ನ್ಯೂಸ್

VIDEO| ಹಾವಿನ ಜತೆ ಸರಸವಾಡಲು ಹೋದ ಯುವಕ ಸಾವು! ಬೆಚ್ಚಿಬೀಳಿಸುತ್ತೆ ಈ ದೃಶ್ಯ

arunakunigal

ಮೈಸೂರು: ಹಾವು ಅಂದ್ರೆ ಸಾಕು ಮೈಲಿ ದೂರ ಓಡುವ ಜನರೇ ಹೆಚ್ಚು. ಆದರೆ ಇಲ್ಲೊಬ್ಬ ಯುವಕ ಕಣ್ಣಿಗೆ ಬಿದ್ದ ಹಾವನ್ನು ಹಿಡಿದು ಅದರಿಂದಲೇ ಕಚ್ಚಿಸಿಕೊಂಡು ದುರಂತ ಅಂತ್ಯಕಂಡಿದ್ದಾನೆ. ಈತ ಹಾವು ಹಿಡಿಯುತ್ತಿರುವ ಮತ್ತು ಹಾವು ಕಚ್ಚಿದ ದೃಶ್ಯ ವೈರಲ್​ ಆಗಿದೆ.

ನಗರದ ವಿದ್ಯಾರಣ್ಯಪುರಂ ನಿವಾಸಿ ಮಧು(24) ಮೃತ. ಮೈಸೂರಿನಿಂದ ಮಹದೇಶ್ವರ ಬೆಟ್ಟಕ್ಕೆ ಎಲೆಕ್ಟ್ರಿಕ್ ಕೆಲಸ ನಿಮಿತ್ತ ಸ್ನೇಹಿತರೊಂದಿಗೆ ಮಧು ಹೋಗಿದ್ದ. ಅಲ್ಲಿ ಹಾವು ಬಂದಿದ್ದು, ಅದನ್ನು ಹೆಬ್ಬಾವು ಅಂತ ಹಿಡಿದಿದ್ದಾನೆ.

ಹಾವಿನ ಬಾಲವನ್ನ ಎಡಗೈನಲ್ಲಿ ಹಿಡಿದುಕೊಂಡಿದ್ದ ಮಧು, ಅದರ ಕತ್ತನ್ನ ಬಲಗೈಯಲ್ಲಿ ಹಿಡಿಯಲು ಯತ್ನಿಸುತ್ತಿರುವಾಗಲೇ ಕೈಗೆ ಹಾವು ಕಚ್ಚಿದೆ. ಆಸ್ಪತ್ರೆಗೆ ದಾಖಲಿಸಿದರೂ ಮಧು ಬದುಕಲಿಲ್ಲ.

ವಿಷದ ಹಾವು ಎಂದು ತಿಳಿಯದನ್ನು ಹೆಬ್ಬಾವು ಅಂತ ಬೇಜವಾಬ್ದಾರಿಯಾಗಿ ಹಾವು ಹಿಡಿಯಲು ಹೋದ ಮಧು ಪ್ರಾಣ ಬಿಟ್ಟಿದ್ದಾನೆ. ಯುವಕನ ಪ್ರಾಣ ತೆಗೆದ ಹಾವನ್ನು ಕೊಳಕುಮಂಡಲ ಎನ್ನಲಾಗಿದೆ. ಇನ್ನು ಈತನಿಗೆ ಹಾವು ಕಚ್ಚುವ ವಿಡಿಯೋ ವೈರಲ್ ಆಗಿದೆ.