ಬೆಂಗಳೂರು: ಆಧಾರ್ಗೆ ಸಂಬಂಧಿತ ಮಾಹಿತಿ ಅಪ್ಲೋಡ್ ಮಾಡಿಕೊಳ್ಳಲು ಆನ್ಲೈನ್ನಲ್ಲಿ ಉಚಿತವಾಗಿ ಅವಕಾಶ ಕಲ್ಪಿಸಲಾಗಿದ್ದು, ನಾಳೆಯೇ ಅದು ಕೊನೆಗೊಳ್ಳಲಿದೆ. ಅರ್ಥಾತ್, ಆನ್ಲೈನ್ನಲ್ಲಿ ಉಚಿತವಾಗಿ ಆಧಾರ್ ಅಪ್ಡೇಟ್ ಮಾಡಿಕೊಳ್ಳಲು ನಾಳೆಯವರೆಗೂ ಅವಕಾಶವಿದೆ.
ನೀವು ಆಧಾರ್ ಸಂಖ್ಯೆ ಪಡೆದು ಹತ್ತು ವರ್ಷಗಳಾಗಿದ್ದಲ್ಲಿ ಹಾಗೂ ಇದುವರೆಗೂ ಯಾವುದೇ ಮಾಹಿತಿ ಅಪ್ಡೇಟ್ ಮಾಡಿಕೊಂಡಿರದಿದ್ದಲ್ಲಿ ಈ ಅವಕಾಶವನ್ನು ಉಚಿತವಾಗಿ ಬಳಸಿಕೊಳ್ಳಬಹುದು. ಅಂದಹಾಗೆ ಇದು ಡೆಮೊಗ್ರಫಿಕ್ ಡೇಟಾಗಷ್ಟೇ ಸೀಮಿತವಾಗಿರಲಿದೆ ಎಂದು ಯುಐಡಿಎಐ ತಿಳಿಸಿದೆ.
ಇದನ್ನೂ ಓದಿ: ಇನ್ನು ಹಾಡು ಕೇಳುತ್ತ ಸ್ನಾನ ಮಾಡಲ್ಲ ಎಂದು ಕ್ಷಮೆ ಕೋರಿದ ವಿದ್ಯಾರ್ಥಿನಿ!; ದಯವಿಟ್ಟು ಫೋನ್ ಹಿಂದಿರುಗಿಸಿ ಎಂದು ಮನವಿ
ಈ ಅಪ್ಡೇಟ್ಗೆ ಆಧಾರ್ ಗ್ರಾಹಕ ಸೇವಾ ಕೇಂದ್ರದಲ್ಲಿ 50 ರೂ. ಶುಲ್ಕ ವಿಧಿಸಲಾಗುತ್ತಿದೆ. ಆದರೆ ಆನ್ಲೈನ್ನಲ್ಲಿ ಉಚಿತವಾಗಿ ಮಾಡಿಕೊಳ್ಳಲು ಅವಕಾಶವಿದ್ದು, ಈ ಕೊಡುಗೆ ನಾಳೆಯೇ ಕೊನೆಗೊಳ್ಳಲಿದೆ. ಹತ್ತು ವರ್ಷಗಳ ಹಿಂದೆ ಆಧಾರ್ ಪಡೆದವರು ತಮ್ಮ ಇತ್ತೀಚಿಗಿನ ಗುರುತು, ವಾಸದ ವಿಳಾಸ ಇತ್ಯಾದಿ ಮಾಹಿತಿಗಳನ್ನು ಜೂ. 14ರ ಒಳಗೆ ಉಚಿತವಾಗಿ ಅಪ್ಡೇಟ್ ಮಾಡಿಕೊಳ್ಳಬಹುದು.
ಇದನ್ನೂ ಓದಿ: ಅವನನ್ನು ಸೋಲಿಸಿ ಎಂದು ದೇವೇಗೌಡ್ರು ಎದೆ ಬಡ್ಕಂಡ್ರು, ಆದ್ರೂ ನಾನು ಹೆಚ್ಚಿನ ಅಂತರದಲ್ಲಿ ಗೆದ್ದೆ: ಸಚಿವ ಕೆ.ಎನ್.ರಾಜಣ್ಣ
ಅಲ್ಲದೆ ಡೆಮೊಗ್ರಫಿಕ್ ಡೇಟಾ ಅಂದರೆ, ಹೆಸರು, ವಿಳಾಸ, ಜನ್ಮದಿನಾಂಕ, ಲಿಂಗ, ಮೊಬೈಲ್ಫೋನ್ ನಂಬರ್, ಇ-ಮೇಲ್ ಐಡಿ ವಿವರಗಳನ್ನು ಅಪ್ಡೇಟ್ ಮಾಡಿಕೊಳ್ಳಬಹುದು.