

ಹೈದರಾಬಾದ್: 'ಕಲ್ಕಿ 2898 ಎಡಿ' ಸಂಗ್ರಹಗಳಲ್ಲಿ ಮತ್ತೊಂದು ಮೈಲಿಗಲ್ಲು ದಾಟಿದೆ. ಇದುವರೆಗೆ ಈ ಸಿನಿಮಾ ವಿಶ್ವದ ನಾನಾ ಕಡೆ 700 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎಂದು ಚಿತ್ರತಂಡ ಪ್ರಕಟಿಸಿದೆ.
ಇದೇ ಕಾರಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ಹೊಸ ಪೋಸ್ಟರ್ ಬಿಡುಗಡೆಯಾಗಿದೆ. ಆದರೆ ಇದರಲ್ಲಿ ಕೇವಲ ದೀಪಿಕಾ ಪಡುಕೋಣೆ ಪಾತ್ರದ ಲುಕ್ ಮಾತ್ರ ಹೈಲೈಟ್ ಆಗಿದೆ. ಈ ಪೌರಾಣಿಕ ವೈಜ್ಞಾನಿಕ ಚಿತ್ರ 1000 ಕೋಟಿ ಕ್ಲಬ್ ಸೇರಲಿದೆ ಎಂದು ಪ್ರಭಾಸ್ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಭಾರೀ ನಿರೀಕ್ಷೆಗಳ ನಡುವೆ ಜೂನ್ 27 ರಂದು ಬಿಡುಗಡೆಯಾದ 'ಕಲ್ಕಿ 2898 ಎಡಿ' ಸಿನಿಮಾ ಪ್ರೇಕ್ಷಕರನ್ನು ಹೊಸ ಲೋಕಕ್ಕೆ ಕೊಂಡೊಯ್ದಿದೆ. ಟಾಪ್ ನಟರಾದ ಅಮಿತಾಭ್ ಬಚ್ಚನ್ ಅಶ್ವತ್ಥಾಮನಾಗಿ, ಕಮಲ್ ಹಾಸನ್ ಸುಪ್ರೀಮ್ ಯಾಸ್ಕಿನ್ ಆಗಿ ಅಭಿನಯಿಸಿದ್ದಾರೆ. ವಿಜಯ್ ದೇವರಕೊಂಡ ಮತ್ತು ದುಲ್ಕರ್ ಸಲ್ಮಾನ್ ಅತಿಥಿ ಪಾತ್ರಗಳೊಂದಿಗೆ ರಂಜಿಸಿದ್ದಾರೆ. ಬೈರವನಾಗಿ ಪ್ರಭಾಸ್ ಸದ್ದು ಮಾಡಿದ್ದಾರೆ.
ನಿರ್ದೇಶಕ ನಾಗ್ ಅಶ್ವಿನ್ ಅವರನ್ನು ಚಿತ್ರರಂಗದ ಗಣ್ಯರು ಹೊಗಳುತ್ತಿದ್ದಾರೆ. ಇದೊಂದು ಅದ್ಭುತ ದೃಶ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.