ಬಾಳೆಹೊನ್ನೂರು: ದೇವಾಲಯಗಳ ಜೀರ್ಣೋದ್ಧಾರ ಹಾಗೂ ದೇವರ ಪುನರ್ ಪ್ರತಿಷ್ಠಾಪನೆ ಗ್ರಾಮಗಳ ಅಭಿವೃದ್ಧಿಯ ಸಂಕೇತ ಎಂದು ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ ಹೇಳಿದರು.
ಬೆರಣಗೋಡು ಗ್ರಾಮದಲ್ಲಿ ನಡೆದ ಶ್ರೀ ದೇವೀರಮ್ಮ ಮತ್ತು ಶ್ರೀ ಕುಮಾರಲಿಂಗ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಅಧುನಿಕತೆ ಭರಾಟೆಯಲ್ಲಿ ಸಂಸ್ಕೃತಿ ಸಂಪ್ರದಾಯಗಳು ಮರೆಯಾಗುತ್ತಿದ್ದು, ಮಕ್ಕಳಿಗೆ ದೇಶದ ಇತಿಹಾಸ ಹಾಗೂ ಅಧ್ಯಾತ್ಮಿಕ ಚಿಂತನೆ ಅರಿವು ಮೂಡಿಸುವಲ್ಲಿ ತಾಯಂದಿರ ಪಾತ್ರ ಮಹತ್ವದ್ದಾಗಿದೆ. ಶ್ರದ್ಧೆಯಿಂದ ದೇವರಲ್ಲಿ ಭಕ್ತಿ ಹೊಂದಬೇಕಿದ್ದು, ಜಗತ್ತು ಭಗವಂತನ ಶಕ್ತಿಯಿಂದ ತುಂಬಿದೆ ಎಂಬುದನ್ನು ಪ್ರತಿಯೊಬ್ಬರು ಅರಿಯಬೇಕಿದೆ.
ಪ್ರತಿ ವಸ್ತುವಿನಲ್ಲೂ ಭಗವಂತ ಅಡಗಿದ್ದು, ಅಣು ಅಣುವು ಅವನ ಶಕ್ತಿಯಿಂದ ಕೂಡಿದೆ. ನಾವುಗಳು ಮಾಡುವ ಕೆಲಸದಲ್ಲಿ ಸ್ವಾರ್ಥ ಸಾಧನೆ ಇರದೆ ಜಗತ್ತಿನ ಒಳಿತಿನ ನಿಸ್ವಾರ್ಥ ಸೇವೆ ಇರಬೇಕು. ಧರ್ಮವನ್ನು ರಕ್ಷಿಸಿದರೆ, ಧರ್ಮ ನಮ್ಮನ್ನು ರಕ್ಷಿಸುತ್ತದೆ. ಗ್ರಾಮ ದೇವತೆಗಳ ಆರಾಧನೆ ನಿರಂತರವಾಗಿದ್ದಾಗ ಜೀವನದಲ್ಲಿ ಶ್ರೇಯಸ್ಸು ಸಾಧ್ಯ ಎಂದರು.
ದೇವಾಲಯದ ಪ್ರತಿಷ್ಠಾಪನೆ ಅಂಗವಾಗಿ ಎರಡು ದಿನ ವಿವಿಧ ಹೋಮ, ಕಲಶ ಸ್ಥಾಪನೆ, ದಿಕ್ಬಲಿ, ಕಳಸ ಪ್ರತಿಷ್ಠೆ, ಕುಂಭಾಭಿಷೇಕ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಮುಂತಾದವು ಅರ್ಚಕ ರಂಗಶಾಸ್ತ್ರಿಗಳ ನೇತೃತ್ವದಲ್ಲಿ ನಡೆಯಿತು.
ಬಿ.ಜಿ.ನಾಗೇಶ್‌ಗೌಡ, ಬಿ.ಎನ್.ಸೋಮೇಶ್, ಬಿ.ಜಿ.ಚಂದ್ರೇಗೌಡ, ಬಿ.ಸಿ.ಮಂಜುನಾಥ, ಉಜ್ಜಿನಿ ಗೋಪಾಲಗೌಡ, ಶ್ರೀಧರ, ಮಹೇಶ್ ಮತ್ತಿತರರು ಹಾಜರಿದ್ದರು.
ದೇವಾಲಯಗಳ ಜೀರ್ಣೋದ್ಧಾರ ಗ್ರಾಮದ ಅಭಿವೃದ್ಧಿ ಸಂಕೇತ
You Might Also Like
ಕೇವಲ 10 ನಿಮಿಷದಲ್ಲಿ ಮನೆಯಲ್ಲೇ ಮಾಡಿ ಬ್ರೆಡ್ ಪಿಜ್ಜಾ; ಇಲ್ಲಿದೆ ಸಿಂಪಲ್ ವಿಧಾನ | Recipe
ಮನೆಯಲ್ಲಿದ್ದಾಗ ಕೆಲವೊಮ್ಮೆ ಬಹಳ ಹಸಿವಾಗುತ್ತಿರುತ್ತದೆ ಆದರೆ ಆ ಸಮಯದಲ್ಲಿ ಏನು ತಿನ್ನಬೇಕು ಎಂಬುದೆ ನಮಗೆ ತಿಳಿಯುವುದಿಲ್ಲ.…
ಊಟದ ಬಳಿಕ ಬೆಲ್ಲದ ಸೇವನೆಯಿಂದಾಗುವ ಪ್ರಯೋಜನ ಗೊತ್ತಾ?; ತಿಳಿದ್ರೆ ನೀವು ಮಿಸ್ ಮಾಡೋದೆ ಇಲ್ಲ | Health Tips
ಭಾರತದಲ್ಲಿ ಬೆಲ್ಲವನ್ನು ಸಾಮಾನ್ಯವಾಗಿ ಊಟದ ನಂತರ ತಿನ್ನಲಾಗುತ್ತದೆ. ನಿಮ್ಮ ಹಸಿವನ್ನು ನೀಗಿಸಲು ಇದನ್ನು ಸಿಹಿಯಾಗಿ ಸೇವಿಸಬಹುದು.…
ಟೊಮೆಟೊ ಸೇವನೆ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆಯೇ; ಈ ಬಗ್ಗೆ ತಜ್ಞರು ಹೇಳೋದೇನು? | Health Tips
ಕ್ಯಾನ್ಸರ್ ಚಿಕಿತ್ಸೆಯು ಇನ್ನೂ ಅತ್ಯಂತ ದುಬಾರಿ ಮತ್ತು ಅಸಾಧ್ಯವಾಗಿದೆ. ಇತ್ತೀಚೆಗೆ ಯುವಕರನ್ನೂ ಕಾಡುತ್ತಿರುವ ರೋಗ ಕ್ಯಾನ್ಸರ್.…