ನ್ಯೂಸ್

ನಿಶಾ ನರಸಪ್ಪ ಬಗ್ಗೆ ನಟ ಮಾಸ್ಟರ್ ಆನಂದ್ ಹೇಳಿದ್ದು ಹೀಗೆ…

ಬೆಂಗಳೂರು: ಬಾಲ ನಟಿ ವಂಶಿಕಾ ಹೆಸರು ದುರ್ಬಳಕೆ ಆರೋಪ ಹಿನ್ನೆಲೆಯಲ್ಲಿ ಸದಾಶಿವನಗರ ಠಾಣೆ ಬಳಿ ಮಾಸ್ಟರ್ ಆನಂದ್ ಹೇಳಿಕೆ ನೀಡಿದ್ದಾರೆ.
ನಿಶಾ ನರಸಪ್ಪ, ಇನ್ಸ್ಟಾಗ್ರಾಂನಲ್ಲಿ ಎಲ್ಲರಿಗೂ ಮೆಸೇಜ್ ಮಾಡಿ ಆಸೆ ತೋರಿಸಿದ್ದಾರೆ. ಇದನ್ನು ನಂಬಿ ಜನರೂ ಹಣ ಹಾಕಿದ್ದಾರೆ. ನಮ್ಮ ಮಗಳ ಹೆಸರು ಮಿಸ್ ಯೂಸ್ ಆಗಿದೆ ಎಂದು ತಿಳಿಸಿದ್ದಾರೆ.

ಪೋಷಕರು ಕಣ್ಣು ಮುಚ್ಚಿ ಸಹಿ ಹಾಕಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿರುವ ಆನಂದ್, ನಾನ್ ರಿಪೆಂಡ್ ಮಾಡಲ್ಲ ಅಂತ ಕಂಡಿಷನ್ ಇರುತ್ತದೆ. ಸೋಷಿಯಲ್ ಮೀಡಿಯಾ ನಂಬಿ ಮೋಸ ಹೋಗಬೇಡಿ ಎಂದು ಮನವಿ ಮಾಡಿದ್ದಾರೆ.

ನನ್ನ ಮಗಳು, ಪತ್ನಿ ಯಶಸ್ವಿನಿ ಎರಡು ಇವೆಂಟ್​​ಗೆ ಹೋಗಿದ್ದಾರೆ. ಹಣ ಕೊಟ್ಟರೆ ಸಿನಿಮಾದಲ್ಲಿ ಚಾನ್ಸ್ ಕೊಡುತ್ತಾರೆ ಅನ್ನೋದು ಸುಳ್ಳು. ನಿಮ್ ಟ್ಯಾಲೆಂಟ್ ಇದ್ರೆ ಮಾತ್ರ ಆಕ್ಟಿಂಗ್ ಚಾನ್ಸ್ ಸಿಗುತ್ತದೆ. ಸೆಲೆಬ್ರಿಟಿ ಫೋಟೋ ಇಟ್ಕೊಂಡು ನಿಶಾ ಹಣ ಮಾಡಿದ್ದಾರೆ. ಇದನ್ನು ನಿಶಾ ಬಗೆಹರಿಸಿಕೊಳ್ಳಬೇಕು. ಯಾರಿಗೆ ಮೋಸ ಆಗಿದೆ ಅವರಿಗೆ ನಿಶಾ ಹಣ ಮರುಪಾವತಿ ಮಾಡಬೇಕು ಎಂದು ಮಾಸ್ಟರ್ ಆನಂದ್ ಆಗ್ರಹಿಸಿದ್ದಾರೆ.