More

    ಸತತ 3ನೇ ದಿನ ಗೂಳಿಯ ಗುಟುರು: ದಾಖಲೆ ಏರಿಕೆ ಕಂಡ ಅಮೆರಿಕ ಷೇರು ಪೇಟೆ, ಭಾರತೀಯ ಮಾರುಕಟ್ಟೆಯಲ್ಲೂ ಚೇತರಿಕೆ

    ಮುಂಬೈ: ಪ್ರಮುಖ ಷೇರುಗಳಾದ ಎಲ್ & ಟಿ, ಐಟಿಸಿ ಮತ್ತು ಮಾರುತಿ ಕಂಪನಿಗಳ ಸ್ಟಾಕ್​ಗಳಲ್ಲಿ ಲಾಭ ಮತ್ತು ಅಮೆರಿಕದ ಕೇಂದ್ರೀಯ ಬ್ಯಾಂಕ್​ ಆಗಿರುವ ಫೆಡರಲ್ ರಿಸರ್ವ್ ಮುಂದಿನ ದಿನಗಳಲ್ಲಿ ಬ್ಯಾಂಕ್​ ಬಡ್ಡಿದ ದರ ಮೂರು ಕಡಿತಗಳನ್ನು ಮಾಡುವುದಾಗಿ ಸೂಚಿಸಿದ ಹಿನ್ನೆಲೆಯಲ್ಲಿ ಅಮೆರಿಕದ ಷೇರು ಮಾರುಕಟ್ಟೆಗಳಲ್ಲಿ ದಾಖಲೆಯ ಏರಿಕೆಯ ನಂತರ ಭಾರತೀಯ ಷೇರು ಮಾರುಕಟ್ಟೆಗಳು ಕೂಡ ಶುಕ್ರವಾರ ಒಂದಿಷ್ಟು ಲಾಭ ಕಂಡವು.

    ಆರಂಭಿಕ ವಹಿವಾಟಿನಲ್ಲಿ ಕುಸಿದ ನಂತರ, ಮಾರುಕಟ್ಟೆಗಳು ಚುರುಕಾಗಿ ಚೇತರಿಕೆಯನ್ನು ಪ್ರದರ್ಶಿಸಿದವು. 30-ಷೇರುಗಳ ಬಿಎಸ್‌ಇ ಸೂಚ್ಯಂಕ 190.75 ಅಂಕಗಳು ಅಥವಾ 0.26 ಶೇಕಡಾ ಏರಿಕೆಯಾಗಿ 72,831.94 ಕ್ಕೆ ಸ್ಥಿರವಾಯಿತು. ಆದರೂ, ಐಟಿ ಮತ್ತು ಟೆಕ್ ಷೇರುಗಳಲ್ಲಿನ ತೀಕ್ಷ್ಣವಾದ ತಿದ್ದುಪಡಿಯು ಏರಿಕೆಯನ್ನು ಸೀಮಿತಗೊಳಿಸಿತು. ದಿನದ ಅವಧಿಯಲ್ಲಿ, ಇದು 474.43 ಅಂಕಗಳು ಅಥವಾ ಶೇಕಡಾ 0.65 ರಷ್ಟು ಜಿಗಿದು 73,115.62 ಕ್ಕೆ ತಲುಪಿತ್ತು.

    ಎನ್‌ಎಸ್‌ಇ ನಿಫ್ಟಿ ಸೂಚ್ಯಂಕವು 84.80 ಅಂಕಗಳು ಅಥವಾ ಶೇಕಡಾ 0.39 ರಷ್ಟು ಏರಿಕೆಯಾಗಿ 22,096.75 ಕ್ಕೆ ತಲುಪಿತು.

    ಸನ್ ಫಾರ್ಮಾ, ಮಾರುತಿ, ಇಂಡಸ್‌ಇಂಡ್ ಬ್ಯಾಂಕ್, ಟೈಟಾನ್, ಐಟಿಸಿ, ಟಾಟಾ ಮೋಟಾರ್ಸ್, ಲಾರ್ಸೆನ್ ಆ್ಯಂಡ್​ ಟೂಬ್ರೊ ಮತ್ತು ಜೆಎಸ್‌ಡಬ್ಲ್ಯೂ ಸ್ಟೀಲ್ ಕಂಪನಿಳ ಷೇರುಗಳು ಪ್ರಮುಖವಾಗಿ ಲಾಭ ಗಳಿಸಿದವು. ಮತ್ತೊಂದೆಡೆ, ಇನ್ಫೋಸಿಸ್, ವಿಪ್ರೋ, ಎಚ್‌ಸಿಎಲ್ ಟೆಕ್ನಾಲಜೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಟೆಕ್ ಮಹೀಂದ್ರಾ ಮತ್ತು ಬಜಾಜ್ ಫಿನ್‌ಸರ್ವ್ ಕಂಪನಿಗಳ ಷೇರುಗಳು ನಷ್ಟ ಅನುಭವಿಸಿದವು. ಬಿಎಸ್‌ಇ ಐಟಿ ಸೂಚ್ಯಂಕ ಶೇ.2ರಷ್ಟು ಕುಸಿಯಿತು.

    ಏಷ್ಯಾದ ಮಾರುಕಟ್ಟೆಗಳ ಪೈಕಿ, ಸಿಯೋಲ್, ಶಾಂಘೈ ಮತ್ತು ಹಾಂಗ್ ಕಾಂಗ್ ಕುಸಿತ ಕಂಡರೆ, ಟೋಕಿಯೊ ಲಾಭದಲ್ಲಿ ಮುನ್ನಡೆಯಿತು. ಐರೋಪ್ಯ ಮಾರುಕಟ್ಟೆಗಳಲ್ಲಿ ಮಿಶ್ರ ವಹಿವಾಟು ಕಂಡುಬಂದಿತು. ಅಮೆರಿಕದ ವಾಲ್ ಸ್ಟ್ರೀಟ್ ಮಾರುಕಟ್ಟೆಯು ಗುರುವಾರ ಹೊಸ ದಾಖಲೆಯ ಎತ್ತರವನ್ನು ಮುಟ್ಟಿತು.

    ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಗುರುವಾರ 1,826.97 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ಷೇರು ವಿನಿಮಯ ಕೇಂದ್ರ ತಿಳಿಸಿದೆ.

    ಬಿಎಸ್‌ಇ ಬೆಂಚ್‌ಮಾರ್ಕ್ ಸೂಚ್ಯಂಕವು ಗುರುವಾರ 539.50 ಅಂಕಗಳು ಅಥವಾ ಶೇಕಡಾ 0.75 ರಷ್ಟು ಜಿಗಿದು 72,641.19 ಕ್ಕೆ ತಲುಪಿತ್ತು. ಎನ್‌ಎಸ್‌ಇ ನಿಫ್ಟಿ ಸೂಚ್ಯಂಕವು 172.85 ಅಂಕಗಳು ಅಥವಾ ಶೇಕಡಾ 0.79 ರಷ್ಟು ಏರಿಕೆಯಾಗಿ 22,011.95 ಕ್ಕೆ ತಲುಪಿತ್ತು.

    ಇತರೆ ಸೂಚ್ಯಂಕಗಳು:

    ಬಿಎಸ್​ಇ ಮಿಡ್​ ಕ್ಯಾಪ್​ ಸೂಚ್ಯಂಕ: 38,801.23 (0.38% ಏರಿಕೆ)
    ಬಿಎಸ್​ಇ ಸ್ಮಾಲ್​ ಕ್ಯಾಪ್​ ಸೂಚ್ಯಂಕ: 42,771.27 (1.06% ಏರಿಕೆ)
    ನಿಫ್ಟಿ ಮಿಡ್​ಕ್ಯಾಪ್​ 100 ಸೂಚ್ಯಂಕ: 47,312.85 (0.59% ಏರಿಕೆ)
    ನಿಫ್ಟಿ ಸ್ಮಾಲ್​​ಕ್ಯಾಪ್​ 100 ಸೂಚ್ಯಂಕ: 15,056.75 (0.64% ಏರಿಕೆ)

    ಸರ್ಕಾರಿ ಕಂಪನಿಯ ಷೇರುಗಳ ಬೆಲೆ 12% ರಷ್ಟು ಏರಿಕೆ: ಸ್ಟಾಕ್​ ದರ 220 ರೂ. ದಾಟಲಿದೆ ಎನ್ನುತ್ತಾರೆ ತಜ್ಞರು

    ರೂ. 89ರ ಐಪಿಒ ಷೇರಿಗೆ ರೂ. 70 ಪ್ರೀಮಿಯಂ: ಹೂಡಿಕೆದಾರರಿಗೆ ಲಾಭ ಮಾಡಿಕೊಳ್ಳಲು ಮಾರ್ಚ್​ 27ರವರೆಗೆ ಅವಕಾಶ

    ಭಾರತದ ಐಟಿ ಕಂಪನಿಗಳ ಷೇರುಗಳಲ್ಲಿ ರಕ್ತಪಾತ: ಏಕಾಏಕಿ ಬೆಲೆ ಕುಸಿತಕ್ಕೆ ಕಾರಣವೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts