More

  ಹೊಸ ಸಿನಿಮಾಗಾಗಿ ‘ನ್ಯಾಚುರಲ್ ಸ್ಟಾರ್’ ನಾನಿ ಪಡೆದ ಸಂಭಾವನೆ ಎಷ್ಟು ಗೊತ್ತಾ? ಕೇಳಿದ್ರೆ ದಂಗಾಗ್ತೀರಾ!

  ಹೈದರಾಬಾದ್​: ನ್ಯಾಚುರಲ್ ಸ್ಟಾರ್’ ನಾನಿ ‘ದಸರಾ’ ಸಿನಿಮಾದ ಮೂಲಕ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡು, ಫ್ಯಾನ್ಸ್‌ಗೆ ಮನರಂಜನೆ ನೀಡಿದ್ದರು. ಇದೀಗ ಆರ್‌ಆರ್‌ಆರ್ ಚಿತ್ರದ ನಿರ್ಮಾಪಕ ಡಿವಿವಿ ದಾನಯ್ಯ ಮತ್ತು ನಾನಿ ಕಾಂಬಿನೇಷನ್‌ನಲ್ಲಿ ಮತ್ತೊಂದು ಹೊಸ ಸಿನಿಮಾ ಬರಲಿದೆ ಎನ್ನಲಾಗಿದೆ.

  ಇದನ್ನೂ ಓದಿ: ಕಾಲೆಳೆದ ಟ್ರೊಲ್ಲರ್ಸ್​​ಗೆ ತಿರುಗೇಟು ಕೊಟ್ಟ ಕೂರ್ಗ್​ ಬೆಡಗಿ!: ಹುಟ್ಟು ಹಬ್ಬದಂದೇ ರಶ್ಮಿಕಾಗೆ ಸಿಟ್ಟು ಬಂದಿದ್ದೇಕೆ?

  ವಿವೇಕ್ ಆತ್ರೇಯ ನಿರ್ದೇಶನದ ಸರಿಪೋದ ಶನಿವಾರಂ ಆಕ್ಷನ್ ಎಂಟರ್‌ಟೈನರ್‌ನ ಚಿತ್ರೀಕರಣ ಅಂತಿಮ ಹಂತ ತಲುಪಿದೆ. ಆಗಸ್ಟ್‌ನಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರದಲ್ಲಿ ಪ್ರಿಯಾಂಕಾ ಅರುಳ್ ಮೋಹನ್ ನಾಯಕಿಯಾಗಿ ನಟಿಸುತ್ತಿದ್ದಾರೆ.

  ಈ ಚಿತ್ರ ಬಿಡುಗಡೆಗೂ ಮೊದಲೇ ನ್ಯಾಚುರಲ್​​ ಸ್ಟಾರ್​ ಮತ್ತೊಂದು ಚಿತ್ರಕ್ಕೆ ಸಹಿ ಮಾಡಿದ್ದಾರೆ ಎನ್ನಲಾಗಿದೆ. ಡಿವಿವಿ ದಾನಯ್ಯ ಅವರ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿರುವ ನಾನಿ, ಸಾಹೋ ಖ್ಯಾತಿಯ ಸುಜೀತ್ ಈ ಸಿನಿಮಾ ನಿರ್ದೇಶನದ ಮಾಡಲಿದ್ದಾರೆ. ಈ ಸಿನಿಮಾ ಕೂಡ ಆ್ಯಕ್ಷನ್ ಎಂಟರ್ ಟೈನರ್ ಆಗಿದ್ದು, ಈ ವರ್ಷಾಂತ್ಯದಲ್ಲಿ ಶೂಟಿಂಗ್ ಶುರುವಾಗಲಿದೆ ಎಂಬುದು ಟಾಲಿವುಡ್​ನಲ್ಲಿ ಚರ್ಚೆಯಾಗುತ್ತಿದೆ.

  nani

  50 ಕೋಟಿ ರೂ, ಬೇಡಿಕೆ: ಡಿವಿವಿ ದಾನಯ್ಯ ಭಾರೀ ಸಂಭಾವನೆ ನೀಡಿದ್ದರಿಂದ ಎನ್ನಲಾಗಿದೆ. ಈ ಎರಡು ಚಿತ್ರಗಳಿಗೆ ನಾನಿ ಬರೋಬ್ಬರಿ 50 ಕೋಟಿ ರೂ, ಬೇಡಿಕೆ ಇಟ್ಟಿದ್ದಾರಂತೆ. ಇದಕ್ಕೆ ನಿರ್ಮಾಪಕ ಡಿವಿವಿ ದಾನಯ್ಯ ಓಕೆ ಅಂದಿದ್ದಾರೆ ಎಂದು ವರದಿಯಾಗಿದೆ. ಈ ಸಿನಿಮಾ ಈ ವರ್ಷವೇ ಚಿತ್ರೀಕರಣ ಆರಂಭವಾಗಲಿದೆ. ನಾನಿ ಶೀಘ್ರದಲ್ಲೇ ಬಳಗಂ ವೇಣು ಮತ್ತು ದಸರಾ ಖ್ಯಾತಿಯ ಶ್ರೀಕಾಂತ್ ಒಡೆಲಾ ಅವರಂತಹ ನಿರ್ದೇಶಕರೊಂದಿಗೆ ಕೆಲಸ ಮಾಡಲಿದ್ದಾರೆ.

  ನಾನಿ ಚಿತ್ರರಂಗಕ್ಕೆ ಬಂದು ಸುಮಾರು 15 ವರ್ಷಗಳಾಗಿವೆ. ನಾನಿಯನ್ನು ಹೀರೋ ಆಗಿ ಗುರುತಿಸದೆ ಉತ್ತಮ ನಟನೆಂದೇ ಗುರುತಿಸಬೇಕು. ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿದ ಏಕೈಕ ನಟ ನಾನಿ.

  ಹೊಸ ಸಿನಿಮಾಗಾಗಿ 'ನ್ಯಾಚುರಲ್ ಸ್ಟಾರ್' ನಾನಿ ಪಡೆದ ಸಂಭಾವನೆ ಎಷ್ಟು ಗೊತ್ತಾ? ಕೇಳಿದ್ರೆ ದಂಗಾಗ್ತೀರಾ!

  33ನೇ ಸಿನಿಮಾ ಇದಾಗಿದೆ: ನಾನಿ ನಟನೆಯ ‘ದಸರಾ’ ಸಿನಿಮಾ ರಿಲೀಸ್ ಆಗಿ ಒಂದು ವರ್ಷ ಕಳೆದಿದೆ. ಈ ಚಿತ್ರಕ್ಕೆ ಶ್ರೀಕಾಂತ್ ಒಡೆಲಾ ನಿರ್ದೇಶನ ಮಾಡಿದ್ದರು. ಸುಧಾಕರ್ ಚೆರುಕುರಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಈ ತಂಡ ಹೊಸ ಸಿನಿಮಾಗಾಗಿ ಮತ್ತೆ ಒಂದಾಗಿದೆ. ಇದು ನಾನಿ ಅಭಿನಯದ 33ನೇ ಸಿನಿಮಾ ಇದಾಗಿದೆ. ಈ ಹೊಸ ಪ್ರಾಜೆಕ್ಟ್ ಫಸ್ಟ್ ಲುಕ್ ರಿವೀಲ್ ಆಗಿದೆ. ಸಖತ್ ರಗಡ್ ಲುಕ್​ನಲ್ಲಿ ನಾನಿ ಆಗಮಿಸಿದ್ದಾರೆ.

  ನಾನಿ ನಟನೆಯ ‘ದಸರಾ’ ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್ ಇತ್ತು. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ 117 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. 100 ಕೋಟಿ ರೂಪಾಯಿ ಕ್ಲಬ್ ಸೇರಿದ ನಾನಿ ನಟನೆಯ ಮೊದಲ ಸಿನಿಮಾ ಇದಾಗಿದೆ. ಈಗ ಈ ಕಾಂಬಿನೇಷನ್ ಮತ್ತೆ ಒಂದಾಗುತ್ತಿರುವುದರಿಂದ ಕುತೂಹಲ ಹೆಚ್ಚಿದೆ.

  ರಾಜಸ್ಥಾನ: ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಗೆ ಬೋರ್ಡ್​ ಪರೀಕ್ಷೆ ಬರೆಯಲು ನಿರಾಕರಿಸಿದ ಶಾಲೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts