ಬೆಂಗಳೂರು: ಇಂದು (ಡಿ.09) ಚಿತ್ರದುರ್ಗದ ರೇಣುಕಸ್ವಾಮಿ ಬರ್ಬರ ಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿರುವ ಎ2 ಆರೋಪಿ ದರ್ಶನ್ (Darshan) ಜಾಮೀನು ಅರ್ಜಿ ವಿಚಾರಣೆಯನ್ನು ನಡೆಸಿದ ಹೈಕೋರ್ಟ್, ವಾದ-ಪ್ರತಿವಾದ ಆಲಿಸಿದ ಬಳಿಕ ಮಧ್ಯಂತರ ಜಾಮೀನು ಅವಧಿಯನ್ನು ವಿಸ್ತರಿಸಿದೆ.
ಇದನ್ನೂ ಓದಿ: ದೇವಾಲಯಗಳ ಜೀರ್ಣೋದ್ಧಾರ ಗ್ರಾಮದ ಅಭಿವೃದ್ಧಿ ಸಂಕೇತ
ಡಿ.11ರಂದು ಆರೋಪಿ ದರ್ಶನ್ಗೆ ನೀಡಲಾದ ಆರು ವಾರಗಳ ಮಧ್ಯಂತರ ಜಾಮೀನು ಅಂತ್ಯವಾಗಲಿದ್ದು, ಇದೇ ದಿನ ದರ್ಶನ್ಗೆ ಸರ್ಜರಿ ಆಗಲಿದೆ ಎಂದು ಹಿರಿಯ ವಕೀಲ ಸಿ.ವಿ.ನಾಗೇಶ್ ಮಾಹಿತಿ ನೀಡಿದ್ದಾರೆ. ಸದ್ಯ ಆರೋಪಿ ದರ್ಶನ್ಗೆ ತಾತ್ಕಾಲಿಕ ರಿಲೀಫ್ ನೀಡಿರುವ ಕೋರ್ಟ್, ಮುಂದಿನ ದಿನಾಂಕ ಘೋಷಣೆ ಮಾಡುವವರೆಗೂ ಜಾಮೀನು ವಿಸ್ತರಣೆ ಅನ್ವಯವಾಗಲಿದೆ ಎಂದು ತಿಳಿಸಿದೆ.