ನ್ಯೂಸ್

ವಿನೀಶ್‌ ಜತೆ ವಿಜಯಲಕ್ಷ್ಮಿ ದರ್ಶನ್ ವ್ಯಾಲೆಂಟೈನ್ಸ್ ಡೇ; ಡಿ ಬಾಸ್‌ ಎಲ್ಲಿ ಎಂದ್ರು ಫ್ಯಾನ್ಸ್​

ಬೆಂಗಳೂರು: ವಿಶ್ವದಾದ್ಯಂತ ಪ್ರತಿ ವರ್ಷ ಫೆಬ್ರವರಿ 14ರಂದು ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತೆ. ಇಂದು ಪ್ರೇಮಿಗಳು ತಮ್ಮ ಜೀವನ ಸಂಗಾತಿಯ ಜತೆ ಸೆಲೆಬ್ರೆಟ್​​ ಮಾಡುತ್ತಾರೆ. ಆದರೆ ಸ್ಯಾಂಡಲ್​ವುಡ್​ ನಟ ದರ್ಶನ್​​ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್‌ ಕೊಂಚ ವಿಭಿನ್ನವಾಗಿ ಸೆಲೆಬ್ರೆಟ್​​ ಮಾಡಿದ್ದಾರೆ.

ಇಂದು ಪ್ರೇಮಿಗಳ ದಿನದ ಪ್ರಯುಕ್ತ ವಿಜಯಲಕ್ಷ್ಮಿ ದರ್ಶನ್‌ ಮಗ ವಿನೀಶ್‌ ಜೊತೆಗಿರುವ ಫೋಟೋ ಅಪ್ಲೋಡ್ ಮಾಡಿದ್ದಾರೆ. ಯಾರ ದೃಷ್ಠಿ ಬೀಳದಂತೆ ಈವಿಲ್ ಐ ಹಾಕಿದ್ದಾರೆ. ಈ ಫೋಟೋ ನೋಡಿದ ದರ್ಶನ್​​ ಅಭಿಮಾನಿಗಳು ಹಾಗೂ ನೆಟ್ಟಿಗರು ಡಿ ಬಾಸ್​​ ಎಲ್ಲಿ? ನೀವು ಜೂನಿಯರ್​ ಡಿ ಬಾಸ್​​ ಮಾತ್ರ ಇದ್ದಾರೆ ನಮ್ಮ ಬಾಸ್​​ ಎಲ್ಲಿ? ಫೆಬ್ರವರಿ 16ರಂದು ಮಿಸ್ ಮಾಡದೆ ನಮ್ಮ ಡಿ ಬಾಸ್​​ ಫೋಟೋ ಅಪ್ಲೋಡ್ ಮಾಡಿ ಎಂದು ನೆಟ್ಟಿಗರು ಮನವಿ ಮಾಡಿದ್ದಾರೆ.

ದರ್ಶನ್ ಮತ್ತು ವಿಜಯಲಕ್ಷ್ಮಿರವರ ಏಕೈಕ ಮುದ್ದಿನ ಮಗ ವಿನೀಶ್‌ ಕೂಡ ಈಗ ಸಖತ್ ಫೇಮಸ್. ವಿನೀಶ್‌ ಕೂಡ ಅಪ್ಪನಂತೆ ಪ್ರಾಣಿ-ಪಕ್ಷಿಗಳ ಮೇಲೆ ಆಸಕ್ತಿ ಹೊಂದಿದ್ದಾರೆ.

ನಟ ದರ್ಶನ್‌ ಕಾಟೇರ ಸಿನಿಮಾ ಯಶಸ್ಸಿನ ನಂತರ ಮತ್ತೊಂದು ಸಿನಿಮಾ ಪ್ರಾಜೆಕ್ಟ್‌ ಶುರು ಮಾಡಲು ಸಜ್ಜಾಗಿದ್ದಾರೆ. ಅದೇ ಡೆವಿಲ್. ಸಿನಿಮಾ ಚಿತ್ರೀಕರಣ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಸದ್ಯ ದರ್ಶನ್ ಹುಟ್ಟುಹಬ್ಬಕ್ಕೆ ಆಪ್ತರು ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ.