ಮುಂಬೈ: ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಬಾಲಿವುಡ್ ನಟ ಶಾರುಖ್ ಖಾನ್ ಮುಂಬರುವ ಚಿತ್ರ 'ಜವಾನ್' ಚಿತ್ರದ ಆ್ಯಕ್ಷನ್ಭರಿತ ವಿಡಿಯೊಂದನ್ನು ಹಂಚಿಕೊಂಡಿದ್ದು, ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಅಭಿಮಾನಿಗಳ ಮನ ಗೆದ್ದಿದೆ.
ಇದನ್ನೂ ಓದಿ: ಇದು ಅಂತಿಂಥ ಬೀದಿ ನಾಯಿಯಲ್ಲ: ಪಾಸ್ಪೋರ್ಟ್ ಜತೆ ಶೀಘ್ರದಲ್ಲೇ ಹೊರಡಲಿದೆ ವಿದೇಶಕ್ಕೆ..!
ಜವಾನ್ ಚಿತ್ರದ ಪ್ರಿವ್ಯೂ ಇದಾಗಿದ್ದು, ಎರಡು ನಿಮಿಷಗಳ 12 ಸೆಕೆಂಡ್ ಅವಧಿಯ ಈ ವಿಡಿಯೋದಲ್ಲಿ ಹಲವಾರು ಆ್ಯಕ್ಷನ್, ಥ್ರಿಲ್ಲರ್ ದೃಶ್ಯ ಹಾಗೂ ಸ್ಟಂಟ್ಗಳ ಜತೆಗೆ ಶಾರುಖ್ ವೈಭವವನ್ನು ತೋರಿಸಲಾಗಿದೆ. ವಿಡಿಯೋದಲ್ಲಿನ ಸಾಹಸ ದೃಶ್ಯಗಳು ಮತ್ತು ಬಿಜಿಎಂ ಚಿತ್ರದ ಬಗ್ಗೆ ಭಾರಿ ನಿರೀಕ್ಷೆಯನ್ನು ಹುಟ್ಟುಹಾಕಿದೆ.
ಜವಾನ್ ಚಿತ್ರವು ಸೆಪ್ಟೆಂಬರ್ 7ರಂದು ಬಿಡುಗಡೆಯಾಗಲಿದ್ದು, ತಮಿಳಿನ ಖ್ಯಾತ ನಿರ್ದೇಶಕ ಅಟ್ಲಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಟ್ರೇಂಡ್ ಆಗಿದ್ದು, ಸಾಕಷ್ಟು ರೋಮಾಂಚನವನ್ನು ಸೃಷ್ಟಿಸಿದೆ. ವಿಡಿಯೋದಲ್ಲಿ ಶಾರುಖ್, ವಿವಿಧ ಶೈಲಿಗಳಲ್ಲಿ ಕಾಣಿಸಿಕೊಂಡಿದ್ದು ಫಿಟ್ ಸ್ಟೈಲ್‌ನ ಪೋಲೀಸ್ ಅಧಿಕಾರಿಯಾಗಿ, ನಂತರ ಬೋಳು ನೋಟದ ಲುಕ್ ಹಾಗೂ ಮಾಸ್ಕ ಧರಿಸಿದ ಲುಕ್ನ್ನು ತೋರಿಸಲಾಗಿದೆ.
ಇದನ್ನೂ ಓದಿ: ಶಿಕ್ಷಣದಲ್ಲಿ ಸಾಂಸ್ಕೃತಿಕ, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಅತ್ಯವಶ್ಯಕ: ರಾಜ್ಯಪಾಲ ಗೆಹ್ಲೋಟ್ ಅಭಿಪ್ರಾಯ
ಜವಾನ್ ಚಿತ್ರದಲ್ಲಿ ನಯನತಾರಾ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡರೆ, ದೀಪಿಕಾ ಪಡುಕೋಣೆ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದಕ್ಷಿಣ ಚಿತ್ರರಂಗದಲ್ಲಿ ಹೆಸರು ಮಾಡಿರುವ ನಟ ವಿಜಯ್ ಸೇತುಪತಿ ಖಳನಟರಾಗಿ ಈ ಚಿತ್ರದ ಮೂಲಕ ಹಿಂದಿ ರಂಗಭೂಮಿಗೆ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. ಇನ್ನು ಉಳಿದಂತೆ ಈ ಚಿತ್ರದಲ್ಲಿ ಸನ್ಯಾ ಮಲ್ಹೋತ್ರಾ, ಪ್ರಿಯಾಮಣಿ, ಸುನಿಲ್ ಗ್ರೋವರ್, ರಿಧಿ ಡೋಗ್ರಾ ಸೇರಿದಂತೆ ಇತರರು ನಟಿಸಿದ್ದಾರೆ. ಈ ಚಿತ್ರವು ಸೆಪ್ಟೆಂಬರ್ 7ರಂದು ಬಿಡುಗಡೆಯಾಗಲಿದೆ.(ಏಜೆನ್ಸೀಸ್)