More

    ಅತಿ ಹೆಚ್ಚು ಜನ ವೀಕ್ಷಿಸಿದ ಭಾರತೀಯ ಚಲನಚಿತ್ರವಿದು…ಕೆಜಿಎಫ್, ಬಾಹುಬಲಿ, ಪಠಾಣ್, ಆರ್‌ಆರ್‌ಆರ್ ಇದಾವುದೂ ಅಲ್ವಂತೆ ಮತ್ಯಾವುದು?

    ಮುಂಬೈ: ಬಾಕ್ಸ್ ಆಫೀಸ್ ಲೆಕ್ಕಚಾರಗಳು ಸಿನಿಮಾ ಕಲೆಕ್ಷನ್‌ ಮೇಲೆ ಮಾತ್ರ ನಿಂತಿರುವುದಿಲ್ಲ. ಚಿತ್ರದ ಯಶಸ್ಸು, ಎಷ್ಟು ಸಮಯ ಓಡಿತು ಎಂಬುದರ ಮೇಲೆಯೂ ಅಳೆಯಲಾಗುತ್ತದೆ. ಅಂದಹಾಗೆ ಅತಿ ಹೆಚ್ಚು ಜನ ವೀಕ್ಷಿಸಿದ ಭಾರತದ ಚಲನಚಿತ್ರ ಯಾವುದು? ಎಷ್ಟು ಟಿಕೆಟ್‌ಗಳನ್ನು ಮಾರಾಟ ಮಾಡಲಾಯ್ತು? ಎಂಬಿತ್ಯಾದಿ ವಿವರಗಳಿಗಾಗಿ ಮುಂದೆ ಓದಿ…

    ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಭಾರತದ ಚಲನಚಿತ್ರ
    ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅತಿದೊಡ್ಡ ಬ್ಲಾಕ್ಬಸ್ಟರ್ ಎಂದರೆ ರಮೇಶ್ ಸಿಪ್ಪಿ ಅವರ ಶೋಲೆ. 1975 ರಲ್ಲಿ ಬಿಡುಗಡೆಯಾದ ಈ ಚಲನಚಿತ್ರವು ಸಾರ್ವಕಾಲಿಕ ಬ್ಲಾಕ್‌ಬಸ್ಟರ್ ಆಗಿದೆ. ಅಷ್ಟೇ ಅಲ್ಲ, ಅತಿ ಹೆಚ್ಚು ಗಳಿಕೆಯ ಭಾರತೀಯ ಚಲನಚಿತ್ರವಾಯಿತು. ಇದು ಸುಮಾರು ಒಂದು ದಶಕದ ಕಾಲ ಇದೇ ಟ್ಯಾಗ್ ಹೊಂದಿದೆ. ಚಿತ್ರವು ಸಾಗರೋತ್ತರದಲ್ಲೂ ಬ್ಲಾಕ್‌ಬಸ್ಟರ್ ಆಗಿತ್ತು. ವಿಶೇಷವಾಗಿ ಸೋವಿಯತ್ ರಷ್ಯಾದಲ್ಲಿ. ಆರಂಭದಲ್ಲಿ ಚಿತ್ರದ 4.8 ಕೋಟಿ ಟಿಕೆಟ್‌ಗಳು ಮತ್ತು ಒಟ್ಟಾರೆ 6 ಕೋಟಿ ಟಿಕೆಟ್‌ಗಳನ್ನು ಮಾರಾಟ ಮಾಡಲಾಯಿತು.

    ಅತಿ ಹೆಚ್ಚು ವೀಕ್ಷಿಸಿದ ಟಾಪ್ 10 ಚಲನಚಿತ್ರಗಳು
    ಮೂಲಗಳ ಪ್ರಕಾರ ಶೋಲೆ ನಂತರ ಬಾಹುಬಲಿ 2: ದಿ ಕನ್‌ಕ್ಲೂಷನ್, ಮೊಘಲ್-ಎ-ಆಜಮ್, ಮದರ್ ಇಂಡಿಯಾ, ಹಮ್ ಆಪ್ಕೆ ಹೈ ಕೌನ್, ಮುಖದ್ದರ್ ಕಾ ಸಿಕಂದರ್, ಅಮರ್ ಅಕ್ಬರ್ ಆಂಥೋನಿ, ಕ್ರಾಂತಿ, ಬಾಬಿ, ಗಂಗಾ ಜಮ್ನಾ ಹೆಚ್ಚು ವೀಕ್ಷಿಸಿದ ಚಿತ್ರಗಳಾಗಿವೆ. ಇತ್ತೀಚೆಗೆ ಬಿಡುಗಡೆಯಾದ ಗದರ್, ಕೆಜಿಎಫ್ ಅಧ್ಯಾಯ 2 ಮತ್ತು ಸಂಗಮ್ ಸಹ ಹೆಚ್ಚು ವೀಕ್ಷಿಸಿದ ಚಿತ್ರಗಳ ಪಟ್ಟಿಗೆ ಸೇರಿವೆ.

    ಕಲೆಕ್ಷನ್​ನಲ್ಲೂ ಫಸ್ಟ್
    ಶೋಲೆ 1975 ರಲ್ಲಿ ಬಿಡುಗಡೆಯಾದ ನಂತರ ಪ್ರಪಂಚದಾದ್ಯಂತ 35 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ಇಂದಿನ ಅಂಕಿಅಂಶಗಳಿಗೆ ಹೋಲಿಸಿದರೆ ಸುಮಾರು 2800 ಕೋಟಿ ರೂಪಾಯಿಗಳಷ್ಟಿರುತ್ತದೆ. ಅಂದರೆ ಇದು ಮುಘಲ್-ಎ-ಅಜಮ್ ಹೊರತುಪಡಿಸಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ, ವೀಕ್ಷಕರು ವೀಕ್ಷಣೆ ಮಾಡಿದ ಭಾರತೀಯ ಚಲನಚಿತ್ರವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts