More

    ಭಾರತದಲ್ಲಿ ಸುದ್ದಿ ಪ್ರಸಾರ: ಖಾಸಗಿ ಕಂಪನಿಗೆ ಪರವಾನಗಿ ಹಸ್ತಾಂತರಿದ ಬಿಬಿಸಿ

    ನವದೆಹಲಿ: ಭಾರತದಲ್ಲಿ ಸುದ್ದಿ ಪ್ರಸಾರದ ಪರವಾನಗಿಯನ್ನು ಖಾಸಗಿ ಕಂಪನಿಗೆ ಬಿಬಿಸಿ ಹಸ್ತಾಂತರಿಸಿದೆ.

    ವಿದೇಶಿ ನೇರ ಹೂಡಿಕೆ ಮತ್ತು ಆದಾಯ ತೆರಿಗೆ ಸಮಸ್ಯೆಗಳು ಪರಿಶೀಲನೆಗೆ ಒಳಪಟ್ಟು ಒಂದು ವರ್ಷದೊಳೆಗೆ ಖಾಸಗಿ ಕಂಪನಿಗೆ ಸುದ್ದಿ ಪ್ರಸಾರ ಪರವಾನಗಿಯನ್ನು ಬಿಬಿಸಿ ನೀಡಿದೆ. ನಾಲ್ವರು ಭಾರತೀಯ ಉದ್ಯೋಗಿಗಳು ರಚಿಸಿದ ನ್ಯೂಸ್​ ರೂಂಗೆ ಪರವಾನಗಿ ಇದಾಗಿದೆ. ಹೊಸ ಕಂಪನಿಯ ಅಡಿ ಕಾರ್ಯಾಚರಣೆಯು ಮುಂದಿನ ವಾರ ಪ್ರಾರಂಭವಾಗಲಿದೆ.

    ಇದನ್ನೂ ಓದಿ: ‘ರಾಜೀವ್ ಚಂದ್ರಶೇಖರ್ ಆಸ್ತಿ ಮಾಹಿತಿ ಮುಚ್ಚಿಟ್ಟಿದ್ದಾರೆ’: ಚುನಾವಣಾ ಆಯೋಗಕ್ಕೆ ಎಲ್​ಡಿಎಫ್​ ದೂರು..

    ಹಿಂದಿ ಗುಜರಾತಿ, ಮರಾಠಿ, ಪಂಜಾಬಿ, ತಮಿಳು ಮತ್ತು ತೆಲುಗಿನಲ್ಲಿ ಸುದ್ದಿಗಳನ್ನು ಪ್ರಸಾರ ಮಾಡಲು ಬಿಬಿಸಿ ಪರವಾನಗಿಯನ್ನು ಖಾಸಗಿ ಕಂಪನಿಗೆ ಹಸ್ತಾಂತರಿಸಿದೆ.

    ಹೊಸ ಕಂಪನಿಯಲ್ಲಿ ಶೇ.26 ರಷ್ಟು ಪಾಲು ಪಡೆಯಲು ಬಿಬಿಸಿ ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದೆ ಎಂದು ವರದಿಯಾಗಿದೆ. ಹೊಸ ವಿದೇಶಿ ನೇರ ಹೂಡಿಕೆ ಕಾಯಿದೆಯ ನಂತರ ಭಾರತದಲ್ಲಿ ಬಿಬಿಸಿಗೆ ಇಂತಹ ವ್ಯವಸ್ಥೆ ಅಗತ್ಯವಾಗಿತ್ತು.

    ಬಿಬಿಸಿ ತನ್ನ ಪ್ರಸಾರದ ಹಕ್ಕನ್ನು ಯಾವುದೇ ದೇಶದಲ್ಲಿ ಮತ್ತೊಂದು ಕಂಪನಿಗೆ ವರ್ಗಾಯಿಸಿದ್ದು ಇದೇ ಮೊದಲು. ಭಾರತದಲ್ಲಿ ಬಿಬಿಸಿ 200 ಉದ್ಯೋಗಿಗಳನ್ನು ಹೊಂದಿದೆ. “ಭಾರತದಲ್ಲಿ ಬಿಬಿಸಿ ಶ್ರೀಮಂತ ಇತಿಹಾಸ ಹೊಂದಿದೆ. ಆದ್ದರಿಂದಲೇ ಪ್ರೇಕ್ಷಕರ ಮನಸ್ಸಿನಲ್ಲಿ ಸದಾ ಮೊದಲ ಸ್ಥಾನದಲ್ಲಿರುತ್ತದೆ. ಸಾಮಾಹಿಕ ಸುದ್ದಿಮನೆ ಅದನ್ನು ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಬಿಬಿಸಿ ಉಪ ಸಿಇಒ ಜೊನಾಥನ್ ಮುಂಟ್ರೋ ಹೇಳಿದರು.

    ಬಾಂಬ್ ತಯಾರಿಕೆಯಲ್ಲಿ ಮೃತಪಟ್ಟ ಶೇರಿನ್​ ಮನೆಯಲ್ಲಿ ಸಿಪಿಎಂ ನಾಯಕರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts