More

    ಸರ್ಕಾರಿ ಕಂಪನಿಯ ಷೇರುಗಳ ಬೆಲೆ 12% ರಷ್ಟು ಏರಿಕೆ: ಸ್ಟಾಕ್​ ದರ 220 ರೂ. ದಾಟಲಿದೆ ಎನ್ನುತ್ತಾರೆ ತಜ್ಞರು

    ಮುಂಬೈ: ಇಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ (Engineers India Ltd) ಷೇರುಗಳ ಬೆಲೆ 4 ದಿನಗಳ ಕುಸಿತದ ನಂತರ ಗುರುವಾರ ಶೇಕಡಾ 12 ರಷ್ಟು ಏರಿಕೆ ಕಂಡಿದೆ. ಈ ಸರ್ಕಾರಿ ಕಂಪನಿಯ ಷೇರುಗಳ ಬೆಲೆ ಏರಲಿದೆ 220 ರೂಪಾಯಿವರೆಗೂ ಏರಲಿದೆ ಎನ್ನುತ್ತಾರೆ ತಜ್ಞರು.

    ಕಳೆದ 4 ದಿನಗಳಲ್ಲಿ ನಿರಂತರ ಕುಸಿತದ ಪ್ರವೃತ್ತಿಯನ್ನು ಮುರಿದು, ಇಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ ಷೇರುಗಳ ಬೆಲೆ ಗುರುವಾರ 12.20 ಶೇಕಡಾ ಏರಿಕೆಯೊಂದಿಗೆ 195.85 ರೂ. ತಲುಪಿದೆ. ಶುಕ್ರವಾರ ಈ ಷೇರುಗಳ ಬೆಲೆ ರೂ. 196.55ಕ್ಕೆ ಏರಿಕೆಯಾಗಿದೆ.

    “ಯಾರಾದರೂ ಈ ಸ್ಟಾಕ್ ಅನ್ನು ರೂ 195 ರ ಮಟ್ಟದಲ್ಲಿ ಖರೀದಿಸಲು ಯೋಜಿಸುತ್ತಿದ್ದರೆ, ಅವರು ರೂ 220 ರ ಗುರಿ ಬೆಲೆಯನ್ನು ನಿಗದಿಪಡಿಸಬೇಕು. 185 ರೂಪಾಯಿಗಳ ಸ್ಟಾಪ್​ ಲಾಸ್​ ಇಡಬೇಕು” ಎಂದು ರೆಲಿಗೇರ್ ಬ್ರೋಕಿಂಗ್​​ನ ಹಿರಿಯ ಉಪಾಧ್ಯಕ್ಷ (ಚಿಲ್ಲರೆ ಸಂಶೋಧನೆ) ರವಿ ಸಿಂಗ್ ಹೇಳುತ್ತಾರೆ.

    ಆನಂದ್ ರಾಠಿ ಬ್ರೋಕರೇಜ್ ಸಂಸ್ಥೆಯ ಹಿರಿಯ ವ್ಯವಸ್ಥಾಪಕ ಆನಂದ್ ರಾಠಿ ಅವರು, “ಫೆಬ್ರವರಿ 2ರಂದು ದಾಖಲೆಯ ಗರಿಷ್ಠ 273.80 ಕ್ಕೆ ತಲುಪಿದ ನಂತರ ಈ ಷೇರುಗಳ ಬೆಲೆ ಕುಸಿಯಲು ಪ್ರಾರಂಭವಾಯಿತು. ಇಂತಹ ಪರಿಸ್ಥಿತಿಯಲ್ಲಿ, ಹೂಡಿಕೆದಾರರು ಸ್ವಲ್ಪ ಸಮಯದವರೆಗೆ ಈ ಬುಲಿಶ್ ಆವೇಗವನ್ನು ಉಳಿಸಿಕೊಳ್ಳಬಹುದು. ರೂ 175 ರ ಬೆಂಬಲ ಬೆಲೆ ಜೊತೆಗೆ ರೂ 220 ರ ಗುರಿ ಬೆಲೆಯನ್ನು ಮುಂಬರುವ ಸೆಷನ್‌ಗಳಿಗೆ ಇರಿಸಬಹುದು” ಎಂದು ಹೇಳಿದ್ದಾರೆ.

    ಕಳೆದ ಒಂದು ವರ್ಷದಲ್ಲಿ ಕಂಪನಿಯ ಷೇರು ಬೆಲೆ ಶೇ. 158ರಷ್ಟು ಏರಿಕೆ ಕಂಡಿದೆ. ಈ ಅವಧಿಯಲ್ಲಿ ಸ್ಥಾನಿಕ ಹೂಡಿಕೆದಾರರ ಹಣ ದ್ವಿಗುಣಗೊಂಡಿದೆ. ಕಳೆದ 6 ತಿಂಗಳ ಅವಧಿಯಲ್ಲಿ ಕಂಪನಿಯ ಷೇರುಗಳ ಬೆಲೆ ಕೇವಲ 36 ಪ್ರತಿಶತದಷ್ಟು ಹೆಚ್ಚಾಗಿದೆ. ಕಳೆದ ಒಂದು ತಿಂಗಳಲ್ಲಿ ಷೇರುಗಳ ಬೆಲೆಯಲ್ಲಿ ಶೇಕಡಾ 10.9 ರಷ್ಟು ಕುಸಿತವಾಗಿದೆ. ಈ ಷೇರಿನ 52 ವಾರಗಳ ಗರಿಷ್ಠ ಬೆಲೆ ರೂ 273.80 ಮತ್ತು ಕನಿಷ್ಠ ಬೆಲೆ ರೂ 70.35 ಇದೆ.

    ರೂ. 89ರ ಐಪಿಒ ಷೇರಿಗೆ ರೂ. 70 ಪ್ರೀಮಿಯಂ: ಹೂಡಿಕೆದಾರರಿಗೆ ಲಾಭ ಮಾಡಿಕೊಳ್ಳಲು ಮಾರ್ಚ್​ 27ರವರೆಗೆ ಅವಕಾಶ

    ಭಾರತದ ಐಟಿ ಕಂಪನಿಗಳ ಷೇರುಗಳಲ್ಲಿ ರಕ್ತಪಾತ: ಏಕಾಏಕಿ ಬೆಲೆ ಕುಸಿತಕ್ಕೆ ಕಾರಣವೇನು?

    ಈ 5 ಸ್ಟಾಕ್‌ಗಳ ಬೆಲೆ ಈಗ ಅಗ್ಗ ಇದೆ; ಲೋಕಸಭೆ ಚುನಾವಣೆ ಮೊದಲು ಲಾಭಕ್ಕಾಗಿ ಖರೀದಿಸಲು ತಜ್ಞರ ಸಲಹೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts