ದೆಹಲಿ: ಚುನಾವಣೆ ಮತ್ತು ಕರೊನಾ ಸಂಕಷ್ಟ ಕಾಲವನ್ನ ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಈ ಬಾರಿ ಬಜೆಟ್ ಮಂಡಿಸಿದೆ. ಯಾರಿಗೂ ಹೊರೆ ಏರದ ಬಜೆಟ್ ಇದಾಗಿದ್ದು. ಕೃಷಿ, ಆಭರಣಗಳ ಮೇಲಿನ ಸುಂಕ ಇಳಿಸಿ ಗುಡ್ ನ್ಯೂಸ್ ಕೊಟ್ಟಿದೆ. ನೇರ ಆದಾಯ ತೆರಿಗೆಯಲ್ಲೂ ಯಾವುದೇ ಏರಿಕೆ ಮಾಡಿಲ್ಲ. ಕೆಲ ವಸ್ತುಗಳ ಮೇಲಿನ ಸುಂಕ ಇಳಿಕೆಯಿಂದಾಗಿ ಬೆಲೆ ಇಳಿಕೆಯೂ ಆಗುವ ಸಾಧ್ಯತೆ ಇದೆ.
- ಫೋನ್ ಚಾರ್ಚರ್, ಟ್ರಾನ್ಸ್ಫಾರ್ಮರ್ಗಳ ಮೇಲೆ ಕಸ್ಟಮ್ಸ್ ಸುಂಕ ರಿಯಾಯಿತಿ
- ಕತ್ತರಿಸಿದ ಮತ್ತು ಪಾಲಿಶ್ ಮಾಡಿದ ವಜ್ರಗಳು, ರತ್ನಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ.5ಕ್ಕೆ ಇಳಿಕೆ
- ಮೆಥಾನಲ್ ಮೇಲಿನ ಅಬಕಾರಿ ಸುಂಕ ಇಳಿಕೆ
- ಎಲೆಕ್ಟ್ರಾನಿಕ್ ವಸ್ತುಗಳ ಮೇಲಿನ ದರ ಇಳಿಕೆ
- ಮುಂದಿನ ವರ್ಷದ ವರೆಗೆ ಕೃಷಿ ಸ್ಟಾರ್ಟ್ಅಪ್ಗಳಿಗೆ ತೆರಿಗೆ ವಿನಾಯ್ತಿ
- 60 ಲಕ್ಷ ಉದ್ಯೋಗ ಸೃಷ್ಟಿ ಗುರಿ
- ರಬ್ಬರ್, ಚರ್ಮದ ಉತ್ಪನ್ನಗಳ ಮೇಲಿನ ಸುಂಕ ಇಳಿಕೆ
- ಮೊಬೈಲ್ ಉತ್ಪನ್ನಗಳ ಆಮದು ಸುಂಕ ಇಳಿಕೆ