More

    19 ಅಡಿ ಉದ್ದದ ಬರ್ಮೀಸ್ ಹೆಬ್ಬಾವನ್ನು ಹಿಡಿದ ಕಾಲೇಜು ವಿದ್ಯಾರ್ಥಿ; ಎದೆ ಝುಲ್​​ ಎನಿಸುವ ದೃಶ್ಯ ವೈರಲ್

    ಅಮೆರಿಕ: 19 ಅಡಿ ಉದ್ದ ಮತ್ತು 125 ಪೌಂಡ್ (56.6 ಕೆಜಿ) ಬರ್ಮೀಸ್ ಹೆಬ್ಬಾವು ಜಗತ್ತಿನ ಅತಿ ಉದ್ದದ ಹೆಬ್ಬಾವು ಎಂದು ನಂಬಲಾಗಿದೆ. ಆದರೆ ಈ ದೈತ್ಯ ಹೆಬ್ಬಾವನ್ನು ಇತ್ತೀಚೆಗೆ ಯುನೈಟೆಡ್ ಸ್ಟೇಟ್ಸ್‌ನ ಫ್ಲೋರಿಡಾದಲ್ಲಿ 22 ವರ್ಷದ ಹುಡುಗನೊಬ್ಬ ಹಿಡಿದಿದ್ದಾನೆ!.

    ಓಹಿಯೋ ಸ್ಟೇಟ್ ಯೂನಿವರ್ಸಿಟಿಯ ವಿದ್ಯಾರ್ಥಿ ಜೇಕ್ ವ್ಯಾಲೆರಿ ಸೋಮವಾರ ಈ ಹೆಬ್ಬಾವನ್ನು ಹಿಡಿದಿದ್ದಾನೆ. ಇದು ವಯಸ್ಕ ಜಿರಾಫೆಯಷ್ಟೇ ಉದ್ದವಾಗಿದೆ. ಯುಎಸ್ಎ ಟುಡೇ ಪ್ರಕಾರ, ಈ ಹೆಬ್ಬಾವಿನ ಅಳತೆಯನ್ನು ನೈಋತ್ಯ ಫ್ಲೋರಿಡಾದ ಕನ್ಸರ್ವೆನ್ಸಿಯಲ್ಲಿ ಸಂಗ್ರಹಿಸಲಾಗಿದೆ. ಏಕೆಂದರೆ ಅಕ್ಟೋಬರ್ 2020 ರಲ್ಲಿ, ಫ್ಲೋರಿಡಾದಲ್ಲಿ ಅತಿದೊಡ್ಡ ಬರ್ಮೀಸ್ ಹೆಬ್ಬಾವನ್ನು ಹಿಡಿಯಲಾಗಿತ್ತು. ಇದು 18 ಅಡಿ ಮತ್ತು ಒಂಬತ್ತು ಇಂಚು ಉದ್ದವಿತ್ತು.

    “ಹಾವಿನ ಅಧಿಕೃತ ಅಳತೆ ದಾಖಲಿಸಲು ಕನ್ಸರ್ವೆನ್ಸಿಗೆ ತಂದಿದ್ದೇವೆ. ನಾವು ಈ ಪರಿಸರ ವ್ಯವಸ್ಥೆಯನ್ನು ಪ್ರೀತಿಸುತ್ತೇವೆ. ಹಾಗಾಗಿ ಅದನ್ನು ಸಾಧ್ಯವಾದಷ್ಟು ಸಂರಕ್ಷಿಸಲು ಪ್ರಯತ್ನಿಸುತ್ತೇವೆ” ಎಂದು ವ್ಯಾಲೆರಿ ತಿಳಿಸಿದ್ದಾರೆ.

    ಕಳೆದ ವರ್ಷ ನಾನು ಮತ್ತು ನನ್ನ ಸೋದರಸಂಬಂಧಿ ಸುಮಾರು 18 ಅಡಿ ಉದ್ದದ ಹಾವನ್ನು ಹಿಡಿದಿದ್ದೆವು ಎಂದು ತಿಳಿಸಿರುವ ವ್ಯಾಲೆರಿ ಮೊದಲಿಗೆ ನಾನು ನನ್ನ ಪ್ರಾಣವನ್ನು ಉಳಿಸಿಕೊಳ್ಳಲು ಬಾಲ ಹಿಡಿದಿದ್ದೆ. ತದನಂತರ ನನ್ನ ಸ್ನೇಹಿತರೊಬ್ಬರು ಅದರ ತಲೆಯನ್ನು ತಗ್ಗಿಸಲು ಪ್ರಯತ್ನಿಸಿದರು. ಏನು ಮಾಡಬೇಕೆಂದು ತಿಳಿಯದೆ ತುಂಬಾ ನೊಂದಿದ್ದೆ ಎಂದು ಹಾವು ಹಿಡಿಯುವಾಗ ಆದ ಅನುಭವದ ಬಗ್ಗೆ ಹಂಚಿಕೊಂಡಿದ್ದಾರೆ ವ್ಯಾಲೆರಿ.

    ನ್ಯಾಷನಲ್ ಜಿಯಾಗ್ರಫಿಕ್ ಪ್ರಕಾರ, ಬರ್ಮೀಸ್ ಹೆಬ್ಬಾವುಗಳು ವಿಶ್ವದ ಅತಿದೊಡ್ಡ ಹಾವುಗಳಲ್ಲಿ ಒಂದಾಗಿದೆ. ತಮ್ಮ ಆಹಾರವನ್ನು ಹಿಡಿದು ತಿನ್ನುವ ವಿಧಾನಕ್ಕೆ ಅವು ಹೆಚ್ಚು ಹೆಸರುವಾಸಿಯಾಗಿವೆ. ಹಾವು ಬೇಟೆಯನ್ನು ಸೆರೆಹಿಡಿಯಲು ಅದರ ಹಿಂಭಾಗದ ಕೋರೆಹಲ್ಲುಗಳನ್ನು ಬಳಸುತ್ತದೆ. ನಂತರ ತನ್ನ ದೇಹವನ್ನು ಪ್ರಾಣಿಗಳ ಸುತ್ತಲೂ ಸುತ್ತುತ್ತದೆ, ಪ್ರಾಣಿ ಉಸಿರುಗಟ್ಟಿಸುವವರೆಗೆ ಪ್ರತಿ ಉಸಿರಾಟದೊಂದಿಗೆ ಸ್ವಲ್ಪ ಗಟ್ಟಿಯಾಗಿ ಹಿಸುಕುತ್ತದೆ. ಫ್ಲೋರಿಡಾ ವನ್ಯಜೀವಿಗಳಿಗೆ ಈ ಹೆಬ್ಬಾವೆಂದರೆ ಭಯ. ಏಕೆಂದರೆ ಇದು ಅಲ್ಲಿನ ಸಸ್ತನಿಗಳು, ಪಕ್ಷಿಗಳು ಮತ್ತು ಅಲಿಗೇಟರ್‌ಗಳನ್ನು ತಿನ್ನುತ್ತದೆ.

    ಅತಿ ಹೆಚ್ಚು ಜನ ವೀಕ್ಷಿಸಿದ ಭಾರತೀಯ ಚಲನಚಿತ್ರವಿದು…ಕೆಜಿಎಫ್, ಬಾಹುಬಲಿ, ಪಠಾಣ್, ಆರ್‌ಆರ್‌ಆರ್ ಇದಾವುದೂ ಅಲ್ವಂತೆ ಮತ್ಯಾವುದು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts