ನವದೆಹಲಿ: ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯ ಮೇಲೆ ನಡೆದ ಆಸಿಡ್ ದಾಳಿ (Acid attack) ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಪ್ರಕರಣದ ಪ್ರಮುಖ ಆರೋಪಿ ಜಿತೇಂದರ್ನನ್ನು, ಸಂತ್ರಸ್ತೆಯೇ ತಂದೆಯೇ (ಅಖಿಲ್) ಯೋಜಿಸಿದ್ದರು ಎಂಬ ಆರೋಪ ಕೇಳಿಬಂದಿದ್ದು, ಆತನನ್ನು ಪೊಲೀಸರು ಸೋಮವಾರ (ಅ.26) ಬಂಧಿಸಿದ್ದಾರೆ.
ಈ ಹಿಂದೆ ಜಿತೇಂದರ್ ಪತ್ನಿ ಅಖಿಲೇಶ್ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ದಾಖಲಿಸಿದ್ದಳು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅತ್ಯಾಚಾರ ಮತ್ತು ಐಟಿ ಕಾಯ್ದೆಯಡಿ ಅಖಿಲ್ ವಿರುದ್ಧ ಎಫ್ಐಆರ್ ಹಾಕಿದ್ದರು ಎಂದು ಮಾಹಿತಿ ಬಂದಿದೆ.
ಇದನ್ನೂ ಓದಿ: ನದಿ ನೀರಿನ ಶುದ್ಧತೆಯನ್ನು ತೋರಿಸುವ ರೀಲ್ಸ್ ಮಾಡಲು ಹೋಗಿ ಯಮುನಾ ನದಿಗೆ ಬಿದ್ದ ಬಿಜೆಪಿ ಶಾಸಕ| Yamuna River
ಈ ಎಫ್‌ಐಆರ್‌ನಿಂದ ತಪ್ಪಿಸಿಕೊಳ್ಳುವ ಸಲುವಾಗಿ ಅಖಿಲ್ ಮತ್ತು ಅವರ ಮಗಳು ಆಸಿಡ್ ದಾಳಿಯ ಕಥೆಯನ್ನು ಹೆಣೆದು ಜಿತೇಂದರ್ ಮತ್ತು ಆತನ ಇಬ್ಬರು ಸ್ನೇಹಿತರನ್ನು ಪ್ರಕರಣದಲ್ಲಿ ಸಿಲುಕಿಸಲು ಪ್ರಯತ್ನಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಭಾನುವಾರ (ಅ.25) ವಾಯುವ್ಯ ದೆಹಲಿಯ ಅಶೋಕ್ ವಿಹಾರ್‌ನ ಲಕ್ಷ್ಮಿಬಾಯಿ ಕಾಲೇಜು ಬಳಿ ಮೂವರು ಪುರುಷರು ಆ ವಿದ್ಯಾರ್ಥಿನಿಯನ್ನು ತಡೆದು, ಆಕೆಯೊಂದಿಗೆ ವಾಗ್ವಾದ ನಡೆಸಲು ಪ್ರಾರಂಭಿಸಿದ್ದಾರೆ. ಈ ವೇಳೆ ಒಬ್ಬ ವ್ಯಕ್ತಿ ಆಕೆಯ ಮೇಲೆ ಆಸಿಡ್ ಎರಚಲು ಮುಂದಾಗಿದ್ದು, ಆಕೆ ಮುಖವನ್ನು ರಕ್ಷಿಸಿಕೊಳ್ಳಲು ತನ್ನ ಎರಡೂ ಕೈಗಳನ್ನು ಮೇಲಕ್ಕೆತ್ತಿಕೊಂಡಿದ್ದಾಳೆ. ಈ ವೇಳೆ ಆಕೆಯ ಎರಡೂ ಕೈಗಳು ಸುಟ್ಟು ಹೋಗಿವೆ ಎಂದು ಸುದ್ಧಿಯಾಗಿತ್ತು.
ಘಟನೆ ಬಗ್ಗೆ ಪೊಲೀಸರು ಏನು ಹೇಳಿದ್ದಾರೆ?
ಪ್ರಾಥಮಿಕ ತನಿಖೆಯಲ್ಲಿ ವಿದ್ಯಾರ್ಥಿನಿಯನ್ನು 3 ಆರೋಪಿಗಳು ತಿಂಗಳುಗಳಿಂದ ಹಿಂಬಾಲಿಸುತ್ತಿದ್ದರು. ಈ ವೇಳೆ ಇವರ ಮಧ್ಯೆ ವಾಗ್ವಾದ ನಡೆದಿದ್ದು, ವಿದ್ಯಾರ್ಥಿಯ ಮೇಲೆ ಆಸಿಡ್ ಎರಚಿ ಪರಾರಿಯಾಗಿದ್ದಾರೆ. ನಂತರ, ಮಹಿಳೆಯನ್ನು ಹತ್ತಿರದಲ್ಲಿರುವ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ ಭೀಷಮ್ ಸಿಂಗ್ ಸುದ್ದಿಮೂಲಗಳಿಗೆ ತಿಳಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ಬೆಳಿಗ್ಗೆ ಕೇಂದ್ರ ದೆಹಲಿಯ ಕರೋಲ್ ಬಾಗ್‌ನಲ್ಲಿರುವ ಭೂಗತ ಪಾರ್ಕಿಂಗ್ ಸ್ಥಳದಲ್ಲಿ ಜಿತೇಂದರ್ ಬೈಕ್ನಲ್ಲಿ ಕುಳಿತಿರುವ ಸಿಸಿಟಿವಿ ದೃಶ್ಯಾವಳಿಗಳು ಪೊಲೀಸರಿಗೆ ದೊರೆತಿವೆ. ಇನ್ನು ದಾಳಿಗೆ ಬಳಸಲಾಗಿದ್ದ ಈ ಬೈಕ್ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಘಟನೆಯು ದೆಹಲಿಯಲ್ಲಿ ಮಹಿಳೆಯರ ಸುರಕ್ಷತೆಯ ಕುರಿತಾದ ಚರ್ಚೆಯನ್ನು ಮತ್ತೆ ಹುಟ್ಟುಹಾಕಿದೆ. ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಸಂಘ ದಾಳಿಯನ್ನು ಖಂಡಿಸಿದ್ದು, ದೆಹಲಿ ಪೊಲೀಸರು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ವಿಫಲರಾಗಿದೆ ಎಂದು ಆರೋಪಿಸಿದ್ದಾರೆ. (ಏಜೆನ್ಸೀಸ್)