‘ಪುಷ್ಪ 2’ ಟೀಸರ್ ಬಿಡುಗಡೆ: ಗಡಗಡ ನಡುಗಿಸುತ್ತೆ ಅಲ್ಲು ಅರ್ಜುನ್ ‘ಗಂಗಮ್ಮ’ ಅವತಾರ..!

2 Min Read
'ಪುಷ್ಪ 2' ಟೀಸರ್ ಬಿಡುಗಡೆ: ಗಡಗಡ ನಡುಗಿಸುತ್ತೆ ಅಲ್ಲು ಅರ್ಜುನ್ 'ಗಂಗಮ್ಮ' ಅವತಾರ..!

ಹೈದರಾಬಾದ್​: ಇಂದು (ಏಪ್ರಿಲ್ 8) ಅಲ್ಲು ಅರ್ಜುನ್ ಹುಟ್ಟಿದ ದಿನ. ಹಾಗಾಗಿ ಅವರ ಮುಂಬರುವ ಚಿತ್ರ ‘ಪುಷ್ಪ 2’ ಟೀಸರ್ ಹೊರಬಂದಿದೆ. ಮೈತ್ರಿ ಮೂವೀ ಮೇಕರ್ಸ್ ನಿರ್ಮಾಣದಲ್ಲಿ ಸುಕುಮಾರ್ ನಿರ್ದೇಶಿಸಿದ್ದು, ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದಾರೆ. ಈ ಸಿನಿಮಾದಲ್ಲಿ ಅತ್ಯಂತ ಆಕರ್ಷಣೀಯವಾಗಿ ಚಿತ್ರೀಕರಿಸಿಕೊಂಡಿರುವ ಗಂಗಮ್ಮ ಜಾತ್ರೆಯಲ್ಲಿ ಅಲ್ಲು ಅರ್ಜುನ್ ಗಂಗಮ್ಮನಾಗಿ ಕಾಣಿಸಿಕೊಂಡಿರುವ ವಿಡಿಯೋವನ್ನು ನಿರ್ಮಾಪಕರು ಬಿಡುಗಡೆ ಮಾಡಿದ್ದಾರೆ.

ಇದನ್ನೂ ನೋಡಿ: ಈ ಬಾರಿ ಬಿಜೆಪಿ ಪರ ಪ್ರಚಾರ ಮಾಡಲಾಗದು ಎಂದ ಖುಷ್ಬೂ..ಕಾರಣವೇನು ಗೊತ್ತೇ?

ಇದರಲ್ಲಿ ಅಲ್ಲು ಅರ್ಜುನ್ ಅವರ ವೇಷಭೂಷಣ ಮತ್ತು ನಡಿಗೆ ಅಭಿಮಾನಿಗಳನ್ನು ರಂಜಿಸುವುದಲ್ಲದೆ, ಚಿತ್ರದ ಪ್ರಮುಖ ದೃಶ್ಯವಾಗಿದೆ. ಕೆಲವು ನಿಮಿಷಗಳ ಕಾಲ ನಡೆಯುವ ಈ ಸಂಪೂರ್ಣ ದೃಶ್ಯವನ್ನು ಪ್ರೇಕ್ಷಕರಿಗೆ ಕುತೂಹಲ ಕೆರಳಿಸುವಂತೆ ಚಿತ್ರೀಕರಿಸಲಾಗಿದೆ.

ಇನ್ನು ‘ಪುಷ್ಪ 2’ ಸಿನಿಮಾದಲ್ಲಿ ಇಂತಹ ಹಲವು ದೃಶ್ಯಗಳಿವೆ ಎನ್ನಲಾಗಿದೆ. ಅಲ್ಲು ಅರ್ಜುನ್ ಹುಟ್ಟುಹಬ್ಬದಂದು ಬಿಡುಗಡೆಯಾಗಿರುವ ಈ ಟೀಸರ್ ನಿಂದಾಗಿ ‘ಪುಷ್ಪ 2’ ಸಿನಿಮಾದ ನಿರೀಕ್ಷೆ ಇನ್ನಷ್ಟು ಹೆಚ್ಚಿದೆ ಎನ್ನಬಹುದು.

ಐಕಾನ್ ಸ್ಟಾರ್ ಅಲ್ಲು ಅರ್ಜುನ್-ಸುಕುಮಾರ್ ಕಾಂಬಿನೇಷನ್​ನಲ್ಲಿ ಪುಷ್ಪಾ ಭಾಗ 1 ಭಾರೀ ಯಶಸ್ಸು ಕಂಡಿತ್ತು. ಈ ಚಿತ್ರ ದಾಖಲೆಯ ಕಲೆಕ್ಷನ್ ಮಾಡಿತ್ತು. ಹೀಗಾಗಿ ಇದರ ಮುಂದುವರಿದ ಪುಷ್ಪಾ ಭಾಗ 2 ಬರುತ್ತಿರುವುದು ಗೊತ್ತೇ ಇದೆ. ಹೀಗಾಗಿಯೇ ಪುಷ್ಪ 2 ದಿ ರೂಲ್‌ನ ಟೀಸರ್ ಅನ್ನು ಅಲ್ಲು ಅರ್ಜುನ್ ಹುಟ್ಟುಹಬ್ಬದ ಸಂದರ್ಭ ಬಿಡುಗಡೆ ಮಾಡಲಾಯಿತು. ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಇದು ಯೂಟ್ಯೂಬ್‌ನಲ್ಲಿ ದಾಖಲೆಗಳನ್ನು ಮುರಿದು ವೀಕ್ಷಣೆಗಳನ್ನು ಪಡೆಯುತ್ತಿದೆ.

ಇನ್ನು ಟೀಸರ್ ವಿಚಾರಕ್ಕೆ ಬಂದರೆ, 1:08 ನಿಮಿಷದ ಈ ಟೀಸರ್ ನಲ್ಲಿ ಗಂಗಮ್ಮ ಜಾತ್ರೆಗೆ ಸಂಬಂಧಿಸಿದ ದೃಶ್ಯಗಳನ್ನಷ್ಟೇ ತೋರಿಸಲಾಗಿದೆ. ಅಮ್ಮನ ವೇಷದಲ್ಲಿ ಅಲ್ಲು ಅರ್ಜುನ್​ ವಿಶ್ವರೂಪ ತೋರಿದರು. ರಾಕ್ಷಸರನ್ನು ಕೊಲ್ಲುವ ಅವತಾರದಲ್ಲಿ ಬನ್ನಿ ಸೃಷ್ಟಿಸಿದ ಹೀರೋಯಿಸಂಗೆ ಥಿಯೇಟರ್‌ಗಳು ಫುಲ್​ ರಶ್​ ಆಗಬಹುದು ಎನ್ನುತ್ತಾರೆ ಅಭಿಮಾನಿಗಳು.

See also  ಉನ್ನತ ಶಿಕ್ಷಣದಲ್ಲಿ ವಿದ್ಯಾರ್ಥಿನಿಯರ ಪ್ರಮಾಣ ಹೆಚ್ಚಳ; ಕರ್ನಾಟಕದ ಸ್ಥಾನವೆಷ್ಟು?

ಪುಷ್ಪ 2 ಚಿತ್ರದ ಹೈಲೈಟ್ ಗಂಗಮ್ಮನ ಜಾತ್ರೆ ಎಂಬುದು ಟೀಸರ್ ನಿಂದ ಸ್ಪಷ್ಟವಾಗಿದೆ. ಇದುವರೆಗೂ ಚಿತ್ರರಂಗದಲ್ಲಿ ಯಾವೊಬ್ಬ ನಾಯಕನೂ ಇಂತಹ ದೃಶ್ಯದಲ್ಲಿ ನಟಿಸಿಲ್ಲ ಎಂದೇ ಹೇಳಬೇಕು. ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಪುಷ್ಫಾ 2 ಟೀಸರ್ ಯೂಟ್ಯೂಬ್ ನಲ್ಲಿ ದಾಖಲೆ ಬರೆಯುತ್ತಿದೆ. ಆಗಸ್ಟ್ 15 ರಂದು ಈ ಚಿತ್ರ ವಿಶ್ವದಾದ್ಯಂತ ಚಿತ್ರಮಂದಿರಗಳಿಗೆ ಬರಲಿದೆ.

ಭಾರತದಲ್ಲಿ ಸುದ್ದಿ ಪ್ರಸಾರ: ಖಾಸಗಿ ಕಂಪನಿಗೆ ಪರವಾನಗಿ ಹಸ್ತಾಂತರಿದ ಬಿಬಿಸಿ

Share This Article