biggboss; ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ತಮ್ಮ ಬಿಗ್ ಬಾಸ್ 19 ಕಾರ್ಯಕ್ರಮಕ್ಕಾಗಿ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ. ಸಲ್ಮಾನ್ ಪ್ರತಿ ವಾರ 'ವೀಕೆಂಡ್ ಕಾ ವಾರ್' ಕಾರ್ಯಕ್ರಮದಲ್ಲಿ ಸ್ಪರ್ಧಿಗಳನ್ನು ಬೈಯುವುದನ್ನು ಕಾಣಬಹುದು. ಸಲ್ಮಾನ್ ಅನೇಕ ಜನರ ವೃತ್ತಿಜೀವನವನ್ನು ಹಾಳು ಮಾಡಿದ್ದಾರೆ ಎಂದು ಅವರ ಮೇಲೆ ಆರೋಪ ಮಾಡಲಾಗಿದೆ. ಈ ಕಾರ್ಯಕ್ರಮದ ಇತ್ತೀಚಿನ ಸಂಚಿಕೆಯಲ್ಲಿ, ಸಲ್ಮಾನ್ ಖಾನ್ ತಮ್ಮ ವಿರುದ್ಧ ಆಗಾಗ್ಗೆ ಹೊರಿಸಲಾಗುವ ಆರೋಪಗಳ ಬಗ್ಗೆ ಮಾತನಾಡಿದ್ದಾರೆ.
ಭಾನುವಾರ ಮಾಜಿ ಸ್ಪರ್ಧಿ ಶೆಹ್ನಾಜ್ ಗಿಲ್ ಅವರು ವೇದಿಕೆಗೆ ಬಂದಿದ್ದರು. ಈ ಸಂದರ್ಭದಲ್ಲಿ ಸಲ್ಮಾನ್ ಜೊತೆ ವೇದಿಕೆ ಹಂಚಿಕೊಂಡು ಸರ್, ನೀವು ತುಂಬಾ ಜನರ ವೃತ್ತಿಜೀವನವನ್ನು ರೂಪಿಸಿದ್ದೀರಿ ಎಂದು ಶೆಹ್ನಾಜ್ ಹೇಳಿದರು. ಇದಕ್ಕೆ ಉತ್ತರಿಸಿದ ಸಲ್ಮಾನ್, ನಾನು ಯಾವಾಗ ಯಾರ ಜೀವನ ರೂಪಿಸಿದ್ದೇನೆ? ಜೀವನ ರೂಪಿಸುವವನು ದೇವರು. ನಾನು ಜೀವನ ಹಾಳು ಮಾಡಿದ್ದೇನೆ ಎಂದು ಕೂಡ ಕೆಲವರು ಆರೋಪ ಹೊರಿಸಿದ್ದಾರೆ ಎಂದು ಉತ್ತರಿಸಿದರು. ಜನರು ನನ್ನನ್ನು ಗೇಲಿ ಮಾಡಿದ್ದಾರೆ, ನಾನು ತುಂಬಾ ವೃತ್ತಿಜೀವನವನ್ನು ಹಾಳುಮಾಡಿದ್ದೇನೆ ಎಂದಿದ್ದಾರೆ. ಆದರೆ ಪ್ರಾಮಾಣಿಕವಾಗಿ ಹೇಳುವುದಾದರೆ, ಅದು ನನ್ನ ಕೈಯಲ್ಲಿಲ್ಲ ಎಂದು ಸಲ್ಮಾನ್ ಖಾನ್ ಅವರು ಪ್ರತಿಕ್ರಿಯಿಸಿದ್ದಾರೆ. ಇದಕ್ಕೂ ಮೊದಲು, ಗಾಯಕ ಅರಿಜಿತ್ ಸಿಂಗ್ ಮತ್ತು ನಟ ವಿವೇಕ್ ಒಬೆರಾಯ್ ಅವರ ವೃತ್ತಿಜೀವನವನ್ನು ಹಾಳು ಮಾಡಿದ ಆರೋಪವನ್ನು ಸಲ್ಮಾನ್ ಖಾನ್ ಮೇಲೆ ವರಿಸಲಾಗಿತ್ತು.
ಇದನ್ನೂ ಓದಿ: ನೇಪಾಳದಲ್ಲಿ ಭುಗಿಲೆದ್ದ ಆಕ್ರೋಶ! ಬೃಹತ್ ಪ್ರತಿಭಟನೆಗೆ ಸೋಷಿಯಲ್ ಮೀಡಿಯಾ ಬ್ಯಾನ್ ಒಂದೇ ಕಾರಣವಲ್ಲ! Nepalese Citizens
(ಏಜೆನ್ಸೀಸ್)
ಬಾಸ್ ಮಾಜಿ ಸ್ಪರ್ಧಿ ಆಕಾಶದೀಪ್ ಸೇಗಲ್, ಅರಿಜಿತ್ ಸಿಂಗ್, ಸೋಮಿ ಅಲಿ ಸೇರಿದಂತೆ ಮೊದಲಾದವರು ಸಲ್ಮಾನ್ ಖಾನ್ ಮೇಲೆ ಈ ಆರೋಪ ಮಾಡಿದ್ದರು. ಇದೀಗ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಈ ಬಗ್ಗೆ ಸಲ್ಮಾನ್ ಖಾನ್ ಪರೋಕ್ಷವಾಗಿ ಉತ್ತರಿಸಿದ್ದಾರೆ. ಇನ್ನೂ ಬಿಗ್ ಬಾಸ್ 13ರ ಸ್ಪರ್ಧಿಯಾಗಿರುವ ಶೆಹ್ನಾಜ್, 2023ರಲ್ಲಿ ಸಲ್ಮಾನ್ ಖಾನ್ ಅಭಿನಯದ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. ಈ ಚಿತ್ರದಲ್ಲಿ ಸಲ್ಮಾನ್ ಖಾನ್, ಪೂಜಾ ಹೆಗ್ಡೆ ಮತ್ತು ವೆಂಕಟೇಶ್ ನಟಿಸಿದ್ದಾರೆ.