ಉತ್ತರಕನ್ನಡ: ಕೆಲಸಕ್ಕೆ ಬಂದ ಪೊಲೀಸ್ ಕಾನ್ಸ್ಟೇಬಲ್ವೊಬ್ಬರು ಕಚೇರಿಯಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರವಾರದ ಡಿ.ಆರ್. ಕಚೇರಿಯಲ್ಲಿ ಸಂಭವಿಸಿದೆ.
ಗುರುಪ್ರಸಾದ್ ನಾಯ್ಕ್(35) ಆತ್ಮಹತ್ಯೆ ಮಾಡಿಕೊಂಡ ಡಿಆರ್ ಸಿಬ್ಬಂದಿ. ಇವರು ಹೊನ್ನಾವರ ತಾಲೂಕಿನ ಹಳದಿಪುರ ನಿವಾಸಿ. ಬುಧವಾರ ಬೆಳಗ್ಗೆ ಕೆಲಸಕ್ಕೆಂದು ಕಚೇರಿಗೆ ಗುರುಪ್ರಸಾದ್ ಆಗಮಿಸಿದ್ದರು. ಅಲ್ಲೇ ಆತ್ಮಹತ್ಯೆ ಮಾಡಕೊಂಡಿದ್ದಾರೆ. ಸಾವಿಗೆ ಕಾರಣ ಏನೆಂದು ಗೊತ್ತಾಗಿಲ್ಲ. ಸ್ಥಳಕ್ಕೆ ಹಿರಿಯ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.