದರು. ಸುನೈನಾ ಜೊತೆ ಈತ ಪ್ರೀತಿಯಲ್ಲಿ ಬಿದ್ದಿದ್ದ ಎಂದು ಹೇಳಲಾಗುತ್ತಿತ್ತು. ಇದಕ್ಕೆ ಸಾಕ್ಷಿ ಎಂಬಂತೆ ಸುನೈನಾ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಎರಡು ಕೈಗಳು ಪರಸ್ಪರ ಹಿಡಿದಿರುವ ನಿಗೂಢ ಪೋಸ್ಟ್‌ಗಳನ್ನು ಇಬ್ಬರೂ ಹಾಕಿಕೊಂಡಿದ್ದಾರೆ.

ಜೂನ್ 5 ರಂದು ಸುನೈನಾ ಉಂಗುರ ಧರಿಸಿರುವ ಎರಡು ಕೈಗಳನ್ನು (ಒಬ್ಬ ವ್ಯಕ್ತಿ ಮತ್ತು ಅವಳ) ಪರಸ್ಪರ ಹಿಡಿದಿರುವ ಚಿತ್ರವನ್ನು ಹಂಚಿಕೊಂಡಿದ್ದರು. ಶೀರ್ಷಿಕೆಗಾಗಿ ಸುನೈನಾ ಲಾಕ್ ಎಮೋಜಿಯನ್ನು ಸೇರಿಸಿದ್ದಾರೆ. ಆದರೆ, ಆಕೆ ತನ್ನ ಭಾವಿ ಪತಿ ಯಾರೆಂಬುದನ್ನು ಬಹಿರಂಗಪಡಿಸಿಲ್ಲ.

ಏತನ್ಮಧ್ಯೆ, ಜೂನ್ 26 ರಂದು, ಯೂಟ್ಯೂಬರ್ ಖಾಲಿದ್ ಅಲ್ ಅಮೇರಿ (40) ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಇದೇ ರೀತಿಯ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಸುನೈನಾ ಮತ್ತು ಖಾಲಿದ್​ ಇನ್‌ಸ್ಟಾಗ್ರಾಮ್ ಖಾತೆಗಳಲ್ಲಿ ಹಂಚಿಕೊಂಡ ಚಿತ್ರಗಳು ಆನ್‌ಲೈನ್‌ನಲ್ಲಿ ಬಜ್ ಸೃಷ್ಟಿಸಿವೆ. ಅಭಿಮಾನಿಗಳು ಇಬ್ಬರೂ ಪರಸ್ಪರ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಕಾಮೆಂಟ್​ ಹಾಕುತ್ತಿದ್ದಾರೆ.

ಈ ಕಾಮೆಂಟ್​ಗಳಿಗೆ ಸುನೈನಾ, "ಹಾಯ್, ನನ್ನ ಕೊನೆಯ ಪೋಸ್ಟ್‌ಗೆ ಸಂಬಂಧಿಸಿದಂತೆ ನಾನು ಕೆಲವು ಕಾಮೆಂಟ್​ಳನ್ನು ನೋಡಿದ್ದೇನೆ. ಇದು ನಿಜವಾಗಿಯೂ ಸಂತೋಷ ತಂದಿದೆ. ಬರುತ್ತಿರುವ ಎಲ್ಲಾ ಅದ್ಭುತ ಸಂದೇಶಗಳಿಗೆ ಧನ್ಯವಾದಗಳು. ಎಲ್ಲಾ ಅರ್ಥವಾಗಿದೆ" ಎಂದು ಪ್ರತಿಕ್ರಿಯಿಸಿದ್ದಾರೆ.

ವರದಿಗಳ ಪ್ರಕಾರ, ಇವರಿಬ್ಬರೂ ಇದೇ ವರ್ಷ ಮದುವೆಯಾಗುವ ಸಾಧ್ಯತೆಯಿದೆ. ಏತನ್ಮಧ್ಯೆ, ಸುನೈನಾ ಮತ್ತು ಖಾಲಿದ್ ಇಬ್ಬರೂ ತಮ್ಮ ಮದುವೆಯ ಸುದ್ದಿಗೆ ಇನ್ನೂ ಪ್ರತಿಕ್ರಿಯಿಸಿಲ್ಲ.