rahulgandhi 
ನ್ಯೂಸ್

ಚಾಮರಾಜನಗರದಲ್ಲಿ 24 ಮಂದಿ ದುರ್ಮರಣ: ಇದು ಸಾವೋ ಅಥವಾ ಕೊಲೆಯೋ?... ಸರ್ಕಾರಕ್ಕೆ ರಾಹುಲ್​ ಗಾಂಧಿ ತರಾಟೆ

arunakunigal

ಚಾಮರಾಜನಗರ: ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ 20ಕ್ಕೂ ಹೆಚ್ಚು ಕರೊನಾ ಸೋಂಕಿತರು ಮೃತಪಟ್ಟ ಘಟನೆ ರಾಜ್ಯ ಮಾತ್ರವಲ್ಲ, ರಾಷ್ಟ್ರಮಟ್ಟದಲ್ಲೂ ಭಾರಿ ಸದ್ದು ಮಾಡಿದೆ. ಮೃತರ ಕುಟುಂಬಸ್ಥರು ಸರ್ಕಾರ ಮತ್ತು ಜಿಲ್ಲಾಡಳಿತದ ಕಾರ್ಯವೈಖರಿಗೆ ಹಿಡಿಶಾಪ ಹಾಕುತ್ತಿದ್ದಾರೆ. ನಡುವೆ 'ಇದು ಸಾವೋ ಅಥವಾ ಕೊಲೆಯೋ' ಎಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಚಾಮರಾಜನಗರ ಆಸ್ಪತ್ರೆಯಲ್ಲಿ ಆಕ್ಸಿಜನ್​ ಕೊರತೆಯಿಂದ 20ಕ್ಕೂ ಹೆಚ್ಚು ಮಂದಿಯ ದುರಂತ ಅಂತ್ಯ ಘಟನೆ ಕುರಿತು ಟ್ವೀಟ್​ ಮೂಲಕ ಸಂತಾಪ ಸೂಚಿಸಿರುವ ರಾಹುಲ್​ ಗಾಂಧಿ, 'ಇದು ಸಾವೋ ಅಥವಾ ಕೊಲೆಯೋ?' ಎಂದು ಪ್ರಶ್ನಿಸಿದ್ದಾರೆ. 'ಆಡಳಿತ ವ್ಯವಸ್ಥೆ ಎಚ್ಚರಗೊಳ್ಳಲು ಇನ್ನೆಷ್ಟು ಸಾವು-ನೋವು ಆಗಬೇಕು' ಎಂದು ಕಿಡಿಕಾರಿದ್ದಾರೆ.