More

    ಇದು ಅಂತಿಂಥ ಬೀದಿ ನಾಯಿಯಲ್ಲ: ಪಾಸ್​ಪೋರ್ಟ್​ ಜತೆ ಶೀಘ್ರದಲ್ಲೇ ಹೊರಡಲಿದೆ ವಿದೇಶಕ್ಕೆ..!

    ದೆಹಲಿ: ಬಹುತೇಕ ಭಾರತೀಯರಿಗೆ ವಿದೇಶ ಪ್ರವಾಸ ಮಾಡುವುದು ಇನ್ನೂ ಕನಸಾಗಿರುವಾಗಲೇ ವಾರಣಾಸಿಯ ಈ ಬೀದಿ ನಾಯಿಯೊಂದು ವಿಸಾವನ್ನು ಪಡೆದು ವಿದೇಶಕ್ಕೆ ಹಾರಲು ಮುಂದಾಗಿದೆ.

    ಇದನ್ನೂ ಓದಿ: ಮೃಗೀಯ ವರ್ತನೆ: 13 ವರ್ಷದ ಬಾಲಕನ ಮೇಲೆ ಅತ್ಯಾಚಾರವೆಸಗಿದ ಕಾಮಾಂಧರು

    ಉತ್ತರ ಪ್ರದೇಶ ಮೂಲದ ಮೋತಿ ಎಂಬ ನಾಯಿಯು ತನ್ನ ಪಾಸ್‌ಪೋರ್ಟ್ ಪಡೆದಿದ್ದು, ಈ ತಿಂಗಳು ಇಟಲಿಗೆ ತೆರಳಲು ಸಿದ್ಧವಾಗಿದೆ. ಇಟಾಲಿಯನ್ ಲೇಖಕಿ ವೆರಾ ಲಝಾರೆಟ್ಟಿ ಮೋತಿಯನ್ನು ಅಧಿಕೃತವಾಗಿ ದತ್ತು ತೆಗೆದುಕೊಳ್ಳಲು ನಿರ್ಧರಿಸಿದ್ದಾಳೆ. ವೆರಾ ಕಳೆದ ಹತ್ತು ವರ್ಷಗಳಿಂದ ಸಂಶೋಧನಾ ಕಾರ್ಯಕ್ಕಾಗಿ ಭಾರತಕ್ಕೆ ಭೇಟಿ ನೀಡುತ್ತಿದ್ದು, ಈ ನಡುವೆ ಆಕೆ ಮೋತಿಯ ಬಗ್ಗೆ ಒಲವು ಬೆಳೆಸಿಕೊಂಡಿದ್ದಳು. ಅಲ್ಲದೇ, ಬಡ ಜೀವಿಯ ಮೇಲೆ ಸ್ಥಳೀಯರು ಕ್ರೌರ್ಯವನ್ನು ನಡೆಸಿದ್ದು, ಆ ಬೀದಿ ನಾಯಿಯನ್ನು ಆಕೆ ದತ್ತು ಪಡೆಯುವಂತಾಗಿದೆ.

    ವೆರಾ, ಈ ಬೀದಿ ನಾಯಿಯನ್ನು ಕರೆದುಕೊಂಡು ಹೋಗಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿದ್ಧತೆ ನಡೆದಿದ್ದು ಇದಕ್ಕಾಗಿ ಪಾಸ್‌ಪೋರ್ಟ್ ಕೂಡ ನೀಡಲಾಗಿದೆ. ಪ್ರಾಣಿಗಳನ್ನು ವಿದೇಶಕ್ಕೆ ಕಳುಹಿಸಲು ವ್ಯಾಕ್ಸಿನೇಷನ್ ಸೇರಿದಂತೆ ಅನೇಕ ದಾಖಲೆಯ ಜತೆಗೆ ಮೋತಿಯ ಹಿಂಭಾಗದಲ್ಲಿ ಮೈಕ್ರೋಚಿಪ್ ಕೂಡ ಅಳವಡಿಸಲಾಗಿದೆ.

    ಇದನ್ನೂ ಓದಿ: VIDEO | ಸುಮ್ಮನೆ ಹೊರಟಿದ್ದ ವ್ಯಕ್ತಿಯ ಮೇಲೆ ಎರಡೆರಡು ಬಾರಿ ಹರಿದ ಆಂಬುಲೆನ್ಸ್​​​

    ಈ ಮೈಕ್ರೊಚಿಪ್ ಅಳವಡಿಕೆಯಿಂದ, ಆ ಪ್ರಾಣಿಯ ಬಗೆಗೆ ಎಲ್ಲಾ ವಿವರಗಳನ್ನು ಪಡೆಯಲು ಅಧಿಕಾರಿಗಳಿಗೆ ಸಹಾಯವಾಗುತ್ತದೆ. ವೆರಾ ಹಾಗೂ ಮೋತಿ ಜುಲೈ 13ರಂದು ದೆಹಲಿಯಿಂದ ಇಟಲಿಗೆ ಹಾರಾಟ ನಡೆಸಲಿದ್ದಾರೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts